ನವದೆಹಲಿ: ಕೇರಳದಲ್ಲಿ ಮಂಕಿಪಾಕ್ಸ್ಗೆ ಮೊದಲ ಬಲಿಯಾದ ಬಳಿಕ ರಾಜ್ಯದಲ್ಲಿ ಮತ್ತೋರ್ವನಿಗೆ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಕೇರಳದಲ್ಲಿ 5ನೇ ಪ್ರಕರಣ ದಾಖಲಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಇಂದು ಎರಡನೇ ಪ್ರಕರಣ ದಾಖಲಾಗಿದ್ದು, ದೇಶದಲ್ಲೀಗ 7 ಪ್ರಕರಣಗಳಿವೆ.
ಜುಲೈ 27ರಂದು ಯುಎಇಯಿಂದ ಕೇರಳದ ಮಲಪ್ಪುರಂನ ಯುವಕ ಕೋಯಿಕ್ಕೋಡ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ. ಈ ವೇಳೆ ನಡೆಸಿದ ಪರೀಕ್ಷೆಯಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಂಡಿದ್ದವು.
ಬಳಿಕ ಅವರಿಗೆ ಚಿಕಿತ್ಸೆ ಮುಂದುವರಿಸಲಾಗಿತ್ತು. ಇಂದು ಆ ಯುವಕನ ವರದಿ ಪಾಸಿಟಿವ್ ಬಂದಿದೆ. ಆತನೊಂದಿಗೆ ನಿಕಟ ಸಂಪರ್ಕದಲ್ಲಿದ್ದ ತಾಯಿ, ತಂದೆ ಮತ್ತು ಇಬ್ಬರು ಸ್ನೇಹಿತರ ಮೇಲೂ ನಿಗಾ ಇರಿಸಲಾಗಿದೆ. ಮಂಕಿಪಾಕ್ಸ್ ಸೋಂಕಿತನಿಗೆ ಪ್ರಸ್ತುತ ಮಲಪ್ಪುರಂನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.
ಇನ್ನು ದೆಹಲಿಯಲ್ಲಿ ಮೊದಲ ಕೇಸ್ ದಾಖಲಾದ ಬಳಿಕ ಇಂದು ಮತ್ತೊಂದು ಶಂಕಿತ ಪ್ರಕರಣ ಪತ್ತೆಯಾಗಿದೆ. ಈ ಬಗ್ಗೆ ಪರೀಕ್ಷೆಗಳು ಮುಂದುವರಿದಿದೆ.
ಓದಿ: ಪೊಲೀಸರಿಂದ ತಪ್ಪಿಸಿಕೊಳ್ಳಲು ಜಿಲ್ಲಾ ನ್ಯಾಯಾಲಯದ ಮಹಡಿಯಿಂದ ಕೆಳಗೆ ಜಿಗಿದ ಆರೋಪಿ!