ETV Bharat / bharat

ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ, 10 ವರ್ಷದ ಮಗ ಪಾರು - ಈಟಿವಿ ಭಾರತ ಕನ್ನಡ

ಮಕ್ಕಳೊಂದಿಗೆ ತಾಯಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದು, 10 ವರ್ಷದ ಮಗ ತನ್ನನ್ನು ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ

palamu
ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ
author img

By

Published : Jan 22, 2023, 2:14 PM IST

ಪಲಾಮು(ಜಾರ್ಖಂಡ್): ಜಾರ್ಖಂಡ್​ನ ಪಲಾಮುನಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದ್ದು ಎಲ್ಲರನ್ನೂ ಬೆಚ್ಚಿಬೀಳಿಸಿದೆ. ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದು, 10 ವರ್ಷದ ಮಗ ತನ್ನನ್ನು ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ತಾಯಿ ಮತ್ತು ಸಹೋದರನ ಶವಗಳನ್ನು ಹಾಸಿಗೆಯ ಮೇಲೆ ಇಟ್ಟುಕೊಂಡು ಅವರೊಂದಿಗೆ ಮಲಗಿದ್ದಾನೆ.

'ಅಮ್ಮ ಹೇಳಿದಳು..ಉಯ್ಯಾಲೆ ಆಡೋಣವೆಂದು..!': ಮೃತ ಮಹಿಳೆ ಶಾಂತಿ ಮನೆಯಲ್ಲಿ ದಿನನಿತ್ಯದ ಜಗಳದಿಂದ ಬೇಸತ್ತಿದ್ದಳು. ಗಂಡನ ಎರಡನೇ ಮದುವೆಯ ಬಗ್ಗೆ ತುಂಬಾ ಕೋಪಗೊಂಡಿದ್ದಳು. ಅಲ್ಲದೇ ಇತ್ತೀಚೆಗಷ್ಟೇ ಆಕೆಯ ಅತ್ತಿಗೆ ಮನೆಯಲ್ಲಿ ಕೆಲ ದಿನಗಳ ಕಾಲ ತಂಗಿದ್ದಳು. ಅವಳಿಗೆ ಗಂಡನ ವಿಷಯದಲ್ಲಿ ಮನಸ್ಸು ಬಹಳ ನೊಂದಿತ್ತು. ಶನಿವಾರ ರಾತ್ರಿ ತನ್ನಿಬ್ಬರು ಮಕ್ಕಳಿಗೆ ಚೆನ್ನಾಗಿ ಊಟ ಬಡಿಸಿ, ನಂತರ ಸೀರೆಯನ್ನು ಹಗ್ಗವಾಗಿ ಕಟ್ಟಿ ಉಯ್ಯಾಲೆ ಆಟ ಆಡೋಣವೆಂದು ಮಕ್ಕಳನ್ನು ಒಪ್ಪಿಸಿದಳು. ಹೀಗೆ ತನ್ನಿಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಲು ನೋಡಿದ್ದು, 10 ವರ್ಷದ ಮಗ ತನ್ನನ್ನು ತಾನು ರಕ್ಷಿಸಿಕೊಂಡಿದ್ದಾನೆ.

ತಾಯಿ, ತಮ್ಮನ ಶವದೊಂದಿಗೆ ಮಲಗಿದ ಛೋಟು: ಗಂಡ ಹೆಂಡತಿಯ ಜಗಳ ಮಕ್ಕಳ ಭವಿಷ್ಯವನ್ನೇ ಬದಲಾಯಿಸಿತು. ಆತ್ಮಹತ್ಯೆಯಲ್ಲಿ ಮಹಿಳೆ ಸಾವನ್ನಪ್ಪಿದ್ದು ಜೊತೆಗೆ ಆಕೆಯ 8 ವರ್ಷದ ಮಗ ಕೂಡ ಮೃತಪಟ್ಟಿದ್ದಾನೆ. ತಾಯಿ ಮತ್ತು ತಮ್ಮನ ಮೃತ ದೇಹವನ್ನು ಎಚ್ಚರಿಕೆಯಿಂದ ಛೋಟು ಹಾಸಿಗೆಯ ಮೇಲೆ ಮಲಗಿಸಿದ್ದಾನೆ. ರಾತ್ರಿಯಿಡೀ ಅವರಿಬ್ಬರ ಪಕ್ಕದಲ್ಲೇ ಮಲಗಿ ದಿನ ಕಳೆದಿದ್ದಾನೆ. ಭಾನುವಾರ ಬೆಳಗ್ಗೆ ಛೋಟು ಇಡೀ ಘಟನೆಯನ್ನು ನೆರೆಹೊರೆಯವರಿಗೆ ವಿವರಿಸಿದ್ದಾನೆ.

ಸಾಮೂಹಿಕ ಆತ್ಮಹತ್ಯೆ ಪ್ರಕರಣ: ತಾಯಿ ಮತ್ತು ಮಗನ ಆತ್ಮಹತ್ಯೆ ಬಗ್ಗೆ ಮಾಹಿತಿ ಪಡೆದ ಅಲ್ಲಿನ ಪೊಲೀಸರು ಮೃತ ದೇಹವನ್ನು ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಗಾಗಿ ಎಂಎಂಸಿಎಚ್‌ಗೆ ಕಳುಹಿಸಿದ್ದಾರೆ. ಮಾಹಿತಿ ಪ್ರಕಾರ, 'ರಂಗೇಯ ನಿವಾಸಿ ಶಾಂತಿ ದೇವಿ ಎಂಬ ಮಹಿಳೆ ತನ್ನ ಮನೆಯಲ್ಲಿ 10 ವರ್ಷದ ಮಗ ಛೋಟು ಮತ್ತು 8 ವರ್ಷದ ಮಗ ಕುನಾಲ್ ಜೊತೆಗೆ ನೇಣು ಹಾಕಿಕೊಂಡಿದ್ದಾರೆ. ಈ ವೇಳೆ ಹಿರಿಯ ಮಗ ಛೋಟು ಕುಮಾರ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ತನ್ನ ತಾಯಿ ಮತ್ತು ತಮ್ಮನನ್ನು ಉಳಿಸಲು ಛೋಟು ಸಾಕಷ್ಟು ಪ್ರಯತ್ನ ಪಟ್ಟಿದ್ದು, ಆತನಿಂದ ಸಾಧ್ಯವಾಗಲಿಲ್ಲ' ಎಂದು ಪೊಲೀಸ್​ ಅಧಿಕಾರಿ ಘಟನೆಯನ್ನು ವಿವರಿಸಿದ್ದಾರೆ.

ಪತಿಯ ಎರಡನೇ ಮದುವೆ ಆತ್ಮಹತ್ಯೆಗೆ ಕಾರಣ: ಶಾಂತಿದೇವಿ ಪತಿ ವಿಕಾಸ್ ದಾಸ್ ಒಂದು ವರ್ಷದ ಹಿಂದೆ ಮರುಮದುವೆಯಾಗಿದ್ದರು. ಇದು ಶಾಂತಿಯವರ ಮನಸ್ಥಿತಿ ಹಾಳುಗೆಡವುದರಲ್ಲಿ ಪ್ರಮುಖ ಕಾರಣವಾಯಿತು. ಇತ್ತೀಚೆಗಷ್ಟೇ ವಿಕಾಸ್​ನ ಎರಡನೇ ಪತ್ನಿ ಅಂದರೆ ಶಾಂತಿಯ ಅತ್ತಿಗೆ ರಂಗೇಯ ಇದೇ ಮನೆಯಲ್ಲಿ ಕೆಲ ದಿನ ವಾಸವಿದ್ದು, ಇದರಿಂದ ಶಾಂತಿ ತೀವ್ರ ಕೋಪಗೊಂಡಿದ್ದಳು. ಈ ವಿಚಾರವಾಗಿ ಪತಿ-ಪತ್ನಿಯ ನಡುವೆ ಸಾಕಷ್ಟು ಜಗಳ ನಡೆಯುತ್ತಿತ್ತು. ವಿಕಾಸ್ ಮತ್ತು ಶಾಂತಿ ನಡುವೆ ಫೋನ್‌ನಲ್ಲಿಯೂ ಜಗಳ ನಡೆಯುತ್ತಿತ್ತು. ಇದರಿಂದ ಶಾಂತಿ ಬಹಳಷ್ಟು ನೊಂದು ತನ್ನ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಪ್ರೀತಿಸಿದ ಯುವಕನ ಮದುವೆಗೆ ಮನೆಯವರು ಒಪ್ಪಲಿಲ್ಲ; ಸಾಯ್ತೀನಿ ಎಂದು ಕಟ್ಟಡ ಏರಿದ ಯುವತಿ

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.