ನವದೆಹಲಿ: ದೇಶದಲ್ಲಿ ವ್ಯಾಕ್ಸಿನೇಷನ್ ಅಭಿಯಾನ ಬಿರುಸಿನಿಂದ ಸಾಗಿದ್ದು, ಈವರೆಗೆ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ 41.69 ಕೋಟಿ ವ್ಯಾಕ್ಸಿನ್ ಡೋಸ್ಗಳನ್ನು ಪೂರೈಸಿದೆ. 18,16,140 ಡೋಸ್ಗಳು ಪೂರೈಕೆ ಹಂತದಲ್ಲಿವೆ ಎಂದು ಭಾರತ ಸರ್ಕಾರ ತಿಳಿಸಿದೆ. ರಾಜ್ಯಗಳು, ಕೇಂದ್ರಾಡಳಿತದ ಆಸ್ಪತ್ರೆಗಳಲ್ಲಿ ಇನ್ನೂ 2.74 ಕೋಟಿ ಲಸಿಕೆ ಡೋಸ್ಗಳು ಲಭ್ಯವಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಇದನ್ನೂ ಓದಿ: ದೇಶದಲ್ಲಿ 38 ಸಾವಿರ ಹೊಸ COVID ಕೇಸ್.. ಚೇತರಿಕೆ ಪ್ರಮಾಣ ಶೇ.97.31
ದೇಶದಲ್ಲಿ ಈವರೆಗೆ 39.96 ಕೋಟಿ ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ICMR) ತಿಳಿಸಿದೆ.