ETV Bharat / bharat

ರೌಡಿಗಳ ದಾಂಧಲೆ: ತಾಯಿ, ಮಗಳಿಗೆ ಬೆಂಕಿ ಹಚ್ಚಿ ಸಜೀವ ದಹನ - mother and daughter burnt alive

ಬಿಹಾರದ ಅರ್ವಾಲ್​ನಲ್ಲಿ ತಾಯಿ ಮತ್ತು ಮಗಳನ್ನು ಸಜೀವ ದಹನ ಮಾಡಿರುವ ಘಟನೆ ನಡೆದಿದೆ. ಇದರಲ್ಲಿ ಇಬ್ಬರೂ ಮೃತಪಟ್ಟಿದ್ದಾರೆ. ಪರಾಸೀ ಠಾಣೆ ಪೊಲೀಸರು ಪ್ರಕರಣದ ತನಿಖೆಯಲ್ಲಿ ತೊಡಗಿದ್ದಾರೆ.

ತಾಯಿ ಮತ್ತು ಮಗಳನ್ನು ಸಜೀವ ದಹನ
ತಾಯಿ ಮತ್ತು ಮಗಳನ್ನು ಸಜೀವ ದಹನ
author img

By

Published : Nov 29, 2022, 6:07 PM IST

ಅರ್ವಾಲ್ (ಬಿಹಾರ): ಅರ್ವಾಲ್​ನ ಪರಾಸೀ ಪೊಲೀಸ್ ಠಾಣೆ ವ್ಯಾಪ್ತಿಯ ಚಕಿಯಾ ಗ್ರಾಮದಲ್ಲಿ ರೌಡಿಗಳು ದಾಂಧಲೆ ನಡೆಸಿದ್ದು, ಮನೆಯೊಂದಕ್ಕೆ ಬೆಂಕಿ ಹಚ್ಚಿದ್ದಾರೆ. ಈ ಘಟನೆಯಲ್ಲಿ ತಾಯಿ ಮತ್ತು ಮಗಳು ಸುಟ್ಟು ಕರಕಲಾಗಿದ್ದಾರೆ. ತಕ್ಷಣ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಲ್ಲಿಂದ ಅವರನ್ನು ಪಿಎಂಸಿಎಚ್‌ಗೆ ಕರೆದೊಯ್ಯುವಂತೆ ಸೂಚಿಸಲಾಗಿದೆ. ಬಳಿಕ ಇಬ್ಬರೂ ಪಾಟ್ನಾ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಮೃತರನ್ನು ಸುಮನ್ ದೇವಿ ಮತ್ತು ಅವರ ಪುತ್ರಿ ಶಾರದಾ ಕುಮಾರಿ ಎಂದು ಗುರುತಿಸಲಾಗಿದೆ. ಸುಮನ್ ದೇವಿ ಪತಿ ಅಜಿತ್ ಪಾಸ್ವಾನ್ ಪ್ರಕರಣವೊಂದರಲ್ಲಿ ಜೈಲು ಸೇರಿದ್ದಾರೆ. ಪೊಲೀಸರು ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ. ಸೋಮವಾರ ತಡರಾತ್ರಿ ಯುವಕನೊಬ್ಬ ಕೆಟ್ಟ ಉದ್ದೇಶದಿಂದ ಮನೆಗೆ ಪ್ರವೇಶಿಸಿದ್ದಾನೆ ಎಂದು ಹೇಳಲಾಗುತ್ತಿದೆ. ಬಳಿಕ ಆತನ ಯೋಜನೆ ಸಫಲವಾಗದಿದ್ದಾಗ ಪೆಟ್ರೋಲ್ ಎರಚಿ ಮನೆಗೆ ಬೆಂಕಿ ಹಚ್ಚಿದ್ದಾನೆ. ಇದರಲ್ಲಿ ಸುಮನ್ ಮತ್ತು ಶಾರದಾ ಸುಟ್ಟು ಕರಕಲಾಗಿದ್ದಾರೆ.

ಇದನ್ನೂ ಓದಿ: ಧಗಧಗನೆ ಉರಿದ ಖಾಸಗಿ ಬಸ್​.. ಮಕ್ಕಳು ಸೇರಿ 14 ಮಂದಿ ಸಜೀವ ದಹನ

ಗ್ರಾಮಸ್ಥರ ಪ್ರಕಾರ, ಸುಮನ್ ದೇವಿ ಪತಿ ಅಜಿತ್ ಪಾಸ್ವಾನ್ ಐದು ದಿನಗಳ ಹಿಂದೆ ಜೈಲಿಗೆ ಹೋಗಿದ್ದಾರೆ. ಗ್ರಾಮದ ಬಾಲಕ ನಂದಕುಮಾರ್ ಮಹಿಳೆಯ ಮೇಲೆ ಕಣ್ಣಿಟ್ಟಿದ್ದ ಎಂದು ಹೇಳಲಾಗುತ್ತಿದೆ. ನಿನ್ನೆ ರಾತ್ರಿ ಆರೋಪಿಗಳು ಮನೆಗೆ ನುಗ್ಗಿ ಬೆದರಿಕೆ ಹಾಕಿದ್ದಾರೆ. ಮಹಿಳೆ ಅವರನ್ನು ಹೊರಗೆ ತಳ್ಳಿದ್ದಾಳೆ.

ಇದರಿಂದ ಕುಪಿತಗೊಂಡ ಆರೋಪಿ ನಂದಕುಮಾರ್ ಮನೆಗೆ ತೆರಳಿ ಬೈಕ್ ನಲ್ಲಿದ್ದ ಪೆಟ್ರೋಲ್ ತೆಗೆದು ಸುಮನ್ ಮನೆಗೆ ಬಂದಿದ್ದಾನೆ. ಮನೆಯ ಹುಲ್ಲಿನ ಮೇಲೆ ಪೆಟ್ರೋಲ್ ಹಾಕಿದ್ದಾನೆ. ಇದಾದ ಬಳಿಕ ಮನೆಗೆ ಬೆಂಕಿ ಹಚ್ಚಲಾಗಿದೆ. ಬೆಂಕಿ ಹೊತ್ತಿಕೊಂಡ ತಕ್ಷಣ ತಾಯಿ ಮತ್ತು ಮಗಳು ಕಿರುಚಲು ಪ್ರಾರಂಭಿಸಿದರು. ಕೂಗಾಟ ಕೇಳಿ ಸುತ್ತಮುತ್ತಲ ಜನರು ಬಂದು ಬಾಗಿಲು ಒಡೆದು ಇಬ್ಬರನ್ನೂ ಹೊರಗೆ ಕರೆದೊಯ್ದರು.

ಅವಸರದಲ್ಲಿ, ತಾಯಿ-ಮಗಳನ್ನು ಸದರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಂತಾಜನಕ ಸ್ಥಿತಿಯನ್ನು ಕಂಡ ವೈದ್ಯರು ಅವರನ್ನು ಪಾಟ್ನಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಿದ್ದಾರೆ. ಬಳಿಕ ಇಬ್ಬರೂ PMCH ನಲ್ಲಿ ಮೃತಪಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.