ETV Bharat / bharat

OBC Bill - ಒಬಿಸಿ ತಿದ್ದುಪಡಿ ಮಸೂದೆಗೆ ಬೆಂಬಲ ಸೂಚಿಸಲು ವಿಪಕ್ಷಗಳ ನಿರ್ಧಾರ - ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ

ರೈತರ ಪ್ರತಿಭಟನೆ, ಪೆಗಾಸಸ್ ಸ್ಪೈವೇರ್ ಪ್ರಕರಣ ವಿಚಾರವಾಗಿ ಸರ್ಕಾರದ ನಿಲುವು ವಿರೋಧಿಸುತ್ತಾ ಬಂದಿರುವ ಕೇಂದ್ರದ ವಿಪಕ್ಷಗಳು ಇದೀಗ ಕೇಂದ್ರ ಹೊರ ತಂದಿರುವ ಒಬಿಸಿ ತಿದ್ದುಪಡಿ ಮಸೂದೆಗೆ ಬೆಂಬಲಿಸಲು ನಿರ್ಧರಿಸಿವೆ.

ವಿಪಕ್ಷಗಳು
Opposition parties
author img

By

Published : Aug 9, 2021, 7:10 PM IST

ನವದೆಹಲಿ: ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರಗಳು ಪ್ರತ್ಯೇಕವಾಗಿ ತಮ್ಮದೇ ಇತರ ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿ ತಯಾರಿಸಲು ಅಧಿಕಾರ ನೀಡುವ ಮಹತ್ವದ ಒಬಿಸಿ ತಿದ್ದುಪಡಿ ಮಸೂದೆಗೆ ವಿಪಕ್ಷಗಳು ಒಪ್ಪಿಗೆ ನೀಡಲು ನಿರ್ಧರಿಸಿವೆ.

ಇಂದು ವಿರೋಧ ಪಕ್ಷಗಳ ನಾಯಕರು ಮಸೂದೆ ಸಂಬಂಧ ಸಭೆ ನಡೆಸಿದ್ದರು. ಸಂಸತ್ತಿನಲ್ಲಿ ಇಂದು ಮಂಡಿಸಲಾದ ಸದರಿ ಮಸೂದೆಯು ರಾಜ್ಯಗಳಿಗೆ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸುವ ಶಕ್ತಿ ನೀಡುತ್ತದೆ. ಕಾರ್ಯತಂತ್ರದ ಸಭೆಯಲ್ಲಿ ಹಿಂದುಳಿದ ವರ್ಗಗಳನ್ನು ಗುರುತಿಸಲು ರಾಜ್ಯಗಳ ಶಕ್ತಿಯನ್ನು ಪುನಃ ಸ್ಥಾಪಿಸುವುದಕ್ಕೋಸ್ಕರ ಮಸೂದೆ ಅಂಗೀಕರಿಸುವಲ್ಲಿ ಕೇಂದ್ರದೊಂದಿಗೆ ಸಹಕರಿಸಲು ವಿರೋಧ ಪಕ್ಷಗಳು ನಿರ್ಧರಿಸಿದವು.

ಇದು ಸಾಮಾಜಿಕ ಮತ್ತು ಆರ್ಥಿಕ ಹಿಂದುಳಿದ ವರ್ಗಗಳನ್ನು ಗುರುತಿಸಲು ರಾಜ್ಯಗಳಿಗೆ ಅಧಿಕಾರ ಮರಳಿ ನೀಡುವ ತಿದ್ದುಪಡಿಯಾಗಿದೆ. ಮೇ 2021 ರಲ್ಲಿ ಸುಪ್ರೀಂಕೋರ್ಟ್ ಕೇಂದ್ರವು ಮಾತ್ರ ಹಾಗೆ ಮಾಡಬಹುದು ಎಂದು ತೀರ್ಪು ನೀಡಿತ್ತು. ದೇಶದ ಅರ್ಧಕ್ಕಿಂತ ಹೆಚ್ಚು ಜನಸಂಖ್ಯೆಯು ಹಿಂದುಳಿದ ವರ್ಗಕ್ಕೆ ಸೇರಿದೆ. ಈ ಮಸೂದೆ ಮಂಡಿಸಿದ ದಿನವೇ ಅಂಗೀಕರಿಸಲಾಗುತ್ತದೆ ಎಂದು ರಾಜ್ಯಸಭೆಯ ಪ್ರತಿ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಓದಿ: ಹೈದರಾಬಾದ್​ ಏರ್​ಪೋರ್ಟ್​ಗೆ 'ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ' ಪಟ್ಟ

ಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ), ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಟಿಎಂಸಿ), ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ), ಸಮಾಜವಾದಿ ಪಕ್ಷ (ಎಸ್‌ಪಿ), ಕಮ್ಯುನಿಸ್ಟ್ ಪಕ್ಷದ ಸದಸ್ಯರು, ಭಾರತ (ಮಾರ್ಕ್ಸ್ ವಾದಿ) (ಸಿಪಿಎಂ), ರಾಷ್ಟ್ರೀಯ ಜನತಾದಳ (ಆರ್ ಜೆಡಿ), ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಇತರ ವಿರೋಧ ಪಕ್ಷಗಳ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.

ರೈತರ ಮುಂದುವರಿದ ಪ್ರತಿಭಟನೆ ಹಾಗೂ ಪೆಗಾಸಸ್ ಗೂಢಚರ್ಯೆ ವಿಷಯಗಳಲ್ಲಿ ಸರ್ಕಾರದ ನಿಲುವನ್ನು ವಿರೋಧಿಸುತ್ತಾ ಬಂದಿರುವ ವಿಪಕ್ಷಗಳು ಇಂದು ಒಬಿಸಿ ತಿದ್ದುಪಡಿ ಮಸೂದೆಗೆ ಬೆಂಬಲ ನೀಡಿರುವುದು ಗಮನಾರ್ಹ. ಈ ಮಸೂದೆ ವಿಚಾರವನ್ನು ಬಹಳ ಗಂಭೀರವಾಗಿ ಪರಿಗಣಿಸಿರುವ ವಿಪಕ್ಷಗಳು ಈ ಮಸೂದೆ ಮೇಲಿನ ಚರ್ಚೆ, ವೋಟಿಂಗ್ ಹಾಗೂ ಅನುಮೋದನೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಸದನದಲ್ಲಿ ತಾವು ನಡೆಸುತ್ತಿರುವ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಕೈಬಿಡುವ ತಂತ್ರಕ್ಕೂ ಮೊರೆ ಹೋಗಿವೆ ಎಂದು ವರದಿಗಳು ಹೇಳುತ್ತಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.