ETV Bharat / bharat

ಮಕ್ಕಳಿಲ್ಲದ ದಂಪತಿಗೆ ಒಂದು ವರ್ಷದ ಮಗು ಮಾರಾಟ: ತಾಯಿ ಸೇರಿ ಒಂಬತ್ತು ಜನರ ಬಂಧನ

ತಮಿಳುನಾಡಿನ ವಿರುದುನಗರ ಜಿಲ್ಲೆಯಲ್ಲಿ ಮಕ್ಕಳಿಲ್ಲದ ದಂಪತಿಗೆ ಮಗುವನ್ನು ಮಾರಾಟ ಮಾಡಿದ್ದಕ್ಕಾಗಿ, ಒಂದು ವರ್ಷದ ಹೆಣ್ಣು ಮಗುವಿನ ತಾಯಿ ಸೇರಿದಂತೆ ಒಂಬತ್ತು ಜನರನ್ನು ಗುರುವಾರ ಬಂಧಿಸಲಾಗಿದೆ.

author img

By

Published : Feb 17, 2022, 5:18 PM IST

Nine people, including the mother of a one-year-old girl, were arrested
ಮಗು ಮಾರಾಟ

ಚೆನ್ನೈ: ಮಕ್ಕಳಿಲ್ಲದ ದಂಪತಿಗೆ ಮಗುವನ್ನು ಮಾರಾಟ ಮಾಡಿದ ಆರೋಪದಲ್ಲಿ ಒಂದು ವರ್ಷದ ಹೆಣ್ಣು ಮಗುವಿನ ತಾಯಿ ಸೇರಿದಂತೆ ಒಂಬತ್ತು ಜನರನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.

ಈ ಘಟನೆ ತಮಿಳುನಾಡಿನ ವಿರುದುನಗರದ ಜಿಲ್ಲೆಯಲ್ಲಿ ನಡೆದಿದೆ. ಹೆಣ್ಣು ಮಗುವನ್ನು ಮಧುರೈನಲ್ಲಿ ಮಕ್ಕಳಿಲ್ಲದ ದಂಪತಿಗೆ 2.30 ಲಕ್ಷ ರೂ.ಗೆ ಮಾರಾಟ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪತಿ ಮುರುಗನ್ ನಿಧನದ ನಂತರ ಸೇವಾಲಪಟ್ಟಿಯಲ್ಲಿ ನೆಲೆಸಿದ್ದ ಇಪ್ಪತ್ತೈದು ವರ್ಷದ ಕಲೈಸೆಲ್ವಿ ಎಂಬ ಮಹಿಳೆ ಕರುಪ್ಪುಸಾಮಿ (58) ಎಂಬಾತನ ಜೊತೆ ಸೇರಿಕೊಂಡು ತನ್ನ ಒಂದು ವರ್ಷದ ಮಗುವನ್ನು ಮಕ್ಕಳಿಲ್ಲದ ದಂಪತಿಗೆ ಮಾರಾಟ ಮಾಡಿದ್ದಾಳೆ.

ವಿರುದುನಗರ ಚೈಲ್ಡ್ ಲೈನ್​ಗೆ ಮಧ್ಯಾಹ್ನ 12.35ಕ್ಕೆ ಈ ಸಂಬಂಧ ಕರೆ ಬಂದಿದೆ. ಮಕ್ಕಳಿಲ್ಲದ ದಂಪತಿಗೆ ಒಂದು ವರ್ಷದ ಹೆಣ್ಣು ಮಗುವನ್ನು ಮಾರಾಟ ಮಾಡಲಾಗಿದೆ ಎಂದು ಅನಾಮಧೇಯ ಕರೆ ಬಂದಿದೆ. ಮುರುಗನ್ ಅವರು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಾಮಾಜಿಕ ಕಾರ್ಯಕರ್ತ ಕಾರ್ತಿಗೈರಾಜ ಅವರೊಂದಿಗೆ ಕಲೈಸೆಲ್ವಿ ವಾಸವಿದ್ದ ಮನೆಗೆ ತೆರಳಿ ಪರಿಶೀಲಿಸಿದಾಗ, ವಿರುದುನಗರ ಚೈಲ್ಡ್‌ಲೈನ್‌ಗೆ ಬಂದ ಅನಾಮಧೇಯ ಕರೆ ನಿಜವಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಇವರಾ ಬಂಧುಗಳು.. ತೆಲಂಗಾಣದಲ್ಲಿ ಮೊಮ್ಮಕ್ಕಳನ್ನು ಅಪಹರಿಸಿದ ಅಜ್ಜಿ.. 30 ಲಕ್ಷಕ್ಕೆ ಬೇಡಿಕೆ!!

ಚೈಲ್ಡ್‌ಲೈನ್ ಕಾರ್ಯಕರ್ತೆ ಮತ್ತು ಡಿಸಿಪಿಯು ಸಾಮಾಜಿಕ ಕಾರ್ಯಕರ್ತರು ಕೂರೈಕುಂಡು ವಿಎಒ ಸುಬ್ಬುಲಕ್ಷ್ಮಿ ಅವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಅವರು ವಿರುದುನಗರ ಪೊಲೀಸ್ ವರಿಷ್ಠಾಧಿಕಾರಿಗೆ ಅಧಿಕೃತ ದೂರು ದಾಖಲಿಸಿದ್ದಾರೆ.

ವಿರುದುನಗರ ಪೊಲೀಸ್ ವರಿಷ್ಠಾಧಿಕಾರಿ ಮನೋಹರನ್, ಡಿಎಸ್ಪಿ ಅರ್ಚನಾ, ಸೂಲರ್ಕರೈ ಪೊಲೀಸ್ ಇನ್ಸ್‌ಪೆಕ್ಟರ್ ಎಸ್. ವಿನಾಯಗಂ ನೇತೃತ್ವದ ಪೊಲೀಸ್ ತಂಡ ಕಲೈಸೆಲ್ವಿಯನ್ನು ವಿಚಾರಣೆಗೆ ಒಳಪಡಿಸಿದೆ.

ಮಹಿಳೆಯನ್ನು ವಿಚಾರಣೆಗೆ ಒಳಪಡಿಸಿದಾಗ, ಮಗುವನ್ನು ಮಾರಾಟ ಮಾಡುವ ಹಿಂದೆ ಮದುವೆ ದಲ್ಲಾಳಿಗಳ ತಂಡವೊಂದರ ಕೈವಾಡವಿದೆ ಎಂಬುದನ್ನು ಪೊಲೀಸ್ ತಂಡವು ಪತ್ತೆ ಹಚ್ಚಿದೆ. ಪೊಲೀಸರು ಮಧುರೈನ ಜೈಹಿಂದುಪುರಂಗೆ ಧಾವಿಸಿ ಮಗುವನ್ನು ರಕ್ಷಿಸಿದ್ದಾರೆ.

ಏಜೆಂಟರಂತೆ ವರ್ತಿಸಿದ ಕರುಪ್ಪುಸಾಮಿ, ಕಲಾಸಿಲ್ವಿ, ಮರಿಯಮ್ಮ ಮತ್ತು ಮಹೇಶ್ವರಿ, ಹೆಣ್ಣು ಮಗುವನ್ನು ಖರೀದಿಸಿದ ಮಕ್ಕಳಿಲ್ಲದ ದಂಪತಿ ಮತ್ತು ಮದುವೆ ದಲ್ಲಾಳಿಗಳಾಗಿ ಕಾರ್ಯನಿರ್ವಹಿಸುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.