ETV Bharat / bharat

ಶಾಪಿಂಗ್​ ಕಾಂಪ್ಲೆಕ್ಸ್​​ನಲ್ಲಿ ಸಹೋದರಿಯರಿಗೆ ಲೈಂಗಿಕ ಕಿರುಕುಳ.. ಆರೋಪಿ ಅರೆಸ್ಟ್​ - ಸಹೋದರಿಯರ ಜೊತೆ ವ್ಯಕ್ತಿ ಅಸಭ್ಯ ವರ್ತನೆ

ಉತ್ತರಪ್ರದೇಶದ ಶಾಪಿಂಗ್​ ಕಾಂಪ್ಲೆಕ್ಸ್​ನಲ್ಲಿ ಸಹೋದರಿಯರ ಮೇಲೆ ನೀಚ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿದೆ. ಘಟನೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.

man molestation-with-girls
ಶಾಪಿಂಗ್​ ಕಾಂಪ್ಲೆಕ್ಸ್​​ನಲ್ಲಿ ಸಹೋದರಿಯರಿಗೆ ಲೈಂಗಿಕ ಕಿರುಕುಳ
author img

By

Published : Jul 30, 2022, 9:58 AM IST

Updated : Jul 30, 2022, 10:16 AM IST

ಮೌ(ಉತ್ತಪ್ರದೇಶ): ಇಬ್ಬರು ಯುವತಿಯರೊಂದಿಗೆ ವ್ಯಾಪಾರಿಯೊಬ್ಬ ಶಾಪಿಂಗ್​ ಕಾಂಪ್ಲೆಕ್ಸ್​ನಲ್ಲಿಯೇ ಅಶ್ಲೀಲವಾಗಿ ನಡೆದುಕೊಂಡು ಲೈಂಗಿಕ ಕಿರುಕುಳ ನೀಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕಿರಾತಕನನ್ನು ಬಂಧಿಸಲಾಗಿದೆ.

ಶಹಾಬುದ್ದೀನ್​ ಬಂಧಿತ ಆರೋಪಿ. ಘಟನೆ ಜೂನ್ 22 ರಂದು ನಡೆದಿದೆ. ಉತ್ತರಪ್ರದೇಶದ ಮೌನಲ್ಲಿರುವ ಇಮಾರ್ಟ್ ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿ ಇಬ್ಬರು ಸಹೋದರಿಯರು ಅಂಗಡಿಯೊಂದನ್ನು ನಡೆಸುತ್ತಿದ್ದಾರೆ. ಅದೇ ಶಾಪಿಂಗ್​ ಕಾಂಪ್ಲೆಕ್ಸ್​ನಲ್ಲಿ ಶಹಾಬುದ್ದೀನ್​ ಕೂಡ ಅಂಗಡಿ ಇಟ್ಟುಕೊಂಡಿದ್ದಾನೆ.

ಶಾಪಿಂಗ್​ ಕಾಂಪ್ಲೆಕ್ಸ್​​ನಲ್ಲಿ ಸಹೋದರಿಯರಿಗೆ ಲೈಂಗಿಕ ಕಿರುಕುಳ

ಮಳೆ ಸುರಿಯುತ್ತಿದ್ದ ಕಾರಣ ಅಂಗಡಿಗಳು ಮುಚ್ಚಿದ್ದವು. ಈ ವೇಳೆ ಸಹೋದರಿಯರು ತಮ್ಮ ಅಂಗಡಿಯನ್ನು ಆರಂಭಿಸಲು ಬಂದಾಗ ಅಲ್ಲಿಗೆ ಬಂದ ಕಾಮುಕ ಶಹಾಬುದ್ದೀನ್​ ಇಬ್ಬರು ಸಹೋದರಿಯರ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದಾನೆ.

ಈತನಿಂದ ಅವರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಬಿಡದ ಆರೋಪಿ ಇಬ್ಬರಿಗೂ ಲೈಂಗಿಕ ಕಿರುಕುಳ ನೀಡಿದ್ದಾನೆ. ಈತನ ಈ ನೀಚಕ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಹೋದರಿಯರು ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸಿ, ಸಿಸಿಟಿವಿ ದೃಶ್ಯಾವಳಿಯ ಆಧಾರದ ಮೇಲೆ ನೀಚನನ್ನು ಬಂಧಿಸಿದ್ದಾರೆ.

ಓದಿ: ಪ್ರವಾಸಕ್ಕೆ ಬಂದಿದ್ದ 17 ವರ್ಷದ ವಿದ್ಯಾರ್ಥಿ ಹೃದಯಾಘಾತಕ್ಕೆ ಬಲಿ

Last Updated : Jul 30, 2022, 10:16 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.