ETV Bharat / bharat

ಗಂಡು ಮಗುವಿಲ್ಲದ ಚಿಂತೆ: ಇದ್ದ ಮೂವರು ಹೆಣ್ಣು ಮಕ್ಕಳನ್ನೂ ಕೊಂದ ಅಮ್ಮ! - ಬಿಹಾರದ ಬಕ್ಸರ್ ಜಿಲ್ಲೆ

ಬಿಹಾರದ ಬಕ್ಸರ್ ಜಿಲ್ಲೆಯಲ್ಲಿ ತಾಯಿಯೊಬ್ಬಳು ತನ್ನ ಮೂವರು ಹೆಣ್ಣು ಮಕ್ಕಳನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಜರುಗಿದೆ.

mother-killed-three-daughters-in-bihar
ಗಂಡು ಮಗುವಿಲ್ಲದ ಚಿಂತೆ: ಇದ್ದ ಮೂವರು ಹೆಣ್ಣು ಮಕ್ಕಳನ್ನೂ ಕೊಂದ ಅಮ್ಮ
author img

By

Published : Sep 2, 2022, 7:47 PM IST

Updated : Sep 2, 2022, 9:15 PM IST

ಬಕ್ಸರ್(ಬಿಹಾರ): ಗಂಡು ಮಗುವಿಲ್ಲದ ಕಾರಣಕ್ಕೆ ಮೂವರು ಹೆಣ್ಣು ಮಕ್ಕಳನ್ನು ಸ್ವತಃ ತಾಯಿಯೇ ಕೊಲೆ ಮಾಡಿರುವ ಘಟನೆ ಆಘಾತಕಾರಿ ಬಿಹಾರದ ಬಕ್ಸರ್ ಜಿಲ್ಲೆಯಲ್ಲಿ ನಡೆದಿದೆ. ಆರೋಪಿ ತಾಯಿಯನ್ನು ಪಿಂಕಿ ದೇವಿ ಎಂದು ಗುರುತಿಸಲಾಗಿದೆ. ಪೂನಂ ಕುಮಾರಿ (10), ರೂನಿ ಕುಮಾರಿ (8) ಮತ್ತು ಬಾಬ್ಲಿ ಕುಮಾರಿ (3) ಎಂಬ ಮಕ್ಕಳೇ ತಾಯಿಯಿಂದ ಕೊಲೆಯಾದ ನತದೃಷ್ಟರು.

ಇಲ್ಲಿನ ಗಾಯಘಾಟ್ ನಿವಾಸಿ ಸುನೀಲ್ ಯಾದವ್ ಎಂಬುವವರ ಪತ್ನಿಯಾದ ಪಿಂಕಿ ದೇವಿಗೆ ಗಂಡು ಮಕ್ಕಳು ಆಗಿರಲಿಲ್ಲ. ಇದರಿಂದ ಆಕೆ ಚಿಂತೆ ಮತ್ತು ಬೇಸರಕ್ಕೂ ಒಳಗಾಗಿದ್ದರು. ಅಲ್ಲದೇ, ಅದೇ ಕಾರಣಕ್ಕಾಗಿ ಗಂಡನ ಮನೆಯವರು ಕೂಡ ಪಿಂಕಿ ದೇವಿಯನ್ನು ನಿಂದಿಸುತ್ತಿದ್ದರು. ಹೀಗಾಗಿಯೇ ತನ್ನ ಮೂವರು ಹೆಣ್ಣು ಮಕ್ಕಳನ್ನು ಪ್ರಾಣವನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಗಂಡು ಮಗುವಿಲ್ಲದ ಚಿಂತೆ: ಇದ್ದ ಮೂವರು ಹೆಣ್ಣು ಮಕ್ಕಳನ್ನೂ ಕೊಂದ ಅಮ್ಮ

ರಾತ್ರಿ ಊಟ ಮಾಡಿ ನಂತರ ಮೂವರು ಮಕ್ಕಳನ್ನು ಪಿಂಕಿದೇವಿ ಜೊತೆಯಲ್ಲಿ ಕರೆದುಕೊಂಡು ಮಲಗಿದ್ದರು. ಬೆಳಗ್ಗೆ ಚಾಯ್​ ಕುಡಿಯಲು ಕರೆದರೂ ಹುಡುಗಿಯರು ಬರಲಿಲ್ಲ. ಆದ್ದರಿಂದ ನಾನೇ ಹೋಗಿ ನೋಡಿದಾಗ ಮೂವರು ಮಕ್ಕಳು ಶವವಾಗಿ ಬಿದ್ದಿದ್ದರು. ಮೃತ ಬಾಲಕಿಯರ ದೇಹ ಕಪ್ಪು ಬಣ್ಣಕ್ಕೆ ತಿರುಗಿದ್ದರಿಂದ ವಿಷ ಹಾಕಿ ಕೊಲೆ ಮಾಡಿರುವ ಶಂಕೆ ಇದೆ ಎಂದು ಪಿಂಕಿಯ ಅತ್ತೆ ಹೀರಾಮುನಿ ದೇವಿ ತಿಳಿಸಿದ್ದಾರೆ.

ಈ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಎಸ್​ಪಿ ಶ್ರೀರಾಜ್, ಮಗನಿಲ್ಲದ ಚಿಂತೆಯಿಂದ ಹೆಣ್ಣು ಮಕ್ಕಳನ್ನು ತಾನೇ ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ಆರೋಪಿ ತಾಯಿ ಒಪ್ಪಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಸದ್ಯ ಮೂವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿರುವ ಪೊಲೀಸರು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ: ಚಲಿಸುತ್ತಿದ್ದ ರೈಲಿನಲ್ಲಿ ಅನುಚಿತ ವರ್ತನೆ: ಪ್ರತಿರೋಧಿಸಿದ ಮಹಿಳೆಯನ್ನು ಕೆಳಗೆ ನೂಕಿದ ಕಿರಾತಕ

Last Updated : Sep 2, 2022, 9:15 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.