ETV Bharat / bharat

ಆ್ಯಂಬುಲೆನ್ಸ್​​ಗೆ ಹಣವಿಲ್ಲದೆ ಪರದಾಡಿದ ತಂದೆ..​ ತಮ್ಮನ ಶವ ಮಡಿಲಲ್ಲಿಟ್ಟುಕೊಂಡು ಕುಳಿತ 8ರ ಬಾಲಕ - ಮಧ್ಯಪ್ರದೇಶದಲ್ಲಿ ಬಡ ತಂದೆ ಪರದಾಟ

ಮಧ್ಯಪ್ರದೇಶದಲ್ಲಿ ಬಡ ತಂದೆಯೊಬ್ಬ 2 ವರ್ಷದ ಮಗುವಿನ ಶವವನ್ನು ಮತ್ತೊಬ್ಬ ಮಗನ ಮಡಿಲಲ್ಲಿಟ್ಟು, ಕಡಿಮೆ ದರದಲ್ಲಿ ವಾಹನ ಹುಡುಕಲು ತೆರಳಿರುವ ಮನಕಲಕುವ ಘಟನೆ ಬೆಳಕಿಗೆ ಬಂದಿದೆ.

morena-shamed-innocent-sitting-with-dead-body-of-2-year-old-brother-waiting-for-ambulance
ಮೃತ ಮಗ ಸಾಗಿಸಲು ಕಡಿಮೆ ದರದ ಆಂಬ್ಯುಲೆನ್ಸ್​ ಹುಡುಕುತ್ತಾ ಹೋದ ತಂದೆ: ತಮ್ಮನ ಶವ ಮಡಿಲಿಲ್ಲ ಇಟ್ಟುಕೊಂಡ 8ರ ಬಾಲಕ!
author img

By

Published : Jul 10, 2022, 9:46 PM IST

Updated : Jul 10, 2022, 9:52 PM IST

ಮೊರೆನಾ (ಮಧ್ಯಪ್ರದೇಶ): ಮಧ್ಯಪ್ರದೇಶದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಎರಡು ವರ್ಷದ ಮೃತ ಮಗನ ಶವವನ್ನು ಮನೆಗೆ ಕೊಂಡೊಯ್ಯಲು ತಂದೆಯೊಬ್ಬ ಕಡಿಮೆ ದರದ ವಾಹನ ಹುಡುಕುತ್ತಾ ಅಲೆದಾಡುತ್ತಿದ್ದರೆ, ಎಂಟು ವರ್ಷದ ಬಾಲಕ ತನ್ನ ಸಹೋದರನ ಮೃತದೇಹವನ್ನು ತೊಡೆಯ ಮೇಲೆ ಹಾಕಿಕೊಂಡು ಕುಳಿತಿದ್ದ ಮನಕಲಕುವ ಘಟನೆ ಬೆಳಕಿಗೆ ಬಂದಿದೆ.

ಇಲ್ಲಿನ ಮೊರೆನಾ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಈ ಘಟನೆ ಜರುಗಿದೆ. ಸುಮಾರು ಗಂಟೆಗಳ ಕಾಲ ಬಾಲಕ ತಮ್ಮನ ಮೃತ ದೇಹವನ್ನು ಮಡಿಲಲ್ಲಿ ಇಟ್ಟುಕೊಂಡು ಕುಳಿತಿರುವ ದೃಶ್ಯ ನೋಡಿದವರ ಕಣ್ಣಾಲೆಗಳು ತುಂಬುವಂತೆ ಮಾಡಿದೆ. ಅಲ್ಲದೇ, ಇಂತಹ ಘಟನೆ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ಕೂಡ ವ್ಯಕ್ತವಾದ ಬಳಿಕ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ.

ಹಣವಿಲ್ಲದೇ ಪರದಾಡಿದ ತಂದೆ: ಜಿಲ್ಲೆಯ ಬದ್​ಫ್ರಾ ಗ್ರಾಮದ ನಿವಾಸಿ ಪೂಜಾರಾಮ್ ಎಂಬುವವರ ಎರಡು ವರ್ಷದ ಮಗ ರಾಜಾ (ತಂದೆ-ಮಗ ಇಬ್ಬರ ಹೆಸರೂ ಬದಲಾಯಿಸಲಾಗಿದೆ) ರಕ್ತಹೀನತೆ ಮತ್ತು ಹೊಟ್ಟೆನೋವಿನಿಂದ ಬಳಲುತ್ತಿದ್ದ. ಹೀಗಾಗಿ ಚಿಕಿತ್ಸೆಗೆಂದು ಅಂಬಾಹ್​ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ, ಅಲ್ಲಿನ ವೈದ್ಯರು ಜಿಲ್ಲಾಸ್ಪತ್ರೆಗೆ ರೆಫರ್ ಮಾಡಿದಾಗ ಆ್ಯಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ಕರೆತಂದಿದ್ದರು. ನಂತರ ಆಸ್ಪತ್ರೆಯಿಂದ ಆ್ಯಂಬುಲೆನ್ಸ್ ಹಿಂತಿರುಗಿದೆ.

ಮೃತ ಮಗ ಸಾಗಿಸಲು ಕಡಿಮೆ ದರದ ಆಂಬ್ಯುಲೆನ್ಸ್​ ಹುಡುಕುತ್ತಾ ಹೋದ ತಂದೆ: ತಮ್ಮನ ಶವ ಮಡಿಲಿಲ್ಲ ಇಟ್ಟುಕೊಂಡ 8ರ ಬಾಲಕ!
ಮೃತ ಮಗ ಸಾಗಿಸಲು ಕಡಿಮೆ ದರದ ಆಂಬ್ಯುಲೆನ್ಸ್​ ಹುಡುಕುತ್ತಾ ಹೋದ ತಂದೆ: ತಮ್ಮನ ಶವ ಮಡಿಲಿಲ್ಲ ಇಟ್ಟುಕೊಂಡ 8ರ ಬಾಲಕ!

ಇತ್ತ, ಹೆಚ್ಚಿನ ಚಿಕಿತ್ಸೆಗಾಗಿ ಬಾಲಕ ರಾಜಾನನ್ನು ಕರೆದುಕೊಂಡು ಬಂದಿದ್ದರೂ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಮಗನ ಸಾವಿನ ನಂತರ ತಂದೆ ಪೂಜಾರಾಮ್, ಮಗುವಿನ ಶವವನ್ನು ಗ್ರಾಮಕ್ಕೆ ಕೊಂಡೊಯ್ಯಲು ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗೆ ವಾಹನದ ನೆರವು ಕೇಳಿದ್ದಾರೆ. ಆದರೆ, ಆಸ್ಪತ್ರೆಯವರು ವಾಹನ ಇಲ್ಲ ಎಂದು ಹೇಳಿ ವ್ಯವಸ್ಥೆ ಮಾಡಲು ನಿರಾಕರಿಸಿದ್ದಾರೆ ಎನ್ನಲಾಗ್ತಿದೆ.

ಅಲ್ಲದೇ, ಮೃತ ದೇಹವನ್ನು ಬಾಡಿಗೆ ವಾಹನದಲ್ಲಿ ತೆಗೆದುಕೊಂಡು ಹೋಗಿ ಎಂದು ಬಿಟ್ಟಿ ಸಲಹೆ ನೀಡಿದ್ದಾರೆ. ಇದರಿಂದ ಅಸಹಾಯಕರಾದ ಪೂಜಾರಾಮ್ ಆಸ್ಪತ್ರೆ ಆವರಣದಲ್ಲಿ ನಿಂತಿದ್ದ ಆ್ಯಂಬುಲೆನ್ಸ್‌ವೊಂದನ್ನು ಬಾಡಿಗೆಗೆ ಕೇಳಿದ್ದಾರೆ. ಮೃತದೇಹ ಸಾಗಿಸಲು ಒಂದೂವರೆ ಸಾವಿರ ರೂಪಾಯಿ ಆಗುತ್ತದೆ ಎಂದು ಆ್ಯಂಬುಲೆನ್ಸ್‌ನವರು ಹೇಳಿದ್ದಾರೆ. ಆದರೆ, ಪೂಜಾರಾಮ್ ಬಳಿ ಅಷ್ಟು ಹಣ ಇರಲಿಲ್ಲ.

ತಮ್ಮನ ಶವದೊಂದಿಗೆ ಗಂಟೆಗಟ್ಟಲೆ ಕುಳಿತ ಅಣ್ಣ: ಆ್ಯಂಬುಲೆನ್ಸ್‌ನವರು ಕೇಳಿದಷ್ಟು ಹಣವಿರದ ಕಾರಣಕ್ಕೆ ಬೇರೆ ಯಾವುದಾದರೂ ವಾಹನ ಸಿಗಬಹುದೇನು ಎಂದು ತಿಳಿದು ಪೂಜಾರಾಮ್​ ತಮ್ಮ ಮಗನ ಶವವನ್ನು ಆಸ್ಪತ್ರೆಯ ಹೊರಗೆ ತೆಗೆದುಕೊಂಡು ಬಂದಿದ್ದಾರೆ. ಆಸ್ಪತ್ರೆಯ ಹೊರಗೂ ವಾಹನ ಸಿಗದ ಹಿನ್ನೆಲೆಯಲ್ಲಿ ಪೂಜಾರಾಮ್ ತಮ್ಮ ಇನ್ನೊಬ್ಬ 8 ವರ್ಷದ ಮಗ ಪ್ರೇಮ್ (ಹೆಸರು ಬದಲಿಸಲಾಗಿದೆ) ಇಲ್ಲಿನ ಪಾರ್ಕ್ ಮುಂಭಾಗದ ರಸ್ತೆ ಬದಿಯಲ್ಲಿ ಕೂರಿಸಿ, 2 ವರ್ಷದ ಮಗುವಿನ ಶವವನ್ನು ಮಡಿಲಲ್ಲಿಟ್ಟು, ಕಡಿಮೆ ದರದಲ್ಲಿ ವಾಹನ ಹುಡುಕಲು ತೆರಳಿದ್ದಾರೆ.

ಆದರೆ, ತಂದೆ ಸುಮಾರು ಹೊತ್ತು ಹುಡುಕಿದರೂ ಕಡಿಮೆ ದರದಲ್ಲಿ ವಾಹನ ಸಿಗದ ಕಾರಣ ತಮ್ಮನ ಶವವನ್ನು ಮಡಿಲಲ್ಲಿ ಹೊತ್ತುಕೊಂಡು ಹಲವು ಗಂಟೆಗಳ ಕಾಲ ಅಣ್ಣ ಪ್ರೇಮ್ ಕುಳಿತಿದ್ದ. ರಸ್ತೆಯಲ್ಲಿ ಕುಳಿತು ತಂದೆ ವಾಪಸ್​ ಬರುವುದನ್ನೇ ಎದುರು ನೋಡುತ್ತಿದ್ದ. ಅಲ್ಲದೇ, ಒಮ್ಮೆ ಕಣ್ಣೀರು ಹಾಕುತ್ತ, ಕೆಲವೊಮ್ಮೆ ತಮ್ಮನ ದೇಹವನ್ನು ನೋಡಿ ಮುದ್ದಿಸುತ್ತ ಕುಳಿತಿದ್ದ. ಇದನ್ನು ನೋಡಿದ ದಾರಿಹೋಕರು ಜಮಾವಣೆಗೊಂಡಿದ್ದರು. ಪುಟ್ಟ ಬಾಲಕನ ಮಡಿಲಲ್ಲಿ ಮತ್ತೊಬ್ಬ ಪುಟ್ಟ ಮಗುವಿನ ಶವ ಇರುವ ದೃಶ್ಯ ನೋಡಿದ ಕೆಲವರ ಮನ ಕಲಕಿದೆ.

ಸಹಾಯಕ್ಕೆ ಬಂದ ಪೊಲೀಸ್​: ನಂತರ ಈ ಘಟನೆಯ ಬಗ್ಗೆ ಮಾಹಿತಿ ಪಡೆದ ಕೊತ್ವಾಲಿ ಠಾಣೆಯ ಪೊಲೀಸ್​ ಅಧಿಕಾರಿ ಯೋಗೇಂದ್ರ ಸಿಂಗ್ ಸ್ಥಳಕ್ಕೆ ಆಗಮಿಸಿದ್ದಾರೆ. ಆಗ ಬಾಲಕ ಪ್ರೇಮ್ ಮಡಿಲಿಂದ ಮೃತ ದೇಹವನ್ನು ಎತ್ತಿಕೊಂಡು, ಇಬ್ಬರನ್ನೂ ಜಿಲ್ಲಾ ಆಸ್ಪತ್ರೆಯೊಳಗೆ ಕರೆದೊಯ್ದಿದ್ದಾರೆ. ಇದಾದ ನಂತರ ಪೂಜಾರಾಮ್ ಕೂಡ ಆಗಮಿಸಿದ್ದು, ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿ ಎರಡು ವರ್ಷದ ಬಾಲಕನ ಮೃತದೇಹವನ್ನು ಗ್ರಾಮಕ್ಕೆ ತೆಗೆದುಕೊಂಡು ಹೋಗಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ತಂದೆ ಪೂಜಾರಾಮ್, ನನಗೆ ನಾಲ್ಕು ಜನ ಮಕ್ಕಳು. ಮೂವರು ಗಂಡು ಮತ್ತು ಒಬ್ಬ ಮಗಳು. ಅವರಲ್ಲಿ ಮೃತ ರಾಜಾ ಕಿರಿಯ ಮಗ. ನನ್ನ ಹೆಂಡತಿ ಮೂರ್ನಾಲ್ಕು ತಿಂಗಳ ಹಿಂದೆ ಮನೆ ಬಿಟ್ಟು ತನ್ನ ತಾಯಿಯ ಮನೆಗೆ ಹೋಗಿದ್ದಾಳೆ. ಅಂದಿನಿಂದ ನಾನೇ ಮಕ್ಕಳನ್ನು ನೋಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: 25 ವರ್ಷದಿಂದ ನಾಪತ್ತೆಯಾಗಿದ್ದ ವ್ಯಕ್ತಿ.. ವಿಧವೆಯಂತೆ ಜೀವನ ಸಾಗಿಸುತ್ತಿದ್ದ ಮಹಿಳೆ ಬಾಳಲ್ಲಿ ಹೊಸ ಬೆಳಕು

Last Updated : Jul 10, 2022, 9:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.