ETV Bharat / bharat

ಹೊಸ ಸಂಸತ್ ಕಟ್ಟಡದಲ್ಲಿ ಮುಂಗಾರು ಅಧಿವೇಶನ ಸಾಧ್ಯತೆ - ಸಂಸತ್ತಿನ ಕಟ್ಟಡದ ನಿರ್ಮಾಣ

ಹೊಸ ಸಂಸತ್​ ಭವನದಲ್ಲಿ ಮುಂಗಾರು ಅಧಿವೇಶನ ನಡೆಯುವ ನಿರೀಕ್ಷೆ ಇದೆ. ಕಟ್ಟಡದ ನಿರ್ಮಾಣ ಕಾಮಗಾರಿಗಳನ್ನು ಪೂರ್ಣಗೊಳಿಸಲು ಜುಲೈ 2023ಕ್ಕೆ ಗಡುವು ನಿಗದಿಗೊಳಿಸಲಾಗಿದೆ.

ಹೊಸ ಸಂಸತ್ ಕಟ್ಟಡ
ಹೊಸ ಸಂಸತ್ ಕಟ್ಟಡ
author img

By

Published : Apr 10, 2023, 11:03 PM IST

ನವದೆಹಲಿ: ಮುಂಗಾರು ಅಧಿವೇಶನವು ಹೊಸ ಸಂಸತ್​ ಕಟ್ಟಡದಲ್ಲಿ ನಡೆಯುವ ನಿರೀಕ್ಷೆಯಿರುವುದರಿಂದ ನಿರ್ಮಾಣ ಚಟುವಟಿಕೆಗಳನ್ನು ಪೂರ್ಣಗೊಳಿಸಲು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಜುಲೈ 2023 ಕ್ಕೆ ಹೊಸ ಗಡುವನ್ನು ವಿಸ್ತರಿಸಿದೆ ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

"ಈ ಹಿಂದೆ, ಸಂಸತ್ತಿನ ಬಜೆಟ್ ಅಧಿವೇಶನವು ಹೊಸ ಕಟ್ಟಡದಲ್ಲಿ ನಡೆಯಬೇಕಿತ್ತು. ಕೆಲವು ಕಾಮಗಾರಿಗಳು ಇನ್ನೂ ಬಾಕಿ ಉಳಿದಿರುವುದರಿಂದ ಜುಲೈನಲ್ಲಿ ನಿರ್ಮಾಣ ಚಟುವಟಿಕೆಗಳನ್ನು ಪೂರ್ಣಗೊಳಿಸಲು ಹೊಸ ಗಡುವು ನೀಡಲಾಗಿದೆ" ಎಂದು ಹೇಳಿದ್ದಾರೆ. ಸದ್ಯಕ್ಕೆ ಯಾವುದೇ ನಿಗದಿತ ದಿನಾಂಕವನ್ನು ಅಂತಿಮಗೊಳಿಸಿಲ್ಲ. ಆದರೂ ಹೊಸ ಸಂಸತ್ತಿನ ಸ್ಥಿತಿಯನ್ನು ಪರಿಶೀಲಿಸಿದ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: 'ವಿಶ್ವನಾಯಕನ ವನ್ಯಜೀವಿ ಕಾಳಜಿ': ಮೋದಿ ಬಂಡೀಪುರ ಭೇಟಿಗೆ ಕೆವಿನ್ ಪೀಟರ್ಸನ್ ಮೆಚ್ಚುಗೆ

ಹಿರಿಯ ಅಧಿಕಾರಿಗಳೊಂದಿಗೆ ಮೋದಿ ಸಂವಾದ: ನಿರ್ಮಾಣ ಸ್ಥಳಕ್ಕೆ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ದಿಢೀರ್ ಭೇಟಿ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ನೂತನ ಸಂಸತ್ ಭವನಕ್ಕೆ ಭೇಟಿ ನೀಡಿದ ಮೋದಿ ಅವರು ಹಿರಿಯ ಅಧಿಕಾರಿಗಳೊಂದಿಗೆ ಸಂವಾದ ನಡೆಸಿ ಪ್ರಸ್ತುತ ಪರಿಸ್ಥಿತಿಯ ಅವಲೋಕನ ನಡೆಸಿದ್ದರು. ಜನವರಿಯಲ್ಲಿ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಹೊಸ ಸಂಸತ್ ಕಟ್ಟಡವನ್ನು ಪೂರ್ಣಗೊಳಿಸಲು ಕೆಲವು ತಿಂಗಳು ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದರು.

ಇದನ್ನೂ ಓದಿ : ಭಾರತದ ಸೂಜಿ ಮೊನೆಯಷ್ಟು ಜಾಗವನ್ನೂ ಅತಿಕ್ರಮಿಸಲು ಬಿಡೆವು: ಚೀನಾಗೆ ಅಮಿತ್​ ಶಾ ಎಚ್ಚರಿಕೆ

ಹೊಸ ಕಟ್ಟಡದಲ್ಲಿರುವ ಲೋಕಸಭೆಯ ಕೊಠಡಿಯು ಮೊದಲ ಮತ್ತು ಎರಡನೇ ಮಹಡಿಗಳಲ್ಲಿ ಕೆಲವು ಕಾಮಗಾರಿಗಳೊಂದಿಗೆ ಪೂರ್ಣಗೊಂಡಿದ್ದು, ಸಚಿವರ ಕಚೇರಿಗಳು ಮತ್ತು ಸಂಸತ್ತಿನ ಸಚಿವಾಲಯವು ಪೂರ್ಣಗೊಳ್ಳುವ ಹಂತದಲ್ಲಿದೆ. ಹೊಸ ರಾಜ್ಯಸಭಾ ಚೇಂಬರ್‌ನ ಕೆಲಸವೂ ವೇಗವಾಗಿ ನಡೆಯಲಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಇದನ್ನೂ ಓದಿ : ಹೊಸ ಸಂಸತ್ ಭವನ ನಿರ್ಮಾಣ: ಆನ್​ಲೈನ್​ ಬಿಡ್​ಗೆ ಅರ್ಹತೆ ಪಡೆದ 3 ಸಂಸ್ಥೆಗಳು

ಇದನ್ನೂ ಓದಿ: ಹೊಸ ಸಂಸತ್​​ ಭವನ ನಿರ್ಮಾಣದ ಕಾರ್ಯ ಇಂದಿನಿಂದ ಪ್ರಾರಂಭ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.