ETV Bharat / bharat

Monsoon 2023: ಈ ವರ್ಷ ಸಾಮಾನ್ಯ ಮುಂಗಾರು; AI/ML ಮಾಡೆಲ್​ನಿಂದ ಮುನ್ಸೂಚನೆ - ರಾಜ್ಯವಾರು ಮಾನ್ಸೂನ್ ಮಳೆಯ ಮುನ್ಸೂಚನೆ

ಮುಂಗಾರು ಮಳೆಯ ಪ್ರಮಾಣವನ್ನು ನಿಖರವಾಗಿ ಅಂದಾಜಿಸಬಲ್ಲ ಹೊಸ ಯಂತ್ರ ಕಲಿಕೆ ಮಾದರಿಯೊಂದನ್ನು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ತಜ್ಞರು ತಯಾರಿಸಿದ್ದಾರೆ.

IIT Delhi's AI/ML model predicts 2023 to be normal monsoon year

author img

By

Published : Jun 15, 2023, 6:12 PM IST

ನವದೆಹಲಿ : ಭಾರತದಲ್ಲಿ 2023ರ ಮುಂಗಾರು ಸಾಮಾನ್ಯ ಮಟ್ಟದಲ್ಲಿರಲಿದೆ ಎಂದು ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ನೇತೃತ್ವದ ಅಂತಾರಾಷ್ಟ್ರೀಯ ಸಂಶೋಧಕರ ತಂಡವು ಅಭಿವೃದ್ಧಿಪಡಿಸಿದ ಹೊಸ ಯಂತ್ರ ಕಲಿಕೆ ಮಾದರಿಯ ಅಧ್ಯಯನದಲ್ಲಿ ತಿಳಿದು ಬಂದಿದೆ. ಮುಂಬರುವ ಮುಂಗಾರು ಋತುವಿನಲ್ಲಿ ಭಾರತದಾದ್ಯಂತ ಬೇಸಿಗೆ ಮುಂಗಾರು ಮಳೆ (AISMR) ಸುಮಾರು 790 ಮಿ.ಮೀ ಆಗಿರಲಿದೆ ಎಂದು ಇದು ಹೇಳಿದೆ. ಅಂದರೆ ಸಾಮಾನ್ಯ ಮುಂಗಾರು ಇರಲಿದೆ ಎಂದರ್ಥ.

ಈ ಎಐ ಮಾಡೆಲ್ 2002- 2022ರ ಪರೀಕ್ಷಾ ಅವಧಿಗೆ 61.9 ಪ್ರತಿಶತದಷ್ಟು ಗಮನಾರ್ಹವಾದ ಮುನ್ಸೂಚನೆಯ ನಿಖರತೆಯನ್ನು ಪ್ರದರ್ಶಿಸಿದೆ. ಮಾದರಿಯು AISMR ಅನ್ನು ಪ್ರತಿ ವರ್ಷ ಗಮನಿಸಿದ ನೈಜ ಮೌಲ್ಯಗಳಲ್ಲಿ ಪ್ಲಸ್ ಅಥವಾ ಮೈನಸ್ 5 ಪ್ರತಿಶತದೊಳಗೆ ಊಹಿಸಲು ಸಮರ್ಥವಾಗಿದೆಯೇ ಎಂಬುದನ್ನು ಇದು ಆಧರಿಸಿದೆ.

"ಈ ಅಧ್ಯಯನವು ಇಡೀ ದೇಶಕ್ಕೆ ಅಪಾರ ಪ್ರಾಮುಖ್ಯತೆಯನ್ನು ಹೊಂದಿದೆ. ಸಮಯಕ್ಕಿಂತ ಮುಂಚಿತವಾಗಿ ನಿಖರವಾದ ಮುಂಗಾರು ಮುನ್ಸೂಚನೆಯು ಕೃಷಿ, ಇಂಧನ, ಜಲಸಂಪನ್ಮೂಲ, ವಿಪತ್ತು ನಿರ್ವಹಣೆ ಮತ್ತು ಆರೋಗ್ಯ ಸೇರಿದಂತೆ ವಿವಿಧ ಸಾಮಾಜಿಕ ಆರ್ಥಿಕ ಕ್ಷೇತ್ರಗಳಲ್ಲಿ ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯಕವಾಗಿದೆ" ಎಂದು ಪ್ರೊ. ಸರೋಜ್ ಕೆ. ಮಿಶ್ರಾ ಹೇಳಿದರು. ಇವರು DST ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಕ್ಲೈಮೇಟ್ ಮಾಡೆಲಿಂಗ್ ಮತ್ತು ಸೆಂಟರ್ ಫಾರ್ ಅಟ್ಮಾಸ್ಫಿಯರಿಕ್ ಸೈನ್ಸಸ್ ಐಐಟಿ ದೆಹಲಿಯ ಪ್ರೊಫೆಸರ್ ಆಗಿದ್ದಾರೆ.

ದತ್ತಾಂಶ ಚಾಲಿತ ವಿಧಾನಗಳನ್ನು ರಾಜ್ಯವಾರು ಮಾನ್ಸೂನ್ ಮಳೆಯ ಮುನ್ಸೂಚನೆಯನ್ನು ಒದಗಿಸಲು ವಿಸ್ತರಿಸಲಾಗುವುದು. ಇದು ಪ್ರಾದೇಶಿಕ ಅನ್ವಯಗಳಿಗೆ ಹೆಚ್ಚು ಉಪಯುಕ್ತವಾಗಿದೆ ಎಂದು ಪ್ರೊ. ಮಿಶ್ರಾ ತಿಳಿಸಿದರು. ದೇಶದಲ್ಲಿ ಮಾನ್ಸೂನ್ ಮುನ್ಸೂಚನೆಗಳಿಗಾಗಿ ಪ್ರಸ್ತುತ ಭೌತಿಕ ಮಾದರಿಗಳಿಗಿಂತ AI/ML ಮಾದರಿಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಾಬೀತಾಗಿದೆ.

AI/ML ಮಾದರಿಯನ್ನು ಬಳಸುವ ಮುನ್ನೋಟವನ್ನು Nino3.4 ಸೂಚ್ಯಂಕ ಮತ್ತು ಹಿಂದೂ ಮಹಾಸಾಗರದ ದ್ವಿಧ್ರುವಿ ಮುನ್ಸೂಚನೆಯ ಲಭ್ಯತೆಯ ಆಧಾರದ ಮೇಲೆ ತಿಂಗಳ ಮುಂಚಿತವಾಗಿ ಮಾಡಬಹುದು ಮತ್ತು ಅವುಗಳ ವಿಕಾಸದ ಆಧಾರದ ಮೇಲೆ ಅದಕ್ಕೆ ಅನುಗುಣವಾಗಿ ನವೀಕರಿಸಬಹುದು. ಹೀಗಾಗಿ ಡೇಟಾ ಚಾಲಿತ ಮಾದರಿಗಳು ಇನ್‌ಪುಟ್‌ಗಳಿಗೆ ಹೊಂದಿಕೊಳ್ಳುತ್ತವೆ ಮತ್ತು ಮಾನ್ಸೂನ್ ಅಂಶಗಳ ನಡುವಿನ ರೇಖಾತ್ಮಕವಲ್ಲದ ಸಂಬಂಧಗಳನ್ನು ಉತ್ತಮವಾಗಿ ದಾಖಲಿಸಬಹುದು.

ಸೀಮಿತ ಸಮಯದೊಳಗೆ ಕೆಲವೇ ಜನ ವೈಯಕ್ತಿಕ ಕಂಪ್ಯೂಟರ್‌ನಲ್ಲಿ ಈ ಮಾದರಿಗಳನ್ನು ಚಲಾಯಿಸಬಹುದು ಹಾಗೂ ಸಾಂಪ್ರದಾಯಿಕ ಭೌತಿಕ ಮಾದರಿಗಳಿಗೆ ಹೋಲಿಸಿದರೆ ಹೆಚ್ಚು ನಿಖರವಾದ ಮಾನ್ಸೂನ್ ಮಳೆಯ ಮುನ್ಸೂಚನೆಯನ್ನು ಒದಗಿಸಬಹುದು ಎಂದು ತಜ್ಞರು ಹೇಳಿದ್ದಾರೆ.

ಮಾನ್ಸೂನ್‌ಗಳು ಮೂಲತಃ ಕಾಲೋಚಿತ ಮಾರುತಗಳಾಗಿದ್ದು ಋತುವಿನ ಬದಲಾವಣೆಗೆ ಅನುಗುಣವಾಗಿ ತಮ್ಮ ದಿಕ್ಕನ್ನು ಹಿಮ್ಮುಖಗೊಳಿಸುತ್ತವೆ. ಆದ್ದರಿಂದ ಅವನ್ನು ಆವರ್ತಕ ಮಾರುತಗಳು ಎನ್ನಲಾಗುತ್ತದೆ. ಮಾನ್ಸೂನ್‌ ಮಾರುತಗಳು ಬೇಸಿಗೆಯಲ್ಲಿ ಸಮುದ್ರದಿಂದ ಭೂಮಿಗೆ ಮತ್ತು ಚಳಿಗಾಲದಲ್ಲಿ ಭೂಮಿಯಿಂದ ಸಮುದ್ರಕ್ಕೆ ಪ್ರಯಾಣಿಸುತ್ತವೆ. ಆದ್ದರಿಂದ ಋತುಮಾನದ ಗಾಳಿಯ ಎರಡು ವಿಧದ ವ್ಯವಸ್ಥೆಯಾಗಿದೆ. ಭಾರತವು ಬೇಸಿಗೆಯಲ್ಲಿ ನೈಋತ್ಯ ಮಾನ್ಸೂನ್ ಮಾರುತಗಳನ್ನು ಮತ್ತು ಚಳಿಗಾಲದಲ್ಲಿ ಈಶಾನ್ಯ ಮಾನ್ಸೂನ್ ಮಾರುತಗಳನ್ನು ಪಡೆಯುತ್ತದೆ.

ಇದನ್ನೂ ಓದಿ : Global Weather: ಎಲ್ ನಿನೊ ಎಫೆಕ್ಟ್​: 2023 ಅತ್ಯಧಿಕ ಉಷ್ಣಾಂಶದ ವರ್ಷವಾಗುವ ಸಾಧ್ಯತೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.