ETV Bharat / bharat

ಚೀನಾದಿಂದ ಬಂದ ತಾಯಿ ಮಗಳಿಗೆ ಕೊರೊನಾ ಪಾಸಿಟಿವ್..ಸೂರತ್​ನಲ್ಲಿ ದುಬೈನಿಂದ ಬಂದ ಯುವಕನಿಗೆ ಕೋವಿಡ್​ - Madurai airport

ಚೀನಾದಿಂದ ಹಿಂದಿರುಗಿರುವ ತಾಯಿ ಮತ್ತು ಆಕೆಯ ಮಗಳಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇಬ್ಬರನ್ನು ವಿರುದುನಗರದಲ್ಲಿನ ಮನೆಯಲ್ಲಿ ಐಸೋಲೇಷನ್‌ನಲ್ಲಿ ಇಡಲಾಗಿದೆ.

Madurai airport
ತಾಯಿ ಮಗಳಿಗೆ ಕೊರೊನಾ ಪಾಸಿಟಿವ್
author img

By

Published : Dec 28, 2022, 1:05 PM IST

ಮಧುರೈ / ಸೂರತ್​: ಚೀನಾದಿಂದ ಕೊಲಂಬೊ ಮೂಲಕ ಭಾರತಕ್ಕೆ ಬಂದಿದ್ದ ಮಹಿಳೆ ಮತ್ತು ಆಕೆಯ ಆರು ವರ್ಷದ ಮಗಳಿಗೆ ತಮಿಳುನಾಡಿನ ಮಧುರೈ ವಿಮಾನ ನಿಲ್ದಾಣದಲ್ಲಿ ಕೊರೊನಾ ಪರೀಕ್ಷೆ ನಡೆಸಲಾಗಿತ್ತು. ಇದೀಗ ಅವರ ವರದಿ ಪಾಸಿಟಿವ್​ ಬಂದಿದೆ ಎಂದು ಹಿರಿಯ ಆರೋಗ್ಯ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

ಮಧುರೈ ಬಳಿಯ ವಿರುದುನಗರ ಮೂಲದ ಮಹಿಳೆ ಮತ್ತು ಅವರ ಮಗಳು ಮಂಗಳವಾರ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ಅದರ ಫಲಿತಾಂಶ ಬಂದಿದ್ದು, ಇಬ್ಬರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಇಬ್ಬರನ್ನೂ ವಿರುದುನಗರದಲ್ಲಿನ ಮನೆಯಲ್ಲಿ ಐಸೋಲೇಶನ್‌ನಲ್ಲಿ ಇಡಲಾಗಿದೆ. ಅವರ ಮಾದರಿಗಳನ್ನು ಸಂಪೂರ್ಣ ಜೀನೋಮಿಕ್ ಅನುಕ್ರಮಕ್ಕಾಗಿ ರಾಜ್ಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಮಂಗಳವಾರ ತಮಿಳುನಾಡಿನಲ್ಲಿ 10 ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 51 ರಷ್ಟಿದೆ.

ಇದನ್ನೂ ಓದಿ: ಅಮೆರಿಕದಿಂದ ಆಗಮಿಸಿದ ಗಂಗಾವತಿ ಯುವತಿಗೆ ಕೋವಿಡ್ ಸೋಂಕು​

ಸೂರತ್‌ನಿಂದಲೂ ವರದಿ: ಸೂರತ್​ನಲ್ಲಿ ದುಬೈನಿಂದ ಬಂದ ಯುವಕನಿಗೆ ಕರೋನಾ ಪಾಸಿಟಿವ್ ದೃಢಪಟ್ಟಿದೆ. ಜಿನೋಮ್ ಸೀಕ್ವೆನ್ಸಿಂಗ್‌ಗಾಗಿ ಯುವಕನ ಧನಾತ್ಮಕ ಮಾದರಿಯನ್ನು ಜಿಆರ್‌ಬಿಸಿ ಗಾಂಧಿನಗರಕ್ಕೆ ಕಳುಹಿಸಲಾಗಿದೆ. ಇದಲ್ಲದೇ, ಯುವಕನ ಕುಟುಂಬದ ನಾಲ್ಕು ಸದಸ್ಯರನ್ನು ಕರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಎಲ್ಲ ನಾಲ್ವರ ವರದಿ ನೆಗೆಟಿವ್​ ಬಂದಿದೆ.

ಕರೋನಾ ಧನಾತ್ಮಕ ವರದಿಯಲ್ಲಿ ಯಾವ ರೂಪಾಂತರಗಳಿವೆ ಎಂಬುದನ್ನು ಜಿನೋಮ್ ಸೀಕ್ವೆನ್ಸಿಂಗ್‌ ಪರೀಕ್ಷೆಯಲ್ಲಿ ಬಹಿರಂಗವಾಗುತ್ತದೆ. ಈ ನಡುವೆ ನೆಗೆಟಿವ್​ ಬಂದ ನಾಲ್ವರನ್ನು ಮುನ್ನೆಚ್ಚರಿಕೆಯಾಗಿ ಯುವಕರನ್ನು ಪ್ರಸ್ತುತ ಅವರ ಮನೆಯಲ್ಲೇ ಪ್ರತ್ಯೇಕವಾಗಿ ಇರಿಸಲಾಗಿದೆ.

ತಮಿಳುನಾಡಿನಲ್ಲೂ ಮುನ್ನೆಚ್ಚರಿಕೆ: ಚೀನಾ ಮತ್ತು ಇತರ ದೇಶಗಳಲ್ಲಿ ಕೊರೊನಾವೈರಸ್ ಪ್ರಕರಣಗಳು ಹಠಾತ್ ಉಲ್ಬಣಗೊಂಡ ನಂತರ ತಮಿಳುನಾಡು ಸರ್ಕಾರವು ರಾಜ್ಯದ ನಾಲ್ಕು ವಿಮಾನ ನಿಲ್ದಾಣಗಳಿಗೆ ಆಗಮಿಸುತ್ತಿರುವ ಎಲ್ಲ ಪ್ರಯಾಣಿಕರ ತಪಾಸಣೆಯನ್ನು ಮಾಡುತ್ತಿದೆ.

ನೆರೆಯ ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕೇಂದ್ರವು ಇತ್ತೀಚೆಗೆ ದೇಶಾದ್ಯಂತ ನಗರಗಳು ಮತ್ತು ವಿಮಾನ ನಿಲ್ದಾಣಗಳಲ್ಲಿ ಕೊರೊನಾ ಪರೀಕ್ಷೆ ನಡೆಸುವಂತೆ ಸೂಚನೆ ಹೊರಡಿಸಿದೆ. ವಿದೇಶದಿಂದ ಬರುವ ಎಲ್ಲಾ ಪ್ರಯಾಣಿಕರಿಗೂ ವಿಮಾನ ನಿಲ್ದಾಣಗಳಲ್ಲಿ ಕೋವಿಡ್ -19 ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ.

ಇದನ್ನೂ ಓದಿ: ಮೂಗಿನ ಮೂಲಕ ಹಾಕುವ ಇಂಕೋವ್ಯಾಕ್ಸ್​ ಕೊರೊನಾ ಲಸಿಕೆಗೆ ದರ ನಿಗದಿ.. ದರ ಎಷ್ಟು ಗೊತ್ತಾ?

ಅಸ್ತಿತ್ವದಲ್ಲಿರುವ ರೂಪಾಂತರಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಹೊಸ ರೂಪಾಂತರಗಳನ್ನು ಪತ್ತೆಹಚ್ಚಲು ಸಂಪೂರ್ಣ ಜೀನೋಮಿಕ್ ಸೀಕ್ವೆನ್ಸಿಂಗ್ (ಡಬ್ಲ್ಯೂಜಿಎಸ್) ಗಾಗಿ ಸರ್ಕಾರಿ ಲ್ಯಾಬ್‌ಗೆ ಕೋವಿಡ್​-19 ಪಾಸಿಟಿವ್ ಮಾದರಿಗಳನ್ನು ಕಳುಹಿಸಲು ತಮಿಳುನಾಡು ಸರ್ಕಾರವು ಸೋಮವಾರ ರಾಜ್ಯದಾದ್ಯಂತ ಖಾಸಗಿ ಆಸ್ಪತ್ರೆಗಳು ಮತ್ತು ಲ್ಯಾಬ್‌ಗಳಿಗೆ ನಿರ್ದೇಶನ ನೀಡಿದೆ.

ಇನ್ನೂ ಡಿಸೆಂಬರ್​ 26 ರಂದು ಬಿಹಾರದ ಗಯಾ ವಿಮಾನ ನಿಲ್ದಾಣದಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಹನ್ನೊಂದು ಮಂದಿ ವಿದೇಶಿಯರಲ್ಲಿ ಕೋವಿಡ್‌ ಸೋಂಕು ಪತ್ತೆಯಾಗಿದೆ. ಈ ವಿದೇಶಿ ಪ್ರಜೆಗಳಿಗೆ ಪ್ರತ್ಯೇಕ ಕ್ವಾರಂಟೈನ್​ ವ್ಯವಸ್ಥೆ ಮಾಡಲಾಗಿದೆ.ಬೌದ್ಧರ ತೀರ್ಥಯಾತ್ರೆಯ ಪ್ರಮುಖ ಕ್ಷೇತ್ರ ಬೋಧಗಯಾವು ಪ್ರತಿ ವರ್ಷ ಬೋಧ ಮಹೋತ್ಸವ ಆಯೋಜಿಸುತ್ತಿದೆ. ಈ ಉತ್ಸವದಲ್ಲಿ ಪಾಲ್ಗೊಳ್ಳಲು ಇವರು ಬಂದಿದ್ದರು. ಪ್ರಪಂಚದಾದ್ಯಂತ ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸುವ ನಿರೀಕ್ಷೆ ಇದೆ.

ಇದನ್ನೂ ಓದಿ: ಚೀನಾದಲ್ಲಿ ಒಂದೇ ದಿನ 3 ಕೋಟಿ ಮಂದಿಗೆ ಕೊರೊನಾ ಪಾಸಿಟಿವ್​ ಅಂದಾಜು!

ಕರ್ನಾಟಕದ ಗಂಗಾವತಿಯಲ್ಲಿ ಅಮೆರಿಕದಿಂದ ಆಗಮಿಸಿದ ಯುವತಿಯಲ್ಲಿ ಕೋವಿಡ್ 19 ಕಂಡುಬಂದಿದೆ. ತಾಲೂಕಿನ ಬಸವಪಟ್ಟಣದ ಯುವತಿಯಲ್ಲಿ ಸೋಂಕು ಕಂಡುಬಂದಿದ್ದು, ನಾಲ್ಕನೇ ಅಲೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಪತ್ತೆಯಾದ ಮೊದಲ ಪ್ರಕರಣ ಇದಾಗಿದೆ.

ಉತ್ತರ ಪ್ರದೇಶದ ಆಗ್ರಾದ ವ್ಯಕ್ತಿಯೊಬ್ಬರು ಇತ್ತೀಚೆಗೆ ಚೀನಾದಿಂದ ಹಿಂದಿರುಗಿದ ನಂತರ ಕೋವಿಡ್ -19 ಪಾಸಿಟಿವ್ ಆಗಿದ್ದಾರೆ. 40 ವರ್ಷದ ವ್ಯಕ್ತಿ ವೃತ್ತಿಯಲ್ಲಿ ಉದ್ಯಮಿಯಾಗಿದ್ದು, ಜಿಲ್ಲೆಯ ಶಹಗಂಜ್ ಪ್ರದೇಶದವರಾಗಿದ್ದಾರೆ. ಇವರು ಡಿಸೆಂಬರ್ 23 ರಂದು ಚೀನಾದಿಂದ ಮರಳಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.