ETV Bharat / bharat

ಜ್ಯೋತಿಷ್ಯ ಮಾತು ಕೇಳಿ ಮಗಳನ್ನು ಕೊಂದು ನೇಣಿಗೆ ಶರಣಾದ ತಾಯಿ! - ಕೊಯಮತ್ತೂರು ಅಪರಾಧ ಸುದ್ದಿ

ತಾಯಿಯೊಬ್ಬಳು ಜ್ಯೋತಿಷಿಯ ಮಾತುಗಳನ್ನು ನಂಬಿ, ತನ್ನ ಹೆತ್ತ ಮಗಳನ್ನು ಕೊಂದು, ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ.

mother who killed her daughter in Tamilnadu, mother committed suicide in Coimbatore, Coimbatore Crime news,  killed her daughter by relying on astrology, ತಮಿಳುನಾಡಿನಲ್ಲಿ ಮಗಳನ್ನು ಕೊಲೆ ಮಾಡಿದ ತಾಯಿ, ಕೊಯಮತ್ತೂರಿನಲ್ಲಿ ಆತ್ಮಹತ್ಯೆಗೆ ಶರಣಾದ ತಾಯಿ, ಕೊಯಮತ್ತೂರು ಅಪರಾಧ ಸುದ್ದಿ,
ಜೋತಿಷ್ಯ ಮಾತು ಕೇಳಿ ಮಗಳನ್ನು ಕೊಂದ ತಾಯಿ
author img

By

Published : Jan 7, 2022, 1:22 PM IST

ಕೊಯಮತ್ತೂರು: ಜಿಲ್ಲೆಯಲ್ಲಿ ತಾಯಿ-ಮಗಳು ಸಾವಿನ ಸುದ್ದಿ ಸಂಚಲನ ಮೂಡಿಸುತ್ತಿದೆ. ಜ್ಯೋತಿಷಿಯೊಬ್ಬರ ಮಾತು ಕೇಳಿ ತಾಯಿಯೊಬ್ಬಳು ತನ್ನ ಮಗಳನ್ನು ಕೊಲೆ ಮಾಡಿದಲ್ಲದೇ ತಾನೂ ಸಹಿತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತುಡಿಯಲೂರ್ ಪಕ್ಕದಲ್ಲಿರುವ ಅಪ್ಪನಾಯಕನಪಾಳ್ಯಂ ನಡೆದಿದೆ.

ಘಟನೆಯ ವಿವರ: ಅಪ್ಪನಾಯಕನಪಾಳ್ಯಂ ನಿವಾಸಿ ಧನಲಕ್ಷ್ಮಿ (58) ತನ್ನ ಅಂಗವಿಕಲ ಮಗಳು ಸುಗನ್ಯಾ (30) ಜೊತೆ ವಾಸವಿದ್ದಾರೆ. ಇವರ ಪುತ್ರ ಶಶಿಕುಮಾರ್​ಗೆ ಮದುವೆಯಾಗಿದ್ದು, ಸರವಣಂಪಟ್ಟಿಯಲ್ಲಿ ವಾಸಿಸುತ್ತಿದ್ದಾರೆ. ಆದರೆ ಧನಲಕ್ಷ್ಮಿ ಜ್ಯೋತಿಷಿ ಮಾತುಗಳನ್ನು ಹೆಚ್ಚಾಗಿ ನಂಬುತ್ತಿದ್ದರು.

ಈ ಕ್ರಮದಲ್ಲಿ ಧನಲಕ್ಷ್ಮಿ ಜ.4ರಂದು ಮಗ ಶಶಿಕುಮಾರ್​ಗೆ ಕಾಲ್​ ಮಾಡಿ, ಜ್ಯೋತಿಷಿ ಮೂಲಕ ನನ್ನ ಬಗ್ಗೆ ತಿಳಿದಿದ್ದೇನೆ. ಅವರು ನಾನು ಕೈ ಅಥವಾ ಕಾಲುಗಳಿಲ್ಲದೇ ಬದಲಾಗುತ್ತೇನೆ ಅಂತಾ ಹೇಳಿದ್ದಾರೆ.

ಸಹೋದರಿ ಸುಗನ್ಯಾ ಜೊತೆ ನಾನು ಸಹ ಹಾಗೇ ಬದಲಾದ್ರೆ ನಿನಗೆ ಸಮಸ್ಯೆಗಳು ಎದುರಾಗುತ್ತವೆ. ಜ್ಯೋತಿಷಿ ಹೇಳಿದಂತೆ ಆದ್ರೆ ನಮ್ಮನ್ನು ನೋಡಿಕೊಳ್ಳುವವರು ಯಾರ ಇರಲ್ಲ. ಹೀಗಾಗಿ ನಾವು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದುಕೊಂಡಿದ್ದೇವೆ ಅಂತಾ ಹೇಳಿದ್ದಾರೆ.

mother who killed her daughter in Tamilnadu, mother committed suicide in Coimbatore, Coimbatore Crime news,  killed her daughter by relying on astrology, ತಮಿಳುನಾಡಿನಲ್ಲಿ ಮಗಳನ್ನು ಕೊಲೆ ಮಾಡಿದ ತಾಯಿ, ಕೊಯಮತ್ತೂರಿನಲ್ಲಿ ಆತ್ಮಹತ್ಯೆಗೆ ಶರಣಾದ ತಾಯಿ, ಕೊಯಮತ್ತೂರು ಅಪರಾಧ ಸುದ್ದಿ,
ಜ್ಯೋತಿಷಿ ಮಾತು ಕೇಳಿ ಮಗಳನ್ನು ಕೊಂದ ತಾಯಿ

ತಾಯಿ ಮಾತುಗಳನ್ನು ಕೇಳಿ ಗಾಬರಿಗೊಂಡ ಶಶಿಕುಮಾರ್​, ಅದೇನು ಆಗುವುದಿಲ್ಲ. ನಾನು ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಭರವಸೆ ಮೂಡಿಸುವ ಪ್ರಯತ್ನ ಮಾಡಿದರು. ಮರುದಿನ ಜ.5 ರಂದು ತಾಯಿ ಬಳಿ ಹೋಗಲು ಶಶಿಕುಮಾರ್​ ನಿರ್ಧರಿಸಿದ್ದಾನೆ.

ಬಳಿಕ ಶಶಿಕುಮಾರ್​ ತನ್ನ ತಾಯಿಗೆ ಫೋನ್​ ಮಾಡಿದ್ದಾನೆ. ಆದರೆ ಧನಲಕ್ಷ್ಮಿ ಫೋನ್​​​ ರಿಸೀವ್​ ಮಾಡಲಿಲ್ಲ. ಗಾಬರಿಗೊಂಡು ಪಕ್ಕದ ಮನೆಯವರಿಗೆ ಫೋನ್​ ಮಾಡಿ ‘ನಮ್ಮ ಮನೆಯಲ್ಲಿ ಯಾರಾದ್ರೂ ಇದ್ದರಾ ಅಂತಾ ನೋಡಿಕೊಂಡು ಬನ್ನಿ’ ಅಂತಾ ಕೇಳಿಕೊಂಡಿದ್ದಾರೆ.

ಪಕ್ಕದ ಮನೆಯವರು ಶಶಿ ಕುಮಾರ್​ ಮನೆಗೆ ಹೋಗಿ ನೋಡಿದಾಗ ಧನಲಕ್ಷ್ಮಿ ನೇಣು ಬಿಗಿದ ಸ್ಥಿತಿಯಲ್ಲಿ ಮತ್ತು ಸಹೋದರಿ ಬಾಯಿಯಲ್ಲಿ ನೊರೆ ಬಂದು ಸಾವನ್ನಪ್ಪಿದ ಸ್ಥಿತಿಯಲ್ಲಿ ಕಂಡಿದ್ದಾರೆ. ಕೂಡಲೇ ಈ ವಿಷಯವನ್ನು ಪಕ್ಕದ ಮನೆಯವರು ಶಶಿಕುಮಾರ್​ಗೆ ತಿಳಿಸಿದ್ದಾರೆ. ಕೂಡಲೇ ಶಶಿಕುಮಾರ್​ ತಾಯಿ ಮನೆಗೆ ತೆರಳಿ ರೋದಿಸಿದ್ದಾನೆ. ಬಳಿಕ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ.

mother who killed her daughter in Tamilnadu, mother committed suicide in Coimbatore, Coimbatore Crime news,  killed her daughter by relying on astrology, ತಮಿಳುನಾಡಿನಲ್ಲಿ ಮಗಳನ್ನು ಕೊಲೆ ಮಾಡಿದ ತಾಯಿ, ಕೊಯಮತ್ತೂರಿನಲ್ಲಿ ಆತ್ಮಹತ್ಯೆಗೆ ಶರಣಾದ ತಾಯಿ, ಕೊಯಮತ್ತೂರು ಅಪರಾಧ ಸುದ್ದಿ,
ಜೋತಿಷ್ಯ ಮಾತು ಕೇಳಿ ಮಗಳನ್ನು ಕೊಂದ ತಾಯಿ

ಸುದ್ದಿ ತಿಳಿದಾಕ್ಷಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ಕೈಗೊಂಡಿದ್ದಾರೆ. ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದರು.

ಧನಲಕ್ಷ್ಮಿ ಮೊದಲು ತನ್ನ ಮಗಳಿಗೆ ವಿಷವುಣಿಸಿದ ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವುದು ಪ್ರಾಥಮಿಕ ತನಿಖೆ ಮೂಲಕ ಪೊಲೀಸರು ನಿರ್ಧರಿಸಿದ್ದಾರೆ. ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.