ETV Bharat / bharat

ಮನಕಲಕುವ ಘಟನೆ.. ಮರಿ ಸತ್ತಿದ್ರೂ, ಮೂರು ದಿನದಿಂದ ತನ್ನೊಂದಿಗೆ ಇರಿಸಿಕೊಂಡು ರೋಧಿಸುತ್ತಿರುವ ತಾಯಿ!

ಮರದಿಂದ ಬಿದ್ದ ಮರಿ ಕೋತಿವೊಂದು ಮೂರು ದಿನಗಳ ಹಿಂದೆ ಸಾವನ್ನಪ್ಪಿದ್ದು, ಅದರ ಮೃತದೇಹವನ್ನಿಟ್ಟುಕೊಂಡು ತಾಯಿ ಕೋತಿ ತಿರುಗಾಡುತ್ತಿದೆ. ಅದರ ಆರ್ತನಾದ ಮನಕಲಕುವಂತಿದೆ.

Mother Monkey
Mother Monkey
author img

By

Published : Oct 12, 2021, 3:36 PM IST

ಅನಂತಪುರ(ಆಂಧ್ರಪ್ರದೇಶ): ಕರುಳಿನ ಬಂಧವೇ ಅಂತಹದ್ದು. ತಾಯಿಯ ಮಮತೆಗೆ ಸರಿಸಾಟಿಯಾದ ಇನ್ನೊಂದು ಜೀವಿ ಇಡೀ ಪ್ರಪಂಚದಲ್ಲಿ ಮತ್ತೊಂದಿಲ್ಲ ಎಂಬ ಮಾತಿದೆ. ಈಗಾಗಲೇ ಅಂತಹ ಅನೇಕ ಜ್ವಲಂತ ಉದಾಹರಣೆಗಳು ನಮ್ಮ ಮುಂದೆ ನಡೆದು ಹೋಗಿದ್ದು, ಸದ್ಯ ಮತ್ತೊಂದು ಮನಕಲಕುವ ದೃಶ್ಯ ಸೆರೆಯಾಗಿದೆ.

ತನ್ನ ಮರಿ ಸತ್ತಿದ್ರೂ ಕೂಡ ತಾಯಿ ಕೋತಿ ಕಳೆದ ಮೂರು ದಿನಗಳಿಂದ ಅದರ ಮೃತದೇಹವನ್ನು ತನ್ನೊಂದಿಗೆ ಇರಿಸಿಕೊಂಡು ರೋಧಿಸುತ್ತಿದೆ. ಈ ಮನಕಲಕುವ ಘಟನೆ ನಡೆದಿರುವುದು ಆಂಧ್ರಪ್ರದೇಶದ ಅನಂತಪುರದ ಮುಡಿಗಬ್ಬ ಮಂಡಲದಲ್ಲಿ. ಮೂರು ದಿನಗಳ ಹಿಂದೆ ಮರಿ ಕೋತಿವೊಂದು ಮರದಿಂದ ಬಿದ್ದು ಸಾವನ್ನಪ್ಪಿದೆ. ಈ ವೇಳೆ ಕೆಲ ಕೋತಿಗಳು ಅಲ್ಲಿಗೆ ಬಂದು ಮರಿ ಸತ್ತಿರುವುದನ್ನ ನೋಡಿ, ಸ್ಥಳದಿಂದ ಹೊರಟುಹೋಗಿವೆ. ಆದರೆ ಮಗುವಿನ ಮೇಲಿನ ಪ್ರೀತಿಗೆ ಮಮ್ಮಲ ಮರುಗುತ್ತಿರುವ ತಾಯಿ ಕೋತಿ ಮಾತ್ರ ಅದರ ದೇಹದ ಮುಂದೆ ಹತ್ತಾರು ಗಂಟೆಗಳ ಕಾಲ ರೋಧಿಸಿ, ನಂತರ ಅದರ ದೇಹವನ್ನಿಟ್ಟುಕೊಂಡು ಅತ್ತಿಂದಿತ್ತ ದಿಕ್ಕು ತೋಚದಂತೆ ತಿರುಗಾಡುತ್ತಿದೆ.

ಮರಿ ಸಾವನ್ನಪ್ಪಿದ್ದಕ್ಕೆ ಮೂಕ ಪ್ರಾಣಿಯ ರೋಧನೆ

ಇದನ್ನೂ ಓದಿರಿ: ಮಕ್ಕಳಿಗೂ ಕೊವ್ಯಾಕ್ಸಿನ್​: 2ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್​ ಲಸಿಕೆ ನೀಡಲು ಶಿಫಾರಸು

ಕಳೆದ ಮೂರು ದಿನಗಳಿಂದಲೂ ತಾಯಿ ಕೋತಿ ಇದೇ ರೀತಿಯಾಗಿ ನಡೆದುಕೊಳ್ಳುತ್ತಿದ್ದು, ಇದೀಗ ಘಟನೆಯ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿವೆ. ಮೃತಪಟ್ಟ ಮರಿ ಕೋತಿಗೆ ಮುತ್ತು ಕೊಟ್ಟು ಪ್ರೀತಿ ಹೊರಹಾಕುತ್ತಿರುವ ತಾಯಿ ಕೋತಿಯ ದೃಶ್ಯ ಮಾತ್ರ ಕಲ್ಲು ಹೃದಯವರಲ್ಲೂ ಸಹ ಕಣ್ಣೀರು ತರಿಸುವಂತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.