ರತ್ಲಾಮ್ (ಮಧ್ಯಪ್ರದೇಶ): ನಗರದ ವಿಂಧ್ಯವಾಸಿನಿ ಆಮ್ರಪಾಲಿ ಕಾಲೋನಿಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ನಿರ್ದಯವಾಗಿ ಕೊಂದು ಮನೆಯಂಗಳದಲ್ಲಿ ಹೂತು ಹಾಕಿದ ಘಟನೆ 2 ತಿಂಗಳ ಬಳಿಕ ಬೆಳಕಿಗೆ ಬಂದಿದೆ. ಸ್ಥಳೀಯರು ಪೊಲೀಸರಿಗೆ ನಾಪತ್ತೆ ದೂರು ನೀಡಿದ ಬಳಿಕ ಪೊಲೀಸರು ತನಿಖೆ ನಡೆಸಿ ಪ್ರಕರಣವನ್ನು ಬಯಲಿಗೆಳೆದಿದ್ದಾರೆ. ಮಾಹಿತಿ ಪ್ರಕಾರ ಕೊಲಯಾದ ಮಹಿಳೆ ಆರೋಪಿಯ ಎರಡನೇ ಪತ್ನಿಯಾಗಿದ್ದಾಳೆ.
ಕೌಟುಂಬಿಕ ಕಲಹ ಕೊಲೆಯಲ್ಲಿ ಕೊನೆ: ರತ್ಲಾಮ್ ಜಿಲ್ಲೆಯ ನಿವಾಸಿ ಸೋನು ತಲವಾಡೆ ರೈಲ್ವೇ ಇಲಾಖೆಯಲ್ಲಿ ಗ್ಯಾಂಗ್ಮನ್ ಆಗಿ ಕೆಲಸ ಮಾಡುತ್ತಿದ್ದನು. ಈತನಿಗೆ ಎರಡು ಮದುವೆಯಾಗಿದೆ. ಮೊದಲನೇ ಮದುವೆಯ ಕುರಿತು ಹೆಚ್ಚು ಮಾಹಿತಿ ಲಭ್ಯವಾಗಿಲ್ಲ. ಎರಡನೇ ಪತ್ನಿಗೆ 7 ವರ್ಷದ ಮಗ ಹಾಗೂ 4 ವರ್ಷದ ಮಗಳಿದ್ದಾರೆ. ಸೋನು ತನ್ನ ಎರಡನೇ ಪತ್ನಿಯೊಂದಿಗೆ ಸುಖ ಸಂಸಾರ ನಡೆಸುತ್ತಿದ್ದ. ಇತ್ತೀಚೆಗೆ ಇಬ್ಬರ ಮಧ್ಯೆ ವಿರಸ ಮೂಡಿದೆ. ಸೋನು ಕೋಪದಲ್ಲಿ ತನ್ನಿಬ್ಬರು ಮಕ್ಕಳು ಪತ್ನಿಯನ್ನು ಕೊಡಲಿಯಿಂದ ಕೊಲೆ ಮಾಡಿದ್ದಾನೆ. ಸ್ನೇಹಿತನ ಸಹಾಯದಿಂದ ತನ್ನ ಮನೆಯಂಗಳದಲ್ಲೇ ಮೂರು ಶವಗಳನ್ನು ಹೂತು ಹಾಕಿದ್ದಾನೆ. ಹತ್ಯಾಕಾಂಡ ಮುಗಿಸಿದ ನಂತರ, ಸೋನು ತಮ್ಮ ದೈನಂದಿನ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾನೆ.
-
Madhya Pradesh | A person murdered his wife and two children with an axe and buried them in his house in the Didinagar PS area of Ratlam. The accused is 33-34 years old and works as a gangman in Railways: Abhishek Tiwari, SP Ratlam (22.01) pic.twitter.com/ulSk7Po4VW
— ANI MP/CG/Rajasthan (@ANI_MP_CG_RJ) January 23, 2023 " class="align-text-top noRightClick twitterSection" data="
">Madhya Pradesh | A person murdered his wife and two children with an axe and buried them in his house in the Didinagar PS area of Ratlam. The accused is 33-34 years old and works as a gangman in Railways: Abhishek Tiwari, SP Ratlam (22.01) pic.twitter.com/ulSk7Po4VW
— ANI MP/CG/Rajasthan (@ANI_MP_CG_RJ) January 23, 2023Madhya Pradesh | A person murdered his wife and two children with an axe and buried them in his house in the Didinagar PS area of Ratlam. The accused is 33-34 years old and works as a gangman in Railways: Abhishek Tiwari, SP Ratlam (22.01) pic.twitter.com/ulSk7Po4VW
— ANI MP/CG/Rajasthan (@ANI_MP_CG_RJ) January 23, 2023
ಆರೋಪಿ ಬಾಯಿಯಿಂದ ಸತ್ಯ ಹೊರಬಂತು: ಸುತ್ತಮುತ್ತಲಿನ ಜನರು ಮತ್ತು ಪರಿಚಯಸ್ಥರು ಸೋನು ಪತ್ನಿ ಮತ್ತು ಮಕ್ಕಳು ಎರಡು ತಿಂಗಳಾದ್ರೂ ಕಾಣದ ಅನುಮಾನಗೊಂಡು ರತ್ಲಾಮ್ ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದರು. ಇದಾದ ಬಳಿಕ ಪೊಲೀಸರಿಗೆ ಮಹಿಳೆಯ ಗಂಡನ ಮೇಲೆ ಅನುಮಾನ ಮೂಡಿದೆ. ಹೀಗಾಗಿ ಪೊಲೀಸರು ಆರೋಪಿ ಸೋನುವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಗೊತ್ತಾಗಿದೆ. ಪೊಲೀಸರು ಭಾನುವಾರ ಸಂಜೆ ಆರೋಪಿಯ ಮನೆಗೆ ತೆರಳಿ ಅಂಗಳ ಅಗೆಯುವ ಮೂಲಕ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಮೃತದೇಹಗಳು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದ್ದು, ಮರಣೋತ್ತರ ಪರೀಕ್ಷೆಗಾಗಿ ರತ್ಲಾಮ್ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಎಸ್ಪಿ ಅಭಿಷೇಕ್ ತಿವಾರಿ ಸೇರಿದಂತೆ ಪೊಲೀಸ್ ಆಡಳಿತದ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ತನಿಖೆ ಮುಂದುವರೆದಿದೆ. ಮೃತದೇಹದ ಡಿಎನ್‌ಎ ಪರೀಕ್ಷೆ ನಡೆಯಲಿದೆ. "ಆರೋಪಿ ತನ್ನ ಸ್ನೇಹಿತನ ಸಹಾಯದಿಂದ ಮೃತದೇಹವನ್ನು ಹೂಳುವ ಕೆಲಸವನ್ನು ಮಾಡಿದ್ದಾನೆ. ಸ್ನೇಹಿತನನ್ನೂ ವಶಕ್ಕೆ ಪಡೆಯಲಾಗಿದೆ" ಎಂದು ಎಸ್ಪಿ ತಿಳಿಸಿದರು.
ಇದನ್ನೂ ಓದಿ: ಡ್ಯಾನ್ಸ್ ಕ್ಲಬ್ಗೆ ನುಗ್ಗಿ ಗುಂಡಿನ ಮಳೆಗರೆದ ಬಂದೂಕುಧಾರಿ.. 10 ಜನರ ಬರ್ಬರ ಕೊಲೆ