ನವದೆಹಲಿ: ಏಪ್ರಿಲ್ 2016 ರಿಂದ ಮಾರ್ಚ್ 2021 ರವರೆಗೆ 80,000 ಹೆಕ್ಟೇರ್ ಅರಣ್ಯ ಭೂಮಿಯನ್ನು ಅರಣ್ಯೇತರ ಬಳಕೆಗೆ ಅನುಮೋದಿಸಲಾಗಿದೆ. ಅರಣ್ಯ (ಸಂರಕ್ಷಣೆ) ಕಾಯಿದೆ, 1980 ರ ಅಡಿ ಅನುಮೋದನೆ ನೀಡಲಾಗಿದೆ ಎಂದು ರಾಜ್ಯ ಪರಿಸರ (MoS) , ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಅಶ್ವಿನಿ ಕುಮಾರ್ ಚೌಬೆ ಲೋಕಸಭೆಗೆ ತಿಳಿಸಿದರು.
ಡಿಎಂಕೆ ಸಂಸದ ತಾಳಿಕೊಟ್ಟೈ ರಾಜುತೇವರ್ ಬಾಲು ಅವರು ಕೇಳಿದ ಪ್ರಶ್ನೆಗಳಿಗೆ ಈ ವೇಳೆ ಉತ್ತರಿಸಲಾಯಿತು. ಲಭ್ಯವಿರುವ ಮಾಹಿತಿಯ ಪ್ರಕಾರ, ಏಪ್ರಿಲ್ 2016 ರಿಂದ ಮಾರ್ಚ್ 2021 ರ ಅವಧಿಯಲ್ಲಿ ಅರಣ್ಯ (ಸಂರಕ್ಷಣೆ) ಕಾಯಿದೆ, 1980 ರ ಅಡಿಯಲ್ಲಿ ಒಟ್ಟು 82893.61 ಹೆಕ್ಟೇರ್ ಅರಣ್ಯ ಭೂಮಿಯನ್ನು ಅರಣ್ಯೇತರ ಬಳಕೆಗಾಗಿ ಅನುಮೋದಿಸಲಾಗಿದೆ ಎಂದು ಚೌಬೆ ಮಾಹಿತಿ ನೀಡಿದರು.
ರಾಷ್ಟ್ರೀಯ ಉದ್ಯಾನಗಳು ಮತ್ತು ಅಭಯಾರಣ್ಯಗಳು ಸೇರಿದಂತೆ ಸಂರಕ್ಷಿತ ಪ್ರದೇಶಗಳಲ್ಲಿ 4000 ಹೆಕ್ಟೇರ್ ಪ್ರದೇಶವನ್ನು 2020 ರಿಂದ 2021 ರವರೆಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿಯ (SCNBWL) ಸ್ಥಾಯಿ ಸಮಿತಿಯು ಶಿಫಾರಸು ಮಾಡಿದೆ ಎಂದು ಅವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: VIDEO: ಡ್ಯಾನ್ಸ್ ಬಾರ್ ರಹಸ್ಯ ನೆಲಮಾಳಿಗೆಯಲ್ಲಿ ಅಡಗಿ ಕುಳಿತಿದ್ದ 17 ಬಾರ್ ಗರ್ಲ್ಸ್ ಪತ್ತೆ ಹಚ್ಚಿದ್ದೇ ರೋಚಕ
ಆದಾಗ್ಯೂ, ಅರಣ್ಯ, ವನ್ಯಜೀವಿ ಮತ್ತು ಇತರ ಪರಿಸರ ಅನುಮತಿಗಳಿಗಾಗಿ ಪ್ರಸ್ತಾವನೆಗಳನ್ನು ಸಲ್ಲಿಸುವ ಮತ್ತು ಪ್ರಕ್ರಿಯೆಗೊಳಿಸುವ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರವು ಆನ್‌ಲೈನ್ ಪೋರ್ಟಲ್ ಅಂದರೆ PARIVESH (Pro Active and Responsive facilitation by Interactive and Virtuous Environmental Single window Hub) ಅನ್ನು ಪ್ರಾರಂಭಿಸಿದೆ ಎಂದು ಹೇಳಿದರು.