ETV Bharat / bharat

ಕಾಂಗ್ರೆಸ್​ ‘ಸರ್ಪ್’ ಪಕ್ಷವಾಗಿ ಮಾರ್ಪಟ್ಟಿದೆ, ಜಿನ್ನಾ ಹೆಜ್ಜೆಗಳನ್ನ ಅನುಸರಿಸುತ್ತಿದೆ: ಶಿವರಾಜ್ ಸಿಂಗ್ ಚೌಹಾಣ್​ ಆರೋಪ - Assam poll latest news

ರಾಹುಲ್ ಗಾಂಧಿ ಅಸ್ಸೋಂ, ಬಂಗಾಳ ಮತ್ತು ಕೇರಳದಲ್ಲಿ "ವಿಭಜಕ ಶಕ್ತಿಗಳೊಂದಿಗೆ" ಮೈತ್ರಿ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಮುಹಮ್ಮದ್ ಅಲಿ ಜಿನ್ನಾ ಅವರ ಹೆಜ್ಜೆಗಳನ್ನು ಅನುಸರಿಸುತ್ತಿದೆ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್​​ ಆರೋಪಿಸಿದರು.

ಎಂಪಿ ಸಿಎಂ ಶಿವರಾಜ್ ಸಿಂಗ್ ಚೌಹಾನ್
ಎಂಪಿ ಸಿಎಂ ಶಿವರಾಜ್ ಸಿಂಗ್ ಚೌಹಾನ್
author img

By

Published : Mar 16, 2021, 9:19 AM IST

ದುಲಿಯಾಜನ್ (ಅಸ್ಸೋಂ): ಅಸ್ಸೋಂ ವಿಧಾನಸಭಾ ಚುನಾವಣೆಯಲ್ಲಿ ಎಐಯುಡಿಎಫ್ ಜೊತೆಗಿನ ಮೈತ್ರಿ ಕುರಿತು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್​​ ಸೋಮವಾರ ಕಾಂಗ್ರೆಸ್ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಚೌಹಾಣ್​, ನೆಹರೂ - ಗಾಂಧಿ ಕುಟುಂಬದ ಮೂವರು ಕಾಂಗ್ರೆಸ್ ನಾಯಕರ ಹೆಸರಿನ ಮೊದಲ ವರ್ಣಮಾಲೆಗಳನ್ನು ಬಳಸಿ (ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ) ಕಾಂಗ್ರೆಸ್​ ನಾಯಕ ಮೇಲೆ ವಾಗ್ದಾಳಿ ನಡೆಸಿದರು. ರಾಹುಲ್ ಗಾಂಧಿ ಅಸ್ಸೋಂ, ಬಂಗಾಳ ಮತ್ತು ಕೇರಳದಲ್ಲಿ "ವಿಭಜಕ ಶಕ್ತಿಗಳೊಂದಿಗೆ" ಮೈತ್ರಿ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಮುಹಮ್ಮದ್ ಅಲಿ ಜಿನ್ನಾ ಅವರ ಹೆಜ್ಜೆಗಳನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಮತ್ತು ರಾಹುಲ್​ ಅವರ ವಿಭಜಕ ಮಾರ್ಗವನ್ನು ಅಸ್ಸೋಂ ಮತ್ತು ದೇಶದ ಜನರು ಸ್ವೀಕರಿಸುವುದಿಲ್ಲ. ಕಾಂಗ್ರೆಸ್ ಎಸ್ - ಸೋನಿಯಾ, ಆರ್ - ರಾಹುಲ್, ಪಿ - ಪ್ರಿಯಾಂಕಾ ಸೇರಿ ಸರ್ಪ್ (ಹಿಂದಿಯಲ್ಲಿ 'ಸರ್ಪ್' ಎಂದರೆ ಸರ್ಪ) ಪಕ್ಷವಾಗಿ ಮಾರ್ಪಟ್ಟಿದೆ ಎಂದು ಕಿಡಿಕಾರಿದರು.

ಒಂದು ಕಡೆ, ರಾಹುಲ್​ ಸಮುದ್ರದಲ್ಲಿ ಸ್ನಾನ ಮಾಡುತ್ತಿದ್ದರೆ, ಮತ್ತೊಂದೆಡೆ, ಪ್ರಿಯಾಂಕಾ ಆಫ್ - ಸೀಸನ್‌ನಲ್ಲಿ ಚಹಾ ತೋಟಗಳಲ್ಲಿ ಎಲೆಗಳನ್ನು ಕಿತ್ತರು. ಇದನ್ನೆಲ್ಲ ನೋಡಿದರೆ ಯಾವುದೋ ಚಿತ್ರದ ಚಿತ್ರೀಕರಣ ನಡೆಯುತ್ತಿರುವಂತೆ ತೋರುತ್ತಿದೆ ಎಂದು ಲೇವಡಿ ಮಾಡಿದರು.

ಇದನ್ನೂ ಓದಿ: ರೈತರ ಹಕ್ಕುಗಳ ಕುರಿತ ವಿಶ್ವಸಂಸ್ಥೆ ಘೋಷಣೆ ಉಲ್ಲಂಘನೆ: ಸಂಯುಕ್ತ ಕಿಸಾನ್​ ಮೋರ್ಚಾ ಆರೋಪ

ಕಾಂಗ್ರೆಸ್ ಅಸ್ಸೋಂಗೆ ಹಸಿವು, ನಿರುದ್ಯೋಗ, ಬಡತನವನ್ನು ನೀಡಿತು. ಇದು ಅಸ್ಸೋಂ ಪ್ರಗತಿಗೆ ಅವಕಾಶ ನೀಡಲಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಸರ್ಬಾನಂದ ಸೋನೊವಾಲ್ ಸರ್ಕಾರವು ಅಸ್ಸೋಂ ಅನ್ನು ಸಂಪೂರ್ಣವಾಗಿ ಬದಲಿಸಿದೆ ಮತ್ತು ಅಭಿವೃದ್ಧಿ ಮಾಡಿದೆ ಎಂದರು.

ಎ - ಅದ್ಭುತ, ಇಲ್ಲಿ ಸಾರ್ವಜನಿಕರು ಅದ್ಭುತವಾಗಿದ್ದಾರೆ. ಎಸ್-ಆತ್ಮ, ಅಸ್ಸೋಂ ಭಾರತದ ಆತ್ಮ. ಎಸ್-ಸ್ಟ್ರಾಂಗ್, ಅಸ್ಸೋಂನ ಜನರು ಧೈರ್ಯಶಾಲಿಗಳು. ಎ-ಸಾಮರ್ಥ್ಯ, ಅಸ್ಸೋಂಗೆ ಅಪಾರ ಸಾಮರ್ಥ್ಯವಿದೆ. ಎಂ-ಏಕಶಿಲೆ, ಅಸ್ಸೋಂ ಸಂಕೇತವಾಗಿದೆ ದೇಶದ ಸಮಗ್ರತೆ ಎಂದು ಇದೇ ವೇಳೆ ಬಣ್ಣಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.