ನೆಲ್ಲೂರು(ಆಂಧ್ರಪ್ರದೇಶ): ಜನರ ಮೇಲೆ ಸಿನಿಮಾಗಳ ಪ್ರಭಾವ ತುಂಬಾ ಹೆಚ್ಚುತ್ತಿದೆ. ಸಿನಿಮಾದಲ್ಲಿ ಬಳಸಿದ ಕೆಲ ಐಡಿಯಾಗಳನ್ನು ಕೆಲವರು ನಿಜ ಜೀವನದಲ್ಲೂ ಅದನ್ನೇ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ತೋರಿಸಿದಂತೆ ನಾಯಕ ತಾನು ಸಿಬಿಐ ಅಧಿಕಾರಿ ಎಂದು ನಂಬಿಸಿ ಆಭರಣ ಅಂಗಡಿಯಲ್ಲಿದ್ದ ವಸ್ತುಗಳನ್ನೆಲ್ಲ ಕದಿಯುತ್ತಾನೆ. ಈ ಸಿನಿಮಾದಲ್ಲಿ ನಾಯಕ ಯಶಸ್ಸು ಸಹ ಕಾಣುತ್ತಾನೆ. ಆದರೆ, ಇಲ್ಲೊಂದು ಗ್ಯಾಂಗ್ ಇದೇ ರೀತಿ ಮಾಡಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿರುವ ಘಟನೆ ನಗರದಲ್ಲಿ ನಡೆದಿದೆ.
ನೆಲ್ಲೂರು ಜಿಲ್ಲೆಯಲ್ಲಿ ಕಳ್ಳರ ತಂಡವೊಂದು ಬೆಂಗಳೂರು ಜಾರಿ ನಿರ್ದೇಶನಾಲಯ ಹೆಸರಲ್ಲಿ ಭಾರಿ ಕಳ್ಳತನಕ್ಕೆ ಯೋಜನೆ ರೂಪಿಸಿದೆ. ನೆಲ್ಲೂರು ಕಾಕರ್ಲಾವರಿ ಸ್ಟ್ರೀಟ್‌ನ ಲಾವಣ್ಯ ಜ್ಯುವೆಲರ್ಸ್‌ನಲ್ಲಿ ಯೋಜನೆ ಕಾರ್ಯಗತಗೊಳಿಸಲು ನಿರ್ಧರಿಸಿದರು. ತಪಾಸಣೆ ಹೆಸರಲ್ಲಿ ದಾಳಿ ನಡೆಸಿದ ಕಳ್ಳರು ಸುಮಾರು 12 ಕೆಜಿ ಚಿನ್ನ ಲೂಟಿ ಮಾಡಲು ಯೋಜಿಸಿದ್ದರು.
ಇವರ ಚಲನವಲನಗಳ ಮೇಲೆ ಅಂಗಡಿ ಮಾಲೀಕರು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ನಕಲಿ ವೇಷಾಧರಿ ಅಧಿಕಾರಿಗಳನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ, ಕಳ್ಳರ ವಿವಿಧ ರೀತಿಯ ಹೇಳಿಕೆಗಳನ್ನು ನೀಡಿ ಸಿಕ್ಕಿಬಿದ್ದಿದ್ದಾರೆ.
ಆರೋಪಿಗಳನ್ನು ಹೊರಗೆ ತರುವ ವೇಳೆ ಸ್ಥಳೀಯರು ದಾಳಿ ಮಾಡಿದ್ದಾರೆ. ಪೊಲೀಸರ ಎದುರೇ ಕಳ್ಳರ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ಪೊಲೀಸರ ಮಧ್ಯಪ್ರವೇಶಿಸಿ ಆರೋಪಿಗಳನ್ನು ಪೊಲೀಸ್ ಠಾಣೆಗೆ ಕರೆದೊಯ್ದರು. ಈ ದರೋಡೆಯಲ್ಲಿ ಆರು ಮಂದಿ ಭಾಗಿಯಾಗಿದ್ದರು. ಸಂಪೂರ್ಣ ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಓದಿ: ದೇವರಿಗೆ ಕೈ ಮುಗಿದು 3 ಹಣದ ಹುಂಡಿ, 2 ಘಂಟೆ ಕದ್ದೊಯ್ದ ಕಳ್ಳ: ವಿಡಿಯೋ