ETV Bharat / bharat

ಹಸಿವು ತಾಳದೆ ಪದೆ ಪದೇ ಭಿಕ್ಷೆ ಬೇಡಿದ ಬಾಲಕ.. ಕತ್ತು ಹಿಸುಕಿ ಕೊಂದೇಬಿಟ್ಟ ಹೆಡ್​ ಕಾನ್ಸ್​ಟೇಬಲ್​!

ಆ ಬಾಲಕ ಹಸಿವಿನಿಂದ ಬಳಲುತ್ತಿದ್ದ. ಹೀಗಾಗಿ ಅಲ್ಲಿದ್ದ ಪೊಲೀಸಪ್ಪನ ಬಳಿ ತನ್ನ ಹಸಿವು ನೀಗಿಸಿಕೊಳ್ಳಲು ಹಣಕ್ಕಾಗಿ ಭಿಕ್ಷೆ ಬೇಡಿದ್ದಾನೆ. ಸದ್ಯ ನನ್ನ ಬಳಿ ಹಣವಿಲ್ಲವೆಂದು ಪೊಲೀಸಪ್ಪ ಹೇಳಿ ಕಳಿಸಿದ್ದಾಋಏ. ಆದ್ರೂ ಸಹಿತ ಆ ಬಾಲಕ ಪದೇ ಪದೇ ಹಣ ಕೇಳಿದ್ದಾನೆ. ಇದರಿಂದ ಕೋಪಗೊಂಡ ಪೊಲೀಸ್​ ಬಾಲಕನ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಈ ಘಟನೆ ಮಧ್ಯಪ್ರದೇಶದ ದಾತಿಯಾದಲ್ಲಿ ನಡೆದಿದೆ.

author img

By

Published : May 12, 2022, 12:57 PM IST

MP cop kills boy for asking for money to buy food  Cop kills boy in Datia  Madhya Pradesh crime news  ಮಧ್ಯಪ್ರದೇಶದಲ್ಲಿ ಊಟಕ್ಕಾಗಿ ಹಣ ಕೇಳಿದ ಬಾಲಕನನ್ನು ಕೊಲೆ ಮಾಡಿದ ಪೊಲೀಸ್​ ದಾತಿಯಾದಲ್ಲಿ ಬಾಲಕನನ್ನು ಕೊಲೆ ಮಾಡಿದ ಪೊಲೀಸ್​ ಮಧ್ಯಪ್ರದೇಶ ಅಪರಾಧ ಸುದ್ದಿ
ಹುಡುಗನನ್ನು ಕತ್ತು ಹಿಸುಕಿ ಕೊಲೆ ಮಾಡಿದ ಪೊಲೀಸಪ್ಪ

ದಾತಿಯಾ (ಮಧ್ಯಪ್ರದೇಶ): ದಾತಿಯಾ ಜಿಲ್ಲೆಯಲ್ಲಿ ಮನಕಲುಕುವ ಘಟನೆಯೊಂದು ಬೆಳಕಿಗೆ ಬಂದಿದೆ. ರಥಯಾತ್ರೆಯ ಸಂಭ್ರಮ ಭರ್ಜರಿಯಾಗಿ ನಡೆದಿದ್ದ ವೇಳೆ ಹಸಿವಿನಿಂದ ಬಳಲುತ್ತಿದ್ದ ಬಾಲಕನೋರ್ವ ಕೊಲೆಗೀಡಾಗಿದ್ದಾನೆ. ಆಹಾರ ಖರೀದಿಸಲು ಪದೆ ಪದೇ ಹಣ ಕೇಳಿದ್ದ ಆರು ವರ್ಷದ ಬಾಲಕನನ್ನು ಹೆಡ್​ ಕಾನ್ಸ್​​ಟೇಬಲ್​ವೋರ್ವ ಕತ್ತುಹಿಸುಕಿ ಕೊಲೆ ಮಾಡಿದ್ದಾನೆ. ಪೊಲೀಸ್ ಕಾನ್ಸ್‌ಟೇಬಲ್ ರವಿ ಶರ್ಮಾ ಕೊಲೆ ಆರೋಪಿ.

ಏನಿದು ಘಟನೆ.. ಕಳೆದ ಗುರುವಾರದಂದು ದತಿಯಾದಲ್ಲಿ ರಥಯಾತ್ರೆ ನಡೆಯುತ್ತಿತ್ತು. ರಥಯಾತ್ರೆ ಹಿನ್ನೆಲೆ ಪೊಲೀಸ್​ ಪಡೆಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಈ ಪಡೆಯಲ್ಲಿ ಪೊಲೀಸ್ ಹೆಡ್​ ಕಾನ್ಸ್‌ಟೇಬಲ್ ರವಿ ಶರ್ಮಾ ಸಹ ಕಾರ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಹಸಿವು ತಾಳಲಾರದೇ ಬಾಲಕನೊಬ್ಬ ಹೆಡ್​ ಕಾನ್ಸ್‌ಟೇಬಲ್ ಶರ್ಮಾ ಬಳಿ ತೆರಳಿ ಹಣಕ್ಕಾಗಿ ಭಿಕ್ಷೆ ಬೇಡಿದ್ದಾನೆ. ಶರ್ಮಾ ಮೊದಲು ಆ ಬಾಲಕನನ್ನು ವಾಪಸ್​ ಕಳುಹಿಸಿದ್ದಾನೆ. ಆದ್ರೂ ಸಹ ಆ ಬಾಲಕ ಪದೆ ಪದೇ ಶರ್ಮಾ ಬಳಿ ಬಂದು ಭಿಕ್ಷೆ ಬೇಡುತ್ತಿದ್ದನು. ಇದರಿಂದ ಕೋಪಗೊಂಡ ಹೆಡ್​ ಕಾನ್ಸ್‌ಟೇಬಲ್ ಶರ್ಮಾ ಅವರು ಬಾಲಕನ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಕೊಲೆ ಬಳಿಕ ಬಾಲಕನ ಶವವನ್ನು ಗ್ವಾಲಿಯಾರ್​ನ ನಿರ್ಜನ ಪ್ರದೇಶದಲ್ಲಿ ಎಸೆದು ಏನು ಅರಿಯದಂತೆ ಇದ್ದನು ಎಂದು ಪೊಲೀಸ್ ವರಿಷ್ಠಾಧಿಕಾರಿ ಅಮನ್ ಸಿಂಗ್ ರಾಥೋಡ್ ಹೇಳಿದ್ದಾರೆ.

ಓದಿ: ಲೋಕೋಪಯೋಗಿ ಇಂಜಿನಿಯರ್ ಪರೀಕ್ಷೆ ಅಕ್ರಮ: ಆರೋಪಿ ರುದ್ರಗೌಡ 10 ದಿನ ಪೊಲೀಸ್ ವಶಕ್ಕೆ

ಬಾಲಕನ ಶವ ಪತ್ತೆ: ದಾತಿಯಾ ನಿವಾಸಿ ಸಂಜೀವ್ ಸೇನ್ ತನ್ನ ಮಗ ಮಯಾಂಕ್ (6 ವರ್ಷ)ನನ್ನು ಮೇ 5 ರಂದು ಯಾರೋ ಅಪರಿಚಿತ ವ್ಯಕ್ತಿ ಕಿಡ್ನ್ಯಾಪ್​ ಮಾಡಿದ್ದಾರೆ ಎಂದು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಾಹಿತಿ ಕಲೆಹಾಕಲು ತನಿಖೆ ಆರಂಭಿಸಿದ್ದರು. ಈ ವೇಳೆ ಝಾನ್ಸಿ ರಸ್ತೆ ಪೊಲೀಸ್ ಠಾಣಾ ವ್ಯಾಪ್ತಿಯ ಗ್ವಾಲಿಯರ್‌ನ ವಿವೇಕಾನಂದ ಚೌರಾಹ ಪ್ರದೇಶದಲ್ಲಿ ಬಾಲಕನ ಶವ ಪತ್ತೆಯಾಗಿದೆ. ಈ ಬಾಲಕನ ಶವ ಮಯಾಂಕ್​ನದ್ದು ಎಂದು ಗುರುತಿಸಲಾಯಿತು ಎಂದು ಪೊಲೀಸ್​ ಅಧಿಕಾರಿ ತಿಳಿಸಿದರು.

ಆರೋಪಿ ಸಿಕ್ಕಿಬಿದ್ದಿದ್ದು ಹೇಗೆ?: ಬಾಲಕ ನಾಪತ್ತೆಯಾಗಿದ್ದ ಪ್ರದೇಶದ ಸಿಸಿಟಿವಿ ದೃಶ್ಯಾವಳಿಯಲ್ಲಿ ವ್ಯಕ್ತಿಯೊಬ್ಬರು ಅನುಮಾನಾಸ್ಪದ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಪೊಲೀಸರ ಗಮನಕ್ಕೆ ಬಂದಿತ್ತು. ಆ ವ್ಯಕ್ತಿಯನ್ನು ಪೊಲೀಸ್ ಹೆಡ್ ಕಾನ್ಸ್​ಟೇಬಲ್ ರವಿ ಶರ್ಮಾ ಎಂದು ಗುರುತಿಸಲಾಗಿದೆ. ಕೂಡಲೇ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಾಗ ಆತ ತಪ್ಪೊಪ್ಪಿಕೊಂಡಿದ್ದಾರೆ.

ಮಾನಸಿಕ ಒತ್ತಡ: ಕಳೆದ ಹಲವು ತಿಂಗಳಿಂದ ಶರ್ಮಾ ಮಾನಸಿಕ ಒತ್ತಡ ಮತ್ತು ಖಿನ್ನತೆಯಿಂದ ಬಳಲುತ್ತಿದ್ದಾರೆ. ಈ ವೇಳೆ ಬಾಲಕ ನಿರಂತರವಾಗಿ ಹಣ ಕೇಳಿದಾಗ ಸಿಟ್ಟಿಗೆದ್ದಿದ್ದಾರೆ. ಕೋಪದಲ್ಲಿ ಬಾಲಕನನ್ನು ಪೊಲೀಸ್​ ವಾಹನದ ಹಿಂಬದಿ ಕರೆದೊಯ್ದು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಬಳಿಕ ಆ ಶವವನ್ನು ಕಾರಿನಲ್ಲಿ ಇಟ್ಟುಕೊಂಡು ಸುಮಾರು 70 ಕಿ.ಮೀ ದೂರದ ಗ್ವಾಲಿಯಾರ್ನ ನಿರ್ಜನ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಎಸೆದಿದ್ದಾರೆ ಎಂದು ಆರೋಪಿ ವಿಚಾರಣೆ ವೇಳೆ ಹೇಳಿದ್ದಾರೆ ಅಂತಾ ಎಸ್ಪಿ ರಾಥೋಡ್ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.