ದಾಮೊಹ್ (ಮಧ್ಯಪ್ರದೇಶ) : ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ಹಿರಿಯ ನಾಯಕ ರಾಜಾ ಪಟೇರಿಯಾ ಅವರನ್ನು ಇಂದು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಧ್ಯಪ್ರದೇಶದ ಹಿರಿಯ ಕಾಂಗ್ರೆಸ್ ನಾಯಕ ರಾಜಾ ಪಟೇರಿಯಾ ಅವರು ಸೋಮವಾರದಂದು ಪನ್ನಾ ಜಿಲ್ಲೆಯ ತಹಸಿಲ್ನಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವಾಗ ಭವಿಷ್ಯದಲ್ಲಿ ಸಂವಿಧಾನ, ಅಲ್ಪಸಂಖ್ಯಾತರು ಹಾಗು ದಲಿತರನ್ನ ಉಳಿಸಲು ಮೋದಿಯನ್ನು ಕೊಲ್ಲಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
-
Damoh, Madhya Pradesh | Congress leader and former minister Raja Pateria detained by Panna Police from his residence, in connection with his alleged ‘kill Modi’ remarks. FIR was registered against him in Pawai of Panna yesterday. pic.twitter.com/Q62OUvGuM1
— ANI (@ANI) December 13, 2022 " class="align-text-top noRightClick twitterSection" data="
">Damoh, Madhya Pradesh | Congress leader and former minister Raja Pateria detained by Panna Police from his residence, in connection with his alleged ‘kill Modi’ remarks. FIR was registered against him in Pawai of Panna yesterday. pic.twitter.com/Q62OUvGuM1
— ANI (@ANI) December 13, 2022Damoh, Madhya Pradesh | Congress leader and former minister Raja Pateria detained by Panna Police from his residence, in connection with his alleged ‘kill Modi’ remarks. FIR was registered against him in Pawai of Panna yesterday. pic.twitter.com/Q62OUvGuM1
— ANI (@ANI) December 13, 2022
ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕೂಡ ಆಗಿತ್ತು. ಇದರ ಬೆನ್ನಲ್ಲೇ ಪಟೇರಿಯಾ ವಿರುದ್ಧ ಪನ್ನಾ ಜಿಲ್ಲೆಯ ಪೊವೈ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರಂತೆ ಇಂದು ಬೆಳಗ್ಗೆ ದಾಮೋಹ್ ಜಿಲ್ಲೆಯಲ್ಲಿರುವ ಅವರ ನಿವಾಸದಲ್ಲಿ ರಾಜಾ ಪಟೇರಿಯಾ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿ ವಿರುದ್ಧ ಮಧ್ಯಪ್ರದೇಶ ಕಾಂಗ್ರೆಸ್ ನಾಯಕನ ವಿವಾದಾತ್ಮಕ ಹೇಳಿಕೆ!