ETV Bharat / bharat

Transformer explodes: ಉತ್ತರಾಖಂಡದಲ್ಲಿ ಟ್ರಾನ್ಸಫಾರ್ಮರ್​ ಸ್ಫೋಟ.. 15 ಮಂದಿ ಸಾವು, ಹಲವರಿಗೆ ಗಾಯ

author img

By

Published : Jul 19, 2023, 1:22 PM IST

Updated : Jul 19, 2023, 2:50 PM IST

ಉತ್ತರಾಖಂಡದಲ್ಲಿ ವಿದ್ಯುತ್​ಪರಿವರ್ತಕ (ಟ್ರಾನ್ಸಫಾರ್ಮರ್) ಸ್ಫೋಟವಾಗಿ 15 ಮಂದಿ ದಾರುಣವಾಗಿ ಸಾನವನ್ನಪ್ಪಿದ್ದಾರೆ.

ಉತ್ತರಾಖಂಡದಲ್ಲಿ ವಿದ್ಯುತ್​ಪರಿವರ್ತಕ ಸ್ಪೋಟ
ಉತ್ತರಾಖಂಡದಲ್ಲಿ ವಿದ್ಯುತ್​ಪರಿವರ್ತಕ ಸ್ಪೋಟ

ಚಮೋಲಿ (ಉತ್ತರಾಖಂಡ): ಉತ್ತರಾಖಂಡದ ಚಮೋಲಿಯಲ್ಲಿ ಇಂದು ಬೆಳಗ್ಗೆ ಭೀಕರ ದುರಂತ ಸಂಭವಿಸಿದೆ. ಅಲಕನಂದಾ ನದಿ ದಡದಲ್ಲಿ ನಮಾಮಿ ಗಂಗೆ ಯೋಜನೆಯ ನಿರ್ಮಾಣ ಹಂತದಲ್ಲಿರುವ ಒಳಚರಂಡಿ ಸಂಸ್ಕರಣಾ ಘಟಕದಲ್ಲಿ ವಿದ್ಯುತ್​ಪರಿವರ್ತಕ (ಟ್ರಾನ್ಸಫಾರ್ಮರ್) ಸ್ಫೋಟವಾಗಿ, 15 ಮಂದಿ ಸಾವನ್ನಪ್ಪಿದ ಬಗ್ಗೆ ಮಾಹಿತಿ ಸಿಕ್ಕಿದೆ. ವಿದ್ಯುತ್​ ಸ್ಪರ್ಶಕ್ಕೆ 20 ರಿಂದ 25 ಜನರು ಪ್ರಾಣ ಕಳೆದುಕೊಂಡ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಈ ಘಟನೆ ಭಾರೀ ಭೀಕರವಾಗಿದ್ದು, ಕೆಲ ದೇಹಗಳು ಸುಟ್ಟು ಕರಕಲಾಗಿವೆ ಎಂದು ತಿಳಿದುಬಂದಿದೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಎಲ್ಲರನ್ನೂ ಪಿಪಾಲಕೋಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಮತ್ತು ರಕ್ಷಣಾ ತಂಡಗಳು ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ಘಟನೆಯ ಬೆನ್ನಲ್ಲೇ ಮುಖ್ಯಮಂತ್ರಿ ಪುಷ್ಕರ್​ ಸಿಂಗ್​ ಧಾಮಿ ಅವರು ಈ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ.

ದುರ್ಘಟನೆಯಲ್ಲಿ ಈವರೆಗೆ 15 ಮಂದಿ ಸಾವನ್ನಪ್ಪಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಟ್ರಾನ್ಸ್​ಫಾರ್ಮರ್​ ಸ್ಫೋಟವಾಗಲು ಕಾರಣವೇನು ಎಂಬುದರ ಬಗ್ಗೆ ತನಿಖೆಗೆ ಸೂಚಿಸಲಾಗಿದೆ. ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಪರಿಹಾರ ಕೂಡ ಘೋಷಣೆ ಮಾಡಬಹುದು ಎಂದು ಚಮೋಲಿ ಜಿಲ್ಲಾ ಉಸ್ತುವಾರಿ ಸಚಿವ ಧನ್​ಸಿಂಗ್ ರಾವತ್ ತಿಳಿಸಿದ್ದಾರೆ.

  • चमोली में करंट लगने से कई लोगों के हताहत होने का अत्यंत पीड़ादायक समाचार प्राप्त हुआ। दुर्घटना में घायल हुए लोगों को उपचार हेतु नजदीकी अस्पताल भेज दिया गया है।

    इस दुर्भाग्यपूर्ण घटना की मजिस्ट्रियल जांच के आदेश दे दिए हैं।

    ईश्वर से दिवंगत आत्माओं की शांति एवं घायलों के शीघ्र…

    — Pushkar Singh Dhami (@pushkardhami) July 19, 2023 " class="align-text-top noRightClick twitterSection" data=" ">

ಚಮೋಲಿಯ ಅಲಕನಂದಾ ನದಿಯ ದಡದಲ್ಲಿ ನಮಾಮಿ ಗಂಗೆ ಯೋಜನೆಯಡಿ ಒಳಚರಂಡಿ ಸಂಸ್ಕರಣಾ ಘಟಕ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಎರಡು ದಿನಗಳ ಹಿಂದೆ ಓರ್ವ ವ್ಯಕ್ತಿಗೆ ವಿದ್ಯುತ್​ ಸ್ಪರ್ಶವಾಗಿತ್ತು. ಆತನನ್ನು ರಕ್ಷಿಸಲು ಹೋದವರೂ ಕರೆಂಟ್​ ಶಾಕ್​ಗೆ ಒಳಗಾಗಿದ್ದರು.

"ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮತ್ತು ಐವರು ಹೋಮ್ ಗಾರ್ಡ್‌ಗಳು ಸೇರಿದಂತೆ ಸುಮಾರು 15 ಜನರು ಸಾವನ್ನಪ್ಪಿದ್ದಾರೆ. ತನಿಖೆ ನಡೆಯುತ್ತಿದೆ. ಅದರ ಬಳಿಕ ಹೆಚ್ಚಿನ ಮಾಹಿತಿ ಸಿಗಲಿದೆ" ಎಂದು ಉತ್ತರಾಖಂಡದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ವಿ ಮುರುಗೇಶನ್ ತಿಳಿಸಿದರು.

ಸಿಎಂ ಧಾಮಿ ಸಂತಾಪ: ಘಟನೆ ತೀವ್ರ ಸಂತಾಪ ಸೂಚಿಸಿರುವ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರು, ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜೊತೆಗೆ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಸದ್ಯ ಗಾಯಾಳುಗಳನ್ನು ಹೈಯರ್ ಸೆಂಟರ್ ರಿಷಿಕೇಶಕ್ಕೆ ಸ್ಥಳಾಂತರಿಸಲಾಗುತ್ತಿದೆ.

  • #WATCH करंट लगने से 15 लोगों की मृत्यु की सूचना मिल रही है। आगे की विधिक कार्रवाई जारी है। एक पुलिस सब-इंस्पेक्टर और 3 होम गार्ड भी हादसे का शिकार हुए हैं। जांच जारी है: वी. मुरुगेसन, ADG लॉ &ऑर्डर, देहरादून https://t.co/bZS7NyIFBJ pic.twitter.com/IZjuk5E03N

    — ANI_HindiNews (@AHindinews) July 19, 2023 " class="align-text-top noRightClick twitterSection" data=" ">

ಅವಘಡಕ್ಕೆ ಕಾರಣವೇನು?: ಚಮೋಲಿಯ ಅಲಕನಂದಾ ದಡದಲ್ಲಿ ನಮಾಮಿ ಗಂಗೆ ಯೋಜನೆಯ ಕಾಮಗಾರಿ ನಡೆಯುತ್ತಿದೆ. ನಿನ್ನೆ ರಾತ್ರಿ ಸ್ಥಳದಲ್ಲಿ ವಿದ್ಯುತ್ ಸ್ಥಗಿತಗೊಂಡಿತ್ತು. ಇಂದು ಬೆಳಿಗ್ಗೆ ಸಂಪರ್ಕ ಕಲ್ಪಿಸಲಾಯಿತು. ಆಗ ವಿದ್ಯುತ್​ ಪ್ರವಹಿಸಿದೆ. ಅಲ್ಲಿದ್ದವರು ಶಾಕ್​ಗೆ ಒಳಗಾಗಿ ಸಾವನ್ನಪ್ಪಿದ್ದಾರೆ. ಇದು ತಿಳಿದ ಜನರು ಅಲ್ಲಿಗೆ ಬಂದಾಗ ಅವರಿಗೂ ವಿದ್ಯುತ್​ ಪ್ರವಹಿಸಿದೆ ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಭಾರಿ ಸ್ಫೋಟಕ್ಕೆ ಸಂಚು: ಐವರು ಶಂಕಿತ ಉಗ್ರರ ಬಂಧನ, ತನಿಖೆ ತೀವ್ರ

Last Updated : Jul 19, 2023, 2:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.