ವಿದಿಶಾ (ಮಧ್ಯಪ್ರದೇಶ): ಮಧ್ಯಪ್ರದೇಶದ ವಿದಿಶಾ ಜಿಲ್ಲೆಯ ಗಯಾರಸ್ಪುರದ 83 ಜನರು ಹರಿದ್ವಾರದ ಕುಂಭ ಮೇಳದಿಂದ ಹಿಂದಿರುಗಿದ್ದು ಇವರಲ್ಲಿ 60 ಜನರಿಗೆ ಕೊರೊನಾ ವಕ್ಕರಿಸಿದೆ.
ವರದಿಗಳ ಪ್ರಕಾರ, ಕುಂಭಮೇಳಕ್ಕೆ ತೆರಳಿದ್ದ 83 ಜನರಲ್ಲಿ 60 ಜನರಲ್ಲಿ ಕೊರೊನಾ ಕಾಣಿಸಿಕೊಂಡಿದೆ. ಉಳಿದಂತೆ ಇನ್ನುಳಿದ 22 ಜನರು ಸಂಪರ್ಕಕ್ಕೆ ಸಿಕ್ಕಿಲ್ಲ. ಈ ಘಟನೆ ನಂತರ, ಹರಿದ್ವಾರದಲ್ಲಿನ ಮಹಾಕುಂಭಕ್ಕೆ ಭೇಟಿ ನೀಡಿದ ಜನರನ್ನು ಪತ್ತೆಹಚ್ಚಲು, ಹಾಗೂ ಕೊರೊನಾ ಪರೀಕ್ಷಿಸಿ ಮತ್ತು ಅವರನ್ನು ಸಂಪರ್ಕಿಸಲು ಆದೇಶಿಸಿದೆ.
ಯಾತ್ರಾರ್ಥಿಗಳು ವಿವಿಧ ಬಸ್‌ಗಳಲ್ಲಿ ಏಪ್ರಿಲ್ 11 ರಿಂದ 15 ರವರೆಗೆ ಹರಿದ್ವಾರಕ್ಕೆ ತೆರಳಿದ್ದರು. ಅವರಲ್ಲಿ, ಕುಂಭಮೇಳದಲ್ಲಿ ಭಾಗವಹಿಸಿದ ನಂತರ ಹಿಂದಿರುಗಿದ 22 ಜನರು ಈ ಪ್ರದೇಶದಿಂದ ನಾಪತ್ತೆಯಾಗಿದ್ದರೆ, 60 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ.