ETV Bharat / bharat

4 ವರ್ಷದ ನಂತ್ರ ಸಹೋದರಿ ಕೈ ಸೇರಿದ ಸಹೋದರನ ಮನಿ ಆರ್ಡರ್! ಇದು ಅಂಚೆ ಕಚೇರಿ ಕಾರ್ಯವೈಖರಿ - ಮನಿ ಆರ್ಡರ್

ಸಹೋದರ ಕಳುಹಿಸಿದ 500 ರೂ.ಗಳ ಮನಿ ಆರ್ಡರ್​ವೊಂದು 4 ವರ್ಷಗಳ ನಂತ್ರ ಸಹೋದರಿಯ ಕೈ ಸೇರಿದ್ದು, ಇದು ಅಂಚೆ ಕಚೇರಿಯ ಕಾರ್ಯವೈಖರಿಯನ್ನು ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತವಾಗಿದೆ.

ಅಂಚೆ ಕಚೇರಿ
post office
author img

By

Published : Dec 2, 2022, 12:09 PM IST

ರೂರ್ಕೆಲಾ (ಒಡಿಶಾ): ಜಗತ್ತಿನಾದ್ಯಂತ ಆಧುನಿಕ ತಂತ್ರಜ್ಞಾನ ಅಳವಡಿಕೆಗೆ ಹೆಚ್ಚು ಮಹತ್ವ ನೀಡಲಾಗುತ್ತಿದೆ. ಇಂದಿನ ದಿನಗಳಲ್ಲಿ ಯಾರಿಗಾದರೂ ಹಣ ಕಳುಹಿಸಬೇಕೆಂದರೆ ಕೇವಲ​ ಒಂದು ಬಟನ್‌ ಕ್ಲಿಕ್‌ ಮಾಡಿದ್ರೆ ಸಾಕು. ಅದಕ್ಕಾಗಿಯೇ ಆನೇಕ ಆ್ಯಪ್​ಗಳೂ ಕೂಡ ಇವೆ. ಆದ್ರೆ, ಒಡಿಶಾದಲ್ಲಿ ಬೆಳಕಿಗೆ ಬಂದ ಘಟನೆಯೊಂದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಕೇವಲ 100 ಕಿಲೋಮೀಟರ್ ದೂರದಲ್ಲಿರುವ ಸಹೋದರಿಗೆ ಸಹೋದರನೋರ್ವ ಕಳುಹಿಸಿದ್ದ ಮನಿ ಆರ್ಡರ್ ನಾಲ್ಕು ವರ್ಷಗಳ ನಂತರ ತಲುಪಿದೆ.

ಹೌದು, ಸುಮಿತ್ರಾ ಬಿಸ್ವಾಲ್ ಎಂಬುವರು ನವೆಂಬರ್ 26, 2022 ರಂದು 500 ರೂಪಾಯಿಗಳ ಮನಿ ಆರ್ಡರ್ ಪಡೆದುಕೊಂಡಿದ್ದಾರೆ. 2018 ರಲ್ಲಿ ಸಾವಿತ್ರಿ ವ್ರತದ ಸಂದರ್ಭದಲ್ಲಿ ಸುಮಿತ್ರಾ ಅವರ ಸಹೋದರ ಇದನ್ನು ಕಳುಹಿಸಿದ್ದರು ಎಂದು ತಿಳಿದುಬಂದಿದೆ.

ರೂರ್ಕೆಲಾದ ಸೆಕ್ಟರ್ 8 ರ ನಿವಾಸಿ ಪ್ರಮೋದ್ ಪ್ರಧಾನ್ ಎಂಬುವರು ತಮ್ಮ ಸಹೋದರಿಗಾಗಿ ಇಲ್ಲಿನ ಸೆಕ್ಟರ್ 19ರ ಅಂಚೆ ಕಚೇರಿಯಿಂದ 500 ರೂ. ಹಣ ಕಳುಹಿಸಿದ್ದರು. ಆದ್ರೆ ಇದು ಕೇವಲ 100 ಕಿಲೋಮೀಟರ್ ದೂರದಲ್ಲಿರುವ ಸುಂದರ್‌ಗಢ್ ಜಿಲ್ಲೆಯಲ್ಲಿ ನೆಲೆಸಿರುವ ಸುಮಿತ್ರಾ ಬಿಸ್ವಾಲ್ ಅವರ ಕೈ ಸೇರಲು ನಾಲ್ಕು ವರ್ಷ ತೆಗೆದುಕೊಂಡಿದೆ!.

ಇದನ್ನೂ ಓದಿ: ಕಾರ್ಪೊರೇಟರ್​ ಶೈಲಿ ಪ್ಯಾಕೇಜಿಂಗ್​ ಆರಂಭಿಸಿದ ಭಾರತೀಯ ಅಂಚೆ ಇಲಾಖೆ

ಹಣ ಕಳುಹಿಸಿರುವ ಕುರಿತು ಪ್ರಮೋದ್‌ ಅವರು ಸಹೋದರಿ ಜೊತೆ ಚರ್ಚೆ ಮಾಡಿಲ್ಲ. ಆಕೆ ಪಡೆದಿರಬಹುದೆಂಬ ಭಾವನೆಯಲ್ಲಿದ್ದರು. ಇತ್ತೀಚೆಗೆ ಸುಮಿತ್ರಾ ಅವರು ಮನಿ ಆರ್ಡರ್ ಪಡೆದುಕೊಂಡ ಬಳಿಕ ಸತ್ಯ ಹೊರಬಂದಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ. ಡಿಜಿಟಲೀಕರಣದ ನಂತರವೂ ಇಂಥ ವಿಳಂಬಕ್ಕೆ ಯಾವುದೇ ಕ್ಷಮೆ ಇರದು., ಇದು ಅಂಚೆ ಕಚೇರಿಯ ಕಾರ್ಯವೈಖರಿಯನ್ನು ತೋರಿಸುತ್ತದೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರ ಗ್ರಾಮಸ್ಥರ ನೀರಿನ ಬವಣೆ ನೀಗಿಸುತ್ತಿರುವ ಕರ್ನಾಟಕ: ಸ್ಥಳೀಯರಿಂದ ಮೆಚ್ಚುಗೆ

ಈ ಕುರಿತು ತನಿಖೆ ಪ್ರಾರಂಭಿಸಲಾಗಿದೆ. ತನಿಖೆಯ ಬಳಿಕ ಅಂಚೆ ಕಚೇರಿಯಲ್ಲಿ ಆಗಿರುವ ಲೋಪವನ್ನು ಪತ್ತೆ ಹಚ್ಚಲು ಸಾಧ್ಯ ಎಂದು ರೂರ್ಕೆಲಾ ಪೋಸ್ಟಲ್ ಎಸ್​ಪಿ ಸರ್ಬೇಶ್ವರ್ ಚೌಧರಿ 'ಈಟಿವಿ ಭಾರತ'ಕ್ಕೆ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.