ಇಂದೋರ್ (ಮಧ್ಯಪ್ರದೇಶ): ಇತ್ತೀಚಿಗೆ ನಗರದಲ್ಲಿ ಮೇಕೆ ಮರಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ವಾಸ್ತವವಾಗಿ ಈ ಮೇಕೆ ಮರಿಯ ತಲೆ ಮನುಷ್ಯನ ಮುಖವನ್ನು ಹೋಲುತ್ತದೆ. ಮೇಕೆ ಮರಿಗೆ ಮಾನವನಂತಿರುವ ಮುಖದಲ್ಲಿ ಎರಡು ಕಣ್ಣುಗಳಿವೆ. ಪ್ರಸ್ತುತ ಈ ಮರಿಯು ಸಂಪೂರ್ಣ ಆರೋಗ್ಯವಾಗಿದ್ದು, ಈ ಭಾಗದ ಅನೇಕ ಜನರು ಮೇಕೆ ಸಾಕಣೆದಾರರ ಅನ್ವರ್ ಅವರ ಮನೆಗೆ ಭೇಟಿ ನೀಡುತ್ತಿದ್ದಾರೆ.
ಮಾನವನ ಮುಖ ಹೋಲುವಂತಹ ಮರಿಗೆ ಜನ್ಮ ನೀಡಿದ ಮೇಕೆ: ನಿಜವಾಗಿ ಇಂದೋರ್ ನ ಚಂದನ್ ನಗರದಲ್ಲಿ ವಾಸಿಸುತ್ತಿರುವ ಕುಟುಂಬದವರ ಮನೆಯಲ್ಲಿ ಮೇಕೆಯೊಂದು ಎರಡು ಮರಿಗಳಿಗೆ ಜನ್ಮ ನೀಡಿದೆ. ಹೌದು, ಮಾಲ್ವಿ ತಳಿಯ ಮೇಕೆ ಜನ್ಮ ನೀಡಿದ ಎರಡು ಮರಿಗಳಲ್ಲಿ ಒಂದು ಮೇಕೆಯ ತಲೆ ಮನುಷ್ಯನಂತೆ ಕಾಣುತ್ತಿದೆ. ಈ ಮೇಕೆಯ ಎರಡೂ ಕಣ್ಣುಗಳು ಒಂದೇ ಮುಂಭಾಗದಲ್ಲಿದ್ದು, ಅದರಿಂದಲೇ ಮರಿ ಎಲ್ಲ ನೋಡುತ್ತಿದೆ. ಮೇಲ್ನೋಟಕ್ಕೆ ಮೇಕೆಗೆ ಮಾನವ ಅಥವಾ ಕೋತಿಯ ಮುಖದಂತೆ ಇರುವುದು ಕಂಡು ಬರುತ್ತದೆ. ಅದರ ಎರಡೂ ಕಣ್ಣುಗಳು ಒಂದಕ್ಕೊಂದು ಅಂಟಿಕೊಂಡಂತೆ ಕಾಣಿಸುತ್ತಿದೆ. ಆದರೆ, ಈ ಮೇಕೆ ಮರಿ ಸಂಪೂರ್ಣವಾಗಿ ಆರೋಗ್ಯವಾಗಿದೆ. ಈ ಮೇಕೆ ಮರಿ ವೀಕ್ಷಿಸಿದ ಹಲವರಲ್ಲಿ ಅಚ್ಚರಿ ಮೂಡಿದೆ. ಜೊತೆಗೆ ಮರಿ ನೋಡಲು ಅನೇಕರು, ಚಂದನ್ ನಗರದಲ್ಲಿ ವಾಸಿಸುತ್ತಿರುವ ಅನ್ವರ್ ಮನೆಗೆ ಬರುತ್ತಿದ್ದಾರೆ.
ಮೇಕೆ ಮರಿಗೆ ರಾಣಿ ಎಂದು ಹೆಸರಿಟ್ಟ ಮಾಲೀಕ: ಅನ್ವರ್ ಖಾನ್ ಮೇಕೆ ಸಾಕಣೆ ಕೆಲಸ ಮಾಡುತ್ತಿದ್ದು, ಇದರೊಂದಿಗೆ ಕೂಲಿ ಕೆಲಸಕ್ಕೆ ಹೋಗುತ್ತಾನೆ. ಬುಧವಾರ ಬೆಳಗ್ಗೆ 6ಕ್ಕೆ ಅವರ ಮೇಕೆ ಎರಡು ಮರಿಗಳಿಗೆ ಜನ್ಮ ನೀಡಿದೆ. ಒಂದು ಮೇಕೆ ಮರಿ ಸಾಮಾನ್ಯವಾಗಿದ್ದರೆ, ಮತ್ತೊಂದು ಮೇಕೆ ಮುಖ ವಿಚಿತ್ರವಾಗಿದೆ. ಈ ಮೇಕೆ ಮರಿ ಕೋತಿ ಅಥವಾ ಮನುಷ್ಯನಂತೆ ಕಾಣುತ್ತದೆ ಮತ್ತು ಸಂಪೂರ್ಣವಾಗಿ ಆರೋಗ್ಯವಾಗಿದೆ. ಕುಟುಂಬದವರು ಈ ಮೇಕೆ ಮರಿಗೆ ರಾಣಿ ಎಂದು ಹೆಸರಿಡಲಾಗಿದೆ. ಮಧ್ಯಪ್ರದೇಶದಲ್ಲಿ ಈ ರೀತಿ ಮೇಕೆ ಮರಿ ಕಾಣಿಸಿಕೊಂಡಿದ್ದು, ಇದು ಎರಡನೇ ಬಾರಿ. ಈ ಹಿಂದೊಮ್ಮೆ ವಿದಿಶಾದಲ್ಲಿ ಮಾನವ ಮುಖವುಳ್ಳ ಮೇಕೆ ಮರಿ ಜನಿಸಿತ್ತು.
ಪ್ರತ್ಯೇಕ ಘಟನೆ, ಹಿಂದೆಯೂ ಮನುಷ್ಯನ ಮುಖ ಹೋಲುವ ಮರಿಗೆ ಜನ್ಮ ನೀಡಿದ್ದ ಮೇಕೆ: ಕೆಲವೊಮ್ಮೆ ವಿಚಿತ್ರ ಘಟನೆಗಳು ನಮ್ಮನ್ನು ಬೆರಗುಗೊಳಿಸುತ್ತವೆ. ಅಸಹಜ ರೀತಿಯ ದೃಶ್ಯಗಳು ನಂಬಲು ಅಸಾಧ್ಯ ಎಂಬಂತೆ ಮಾಡುತ್ತವೆ. ಇದಕ್ಕೆ ನಿದರ್ಶನ ಎಂಬಂತೆ ಈ ಹಿಂದೆ, ಮಧ್ಯಪ್ರದೇಶದಲ್ಲಿ ಮೇಕೆಯೊಂದು ಮನುಷ್ಯನ ಮುಖ ಹೋಲುವಂತ ಮರಿಗೆ ಜನ್ಮ ನೀಡಿತ್ತು. ವಿದಿಶಾದ ಸಿರೊಂಜ್‌ನ ಸೆಮಲ್ಖೇಡಿ ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ಮರಿಯ ಸಂಪೂರ್ಣ ರೂಪ ಮಾನವನಂತೆ ಇತ್ತು. ಅಷ್ಟೇ ಏಕೆ? ಧ್ವನಿ ಕೂಡ ಮನುಷ್ಯನ ಧ್ವನಿಯಂತೆ ಇತ್ತು.
ಇದನ್ನೂ ಓದಿ: ಇಂದಿನಿಂದ ಬೆಂಗಳೂರಲ್ಲಿ 'ಕೇಕ್ ಶೋ' ಆರಂಭ: ಸಂಸತ್ತಿನ ಸೊಬಗಿನಿಂದ ಹಿಡಿದು ಚಂದ್ರಯಾನ ಮಾದರಿ ಕೇಕ್ ಪ್ರದರ್ಶನ