ETV Bharat / bharat

ಉತ್ತರಾಖಂಡ ಮದರಸಾಗಳಲ್ಲಿ 749 ಹಿಂದೂ ಮಕ್ಕಳಿಗೆ ಶಿಕ್ಷಣ: ಶಾಲೆ ಬಿಟ್ಟು ಮದರಸಾ ಸೇರಿದ್ದರ ಬಗ್ಗೆ ತನಿಖೆಗೆ ಆಗ್ರಹ

author img

By ETV Bharat Karnataka Team

Published : Nov 7, 2023, 10:59 PM IST

ಉತ್ತರಾಖಂಡದ ಮದರಸಾಗಳಲ್ಲಿ ಹಿಂದು ಮಕ್ಕಳು ಶಿಕ್ಷಣ ಪಡೆಯುತ್ತಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಈ ಬಗ್ಗೆ ತನಿಖೆ ನಡೆಸಲು ಸರ್ಕಾರ ಮುಂದಾಗಿದೆ.

ಮದರಸಾಗಳಲ್ಲಿ ಹಿಂದು ಮಕ್ಕಳು ಶಿಕ್ಷಣ
ಮದರಸಾಗಳಲ್ಲಿ ಹಿಂದು ಮಕ್ಕಳು ಶಿಕ್ಷಣ

ಡೆಹ್ರಾಡೂನ್ (ಉತ್ತರಾಖಂಡ) : ಶಾಲೆಗಳಲ್ಲಿ ಮಕ್ಕಳಿಗೆ ಕಿರುಕುಳ ನೀಡುತ್ತಿರುವ ಬಗ್ಗೆ ಉತ್ತರಾಖಂಡ್ ಮಕ್ಕಳ ರಕ್ಷಣಾ ಆಯೋಗವು ನಡೆಸಿದ ತನಿಖೆಯಲ್ಲಿ ಅಚ್ಚರಿಯ ಮಾಹಿತಿಯೊಂದು ಹೊರಬಿದ್ದಿದೆ. 30 ಮದರಸಾಗಳಲ್ಲಿ 749 ಮುಸ್ಲಿಮೇತರ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಮುಸ್ಲಿಮೇತರ ಮಕ್ಕಳು ಮದರಸಾಗಳಲ್ಲಿ ಶಿಕ್ಷಣ ಪಡೆಯುತ್ತಿರುವುದರ ಹಿಂದಿನ ಉದ್ದೇಶ ಏನು ಮತ್ತು ಎಷ್ಟು ದಿನಗಳಿಂದ ಈ ಶಿಕ್ಷಣ ಸಾಗುತ್ತಿದೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ವರದಿ ಕಂಡು ಮಕ್ಕಳ ಆಯೋಗ ಅಚ್ಚರಿ: ಶಾಲೆಗಳಲ್ಲಿ ಮಕ್ಕಳ ಮೇಲೆ ಹಲ್ಲೆ, ಕಿರುಕುಳದ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದವು. ಅವುಗಳ ವಿಚಾರಣೆಗೆ ಪ್ರತಿ ಶಾಲೆಗಳಲ್ಲಿ ತನಿಖೆ ನಡೆಸಿದಾಗ ಹಿಂದು ಸಮುದಾಯದ ಮಕ್ಕಳು ಹರಿದ್ವಾರ, ಉಧಮ್ ಸಿಂಗ್ ನಗರ ಮತ್ತು ನೈನಿತಾಲ್‌ ಜಿಲ್ಲೆಗಳಲ್ಲಿನ ಮದರಸಾಗಳಲ್ಲಿ ಶಿಕ್ಷಣ ಪಡೆಯುತ್ತಿರುವುದು ಕಂಡುಬಂದಿತು. ಇದು ಅಚ್ಚರಿಗೂ ಕಾರಣವಾಗಿದೆ. ಶಾಲೆಗಳಿದ್ದರೂ ಮಕ್ಕಳು ಮದರಸಾಗಳಲ್ಲಿ ಶಿಕ್ಷಣ ಪಡೆಯುತ್ತಿರುವುದರ ಬಗ್ಗೆ ತನಿಖೆ ನಡೆಸಲು ಶಿಕ್ಷಣ ಇಲಾಖೆ ತನಿಖೆಗೆ ಸೂಚಿಸಿದೆ.

ಮದರಸಾಗಳಲ್ಲಿ ಹಿಂದೂ ಮಕ್ಕಳು: ಮಕ್ಕಳ ಆಯೋಗದ ಅಧ್ಯಕ್ಷೆ ಗೀತಾ ಖನ್ನಾ ಅವರನ್ನು ಈಟಿವಿ ಭಾರತ್​ ಸಂಪರ್ಕಿಸಿದಾಗ, ಮೂರು ಜಿಲ್ಲೆಗಳ ಮದರಸಾಗಳಲ್ಲಿ ಅನೇಕ ಹಿಂದೂ ಮಕ್ಕಳು ಓದುತ್ತಿರುವುದು ಕಂಡು ಬಂದಿದೆ. ಈ ಬಗ್ಗೆ ಉತ್ತರಾಖಂಡ ಮದರಸಾ ಕೌನ್ಸಿಲ್‌ನಿಂದ ವರದಿ ಕೇಳಲಾಗಿದೆ. ಮೂರು ಜಿಲ್ಲೆಗಳ ಮದರಸಾಗಳಲ್ಲಿ ಓದುತ್ತಿರುವ ಮುಸ್ಲಿಮೇತರ ಮಕ್ಕಳ ಸಂಖ್ಯೆ 749 ಎಂದು ತಿಳಿಸಿದರು.

ಮಕ್ಕಳನ್ನು ಶಾಲೆಗಳಿಗೆ ಕಳುಹಿಸದೆ ಮದರಸಾಗಳಲ್ಲಿ ಶಿಕ್ಷಣಕ್ಕೆ ಪ್ರವೇಶ ನೀಡಿರುವುದರ ಹಿಂದೆ ಹಿಂದೂ ಕುಟುಂಬಗಳ ಮೇಲೆ ಒತ್ತಡ ಹೇರಲಾಗಿದೆಯಾ ಎಂಬುದನ್ನು ಪತ್ತೆ ಹಚ್ಚುವಲ್ಲಿ ಆಯೋಗ ನಿರತವಾಗಿದೆ. ಜೊತೆಗೆ ಆರ್ಥಿಕ ಲಾಭ, ದುರಾಸೆ, ಅಜ್ಞಾನ ಇದೆಯೇ ಎಂಬ ಬಗ್ಗೆ ಮಕ್ಕಳ ಆಯೋಗದ ಜೊತೆಗೆ ಶಿಕ್ಷಣ ಇಲಾಖೆಯೂ ತನಿಖೆ ನಡೆಸುತ್ತಿದೆ.

ಮದರಸಾ ಮಂಡಳಿ ಅಧ್ಯಕ್ಷರ ಹೇಳಿಕೆ: ಈ ಕುರಿತು ಉತ್ತರಾಖಂಡ ಮದರಸಾ ಮಂಡಳಿ ಅಧ್ಯಕ್ಷ ಮುಫ್ತಿ ಶಹಮೂನ್ ಕಾಜ್ಮಿ ಮಾತನಾಡಿ, ಈ ಕುರಿತ ವರದಿಯನ್ನು ಮಕ್ಕಳ ರಕ್ಷಣಾ ಆಯೋಗಕ್ಕೆ ಸಲ್ಲಿಸಲಾಗಿದೆ. ಮುಸ್ಲಿಮೇತರ ಮಕ್ಕಳು ಮದರಸಾಗಳಲ್ಲಿ ಓದುತ್ತಿದ್ದರೂ ಅವರಿಗೆ ಯಾವುದೇ ರೀತಿಯ ಉರ್ದು-ಪರ್ಷಿಯನ್ ಶಿಕ್ಷಣ ಅಥವಾ ಮುಸ್ಲಿಂ ಮಕ್ಕಳು ತೆಗೆದುಕೊಳ್ಳುತ್ತಿರುವ ಶಿಕ್ಷಣವನ್ನು ನೀಡುತ್ತಿಲ್ಲ. ಬದಲಿಗೆ ಅವರನ್ನು ಎನ್‌ಸಿಇಆರ್‌ಟಿ ಕೋರ್ಸ್‌ನಡಿಯ ಪಠ್ಯವನ್ನು ಬೋಧನೆ ಮಾಡಲಾಗುತ್ತಿದೆ ಎಂದರು. ಧಾರ್ಮಿಕ ಅಥವಾ ಇತರ ಒತ್ತಡದಲ್ಲಿ ಮುಸ್ಲಿಮೇತರ ಮಕ್ಕಳನ್ನು ಮದರಸಾಗಳಲ್ಲಿ ಪ್ರವೇಶ ನೀಡಲಾಗಿದೆ ಎಂಬುದು ಸುಳ್ಳು ಎಂದು ಅವರು ಹೇಳಿದ್ದಾರೆ.

ಸರ್ಕಾರಕ್ಕೆ ಪತ್ರ ಬರೆದ ಆಯೋಗ: ಉತ್ತರಾಖಂಡದ ಮದರಸಾಗಳಲ್ಲಿ ಹಿಂದೂಯೇತರ ಮಕ್ಕಳು ಯಾವಾಗಿನಿಂದ ಶಿಕ್ಷಣ ಪಡೆಯುತ್ತಿದ್ದಾರೆ. ಇದರ ಹಿಂದಿನ ಉದ್ದೇಶವೇನು ಎಂಬ ಬಗ್ಗೆ ತನಿಖೆ ನಡೆಸಲು ಮಕ್ಕಳ ಹಕ್ಕುಗಳ ಆಯೋಗ ಸರ್ಕಾರಕ್ಕೆ ಪತ್ರ ಬರೆದಿದೆ. ಇದರಲ್ಲಿ ರಾಜಕೀಯವೂ ಇರುವ ಶಂಕೆ ಇದೆ.

ಇದನ್ನೂ ಓದಿ: ಚುನಾವಣಾ ಪ್ರಚಾರದ ವೇಳೆ ರಥಕ್ಕೆ ವಿದ್ಯುತ್​ ಸ್ಪರ್ಶ; ಅಮಿತ್​ ಶಾ ಅಪಾಯದಿಂದ ಪಾರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.