ETV Bharat / bharat

Monsoon Session.. 8ನೇ ದಿನವೂ ಮುಂದುವರಿದ ಪ್ರತಿಭಟನೆ, ಗದ್ದಲಕ್ಕೆ ಕಲಾಪ ಬಲಿ - ಕಾಂಗ್ರೆಸ್​ ಸಂಸದರ ಅಮಾನತು

ಸಂಸತ್​ ಮಳೆಗಾಲದ ಅಧಿವೇಶನ- ಬೆಲೆ ಏರಿಕೆ, ಅಗತ್ಯ ವಸ್ತುಗಳ ಮೇಲಿನ ಜಿಎಸ್​ಟಿ ಖಂಡಿಸಿ 8 ದಿನವೂ ಮುಂದುವರಿದ ಪ್ರತಿಭಟನೆ- ಪ್ರತಿಪಕ್ಷಗಳ ಗದ್ದಲಕ್ಕೆ ಕಲಾಪ ಬಲಿ

monsoon-session
ಸಂಸತ್​ ಅಧಿವೇಶನ
author img

By

Published : Jul 26, 2022, 12:35 PM IST

ನವದೆಹಲಿ: ಬೆಲೆ ಏರಿಕೆ ಮತ್ತು ಅಗತ್ಯ ವಸ್ತುಗಳ ಮೇಲೆ ವಿಧಿಸಲಾದ ಸರಕು ಮತ್ತು ಸೇವಾ ತೆರಿಗೆ(ಜಿಎಸ್​ಟಿ) ವಿರುದ್ಧ ಪ್ರತಿಪಕ್ಷಗಳು ತೀವ್ರ ನಡೆಸಿದ ತೀವ್ರ ಗದ್ದಲದಿಂದ ಉಭಯ ಸದನಗಳನ್ನು ಮುಂದೂಡಲಾಗಿದೆ.

ಇಂದು ಬೆಳಗ್ಗೆ 11 ಗಂಟೆಗೆ ಸದನ ಸಮಾವೇಶಗೊಂಡ ಬಳಿಕ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜುಲೈ 26 ಅನ್ನು ಕಾರ್ಗಿಲ್ ವಿಜಯ್ ದಿವಸ್ ಎಂದು ಆಚರಿಸಲಾಗುತ್ತದೆ. ರಾಷ್ಟ್ರದ ವೀರ ಸೈನಿಕರಿಗೆ ದೇಶವು ಋಣಿಯಾಗಿದೆ ಎಂದು ಸ್ಮರಿಸಲಾಯಿತು.

ಶ್ರದ್ಧಾಂಜಲಿ ಅರ್ಪಿಸಿದ ತಕ್ಷಣ, ಪ್ರತಿಪಕ್ಷಗಳ ಸದಸ್ಯರು ಬೆಲೆ ಏರಿಕೆ ಮತ್ತು ಅಗತ್ಯ ವಸ್ತುಗಳ ಮೇಲಿನ ಜಿಎಸ್‌ಟಿ ದರ ಏರಿಕೆಯ ವಿರುದ್ಧ ಪ್ರತಿಭಟನೆ ಆರಂಭಿಸಿದರು. ಭಿತ್ತಿ ಪತ್ರಗಳನ್ನು ಹಿಡಿದು ಮೋದಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಸದನದ ಬಾವಿಗೆ ಇಳಿದರು.

ಈ ವೇಳೆ ಸದನದ ಕಲಾಪ ಮುಂದುವರಿಯಲು ಅನುವು ಮಾಡಿಕೊಡಬೇಕು ಎಂದು ಸ್ಪೀಕರ್​ ಓಂ ಬಿರ್ಲಾ ಮನವಿ ಮಾಡಿದರು. ಆದರೆ, ಇದಕ್ಕೆ ಕಿವಿಗೊಡದ ಪ್ರತಿಪಕ್ಷಗಳು ಪ್ರತಿಭಟನೆಯನ್ನು ತೀವ್ರಗೊಳಿಸಿದರು. ಇದರಿಂದ ಸ್ಪೀಕರ್ ಕಲಾಪವನ್ನು ಮ. 2 ಗಂಟೆಗೆ ಮುಂದೂಡಿದರು.

ರಾಜ್ಯಸಭೆಯಲ್ಲೂ 2 ಬಾರಿ ಮುಂದಕ್ಕೆ: ರಾಜ್ಯಸಭೆಯಲ್ಲೂ ಇದೇ ವಿಚಾರವಾಗಿ ಪ್ರತಿಪಕ್ಷಗಳು ತೀವ್ರ ಗದ್ದಲ ಎಬ್ಬಿಸಿದವು. ಸಭಾಪತಿ ವೆಂಕಯ್ಯ ನಾಯ್ಡು ಅವರು ಚರ್ಚೆಗೆ ಅವಕಾಶ ಮಾಡಿಕೊಡಿ ಎಂಬ ಕೋರಿಕೆಗೂ ಮಣಿಯದ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟಿಸಿದರು. ಇದರಿಂದ ಸದನವನ್ನು 2 ಬಾರಿ ಮುಂದೂಡಲಾಯಿತು.

ನಾಲ್ವರು ಕಾಂಗ್ರೆಸ್​ ಸಂಸದರ ಅಮಾನತು: ಲೋಕಸಭೆಯಲ್ಲಿ ಗದ್ದಲ ಉಂಟು ಮಾಡಿ, ಭಿತ್ತಿಪತ್ರಗಳ ಸಮೇತ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದ ಕಾಂಗ್ರೆಸ್​ನ ನಾಲ್ವರು ಸಂಸದರನ್ನು ಮಳೆಗಾಲ ಅಧಿವೇಶನ ಮುಕ್ತಾಯದವರೆಗೂ ಸೋಮವಾರ ಅಮಾನತುಗೊಳಿಸಲಾಗಿತ್ತು.

ಸ್ಪೀಕರ್​ ಅವರ ಮನವಿಯನ್ನು ಮೀರಿ ಸಂಸದರಾದ ಮಾಣಿಕ್ಕಂ ಟ್ಯಾಗೋರ್, ರಮ್ಯಾ ಹರಿದಾಸ್, ಟಿ.ಎನ್. ಪ್ರತಾಪನ್ ಮತ್ತು ಎಸ್. ಜ್ಯೋತಿಮಣಿ ಅವರು ಸದನದ ಬಾವಿಗಿಳಿದು ಧರಣಿ ನಡೆಸಿದ್ದರು. ಇದು ಕಲಾಪದ ನಿಯಮ ಉಲ್ಲಂಘನೆಯಾಗಿದೆ ಎಂದು ಸಂಸದರ ದುರ್ನಡತೆಯನ್ನು ಖಂಡಿಸಿ ನಿಯಮ 374 ರ ಅಡಿಯಲ್ಲಿ ನಾಲ್ವರನ್ನೂ ಅಮಾನತು ಮಾಡಲಾಗಿತ್ತು.

ಇದನ್ನು ಟೀಕಿಸಿರುವ ಕಾಂಗ್ರೆಸ್​, ಸರ್ಕಾರ ಪ್ರತಿಪಕ್ಷಗಳಿಂದ ನುಣುಚಿಕೊಳ್ಳಲು ಅಮಾನತು ಅಸ್ತ್ರ ಪ್ರಯೋಗಿಸಿದೆ. ಇದೊಂದು ಬೆದರಿಸುವ ತಂತ್ರವಾಗಿದೆ. ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ತಿಳಿಸಿದೆ.

ಜುಲೈ 18 ರಿಂದ ಆರಂಭವಾಗಿರುವ ಸಂಸತ್​ ಮುಂಗಾರು ಅಧಿವೇಶನ 8 ದಿನಗಳಲ್ಲಿ ಬರೀ ಪ್ರತಿಭಟನೆಗಳೇ ನಡೆದಿವೆ. ಅಧಿವೇಶನ ಆಗಸ್ಟ್ 12 ರಂದು ಕೊನೆಗೊಳ್ಳಲಿದೆ.

ಓದಿ: ಬಂಧಿಸುವ ಅಧಿಕಾರ ಶಿಕ್ಷೆಯ ಅಸ್ತ್ರವಾಗಕೂಡದು: ಸುಪ್ರೀಂ ಕೋರ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.