ETV Bharat / bharat

74 ವರ್ಷಗಳ ಬಳಿಕ ಮತ್ತೆ ಒಂದಾದ ಬಟಿಂಡಾ ಸಹೋದರರು.. ಒಗ್ಗೂಡಿಸಿದ ಸೋಷಿಯಲ್​ ಮೀಡಿಯಾ - ಮತ್ತೆ ಒಂದಾದ ದೂರವಾಗಿದ್ದ ಸಹೋದರರು

ದೇಶ ವಿಭಜನೆ ವೇಳೆ ದೂರವಾಗಿದ್ದ ಇಬ್ಬರು ಸಹೋದರರು ಇದೀಗ 74 ವರ್ಷಗಳ ಬಳಿಕ ಮತ್ತೆ ಒಂದಾಗಿದ್ದಾರೆ. ಪಾಕಿಸ್ತಾನದಲ್ಲಿ ನೆಲೆಸಿದ್ದ ಮೊಹಮ್ಮದ್ ಸಾದಿಕ್​ ಇದೀಗ ಭಾರತದ ಬಟಿಂಡಾಕ್ಕೆ ಬಂದಿದ್ದಾರೆ.

mohammad-sadiq-returned
74 ವರ್ಷಗಳ ಬಳಿಕ ಮತ್ತೆ ಒಂದಾದ ಬಟಿಂಡಾ ಸಹೋದರರು
author img

By

Published : May 25, 2022, 6:50 PM IST

ಬಟಿಂಡಾ(ಪಂಜಾಬ್​): 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಗುವುದರ ಜೊತೆಗೆ ಇಂಡಿಯಾ- ಪಾಕಿಸ್ತಾನ ವಿಭಜನೆಯೂ ಆಗಿತ್ತು. ಆ ಸಂದರ್ಭದಲ್ಲಿ ಅನೇಕ ಕುಟುಂಬಗಳೂ ದೂರವಾಗಿದ್ದವು. ಈ ವೇಳೆ, ಬೇರೆಯಾದ ಕುಟುಂಬಗಳಲ್ಲಿ ಮೊಹಮ್ಮದ್​ ಸಾದಿಕ್​ ಅವರ ಕುಟುಂಬವೂ ಒಂದು. ಇದೀಗ 74 ವರ್ಷಗಳ ಬಳಿಕ ಕುಟುಂಬಸ್ಥರು ಮತ್ತೆ ಒಂದು ಗೂಡಿದ್ದಾರೆ.

ಮೊಹಮ್ಮದ್​ ಸಾದಿಕ್​ ಅವರ ಸಹೋದರ ಸಿಕ್ಕಾ ಖಾನ್​ ಅವರು ಇಂಡಿಯಾ - ಪಾಕಿಸ್ತಾನ ವಿಭಜನೆಯಾದಾಗ ತಮ್ಮ ತಾಯಿಯೊಂದಿಗೆ ಪಂಜಾಬ್​ನ ಬಟಿಂಡಾದ ಫಾಲೇವಾಲ್​ಗೆ ಬಂದು ನೆಲೆಸಿದರು. ಇನ್ನೊಬ್ಬ ಸಹೋದರ ಮೊಹಮ್ಮದ್​ ಸಾದಿಕ್​ ತಂದೆ, ತಂಗಿ ಜೊತೆಗೆ ಪಾಕಿಸ್ತಾನದ ಫೈಜಿಲಾಬಾದ್​ಗೆ ತೆರಳಿದ್ದರು. 74 ವರ್ಷಗಳ ಬಳಿಕ ಫೈಜಿಲಾಬಾದ್​ನಿಂದ ಬಟಿಂಡಾದ ತನ್ನ ಕುಟುಂಬವನ್ನು ಸೇರಿಕೊಂಡಿರುವ ಮೊಹಮ್ಮದ್​ ಸಾದಿಕ್​ ಅವರನ್ನು ಇಡೀ ಗ್ರಾಮಸ್ಥರು ಹೂವಿನ ಹಾರ ಹಾಕಿ ಅದ್ದೂರಿಯಾಗಿ ಸ್ವಾಗತಿಸಿದ್ದಾರೆ.

ಸಾಮಾಜಿಕ ಜಾಲತಾಣದಿಂದ ಒಂದಾದ ಕುಟುಂಬ: ಇನ್ನು ಮೊಹಮ್ಮದ್​ ಸಾದಿಕ್​ ಮತ್ತು ಸಿಕ್ಕಾ ಖಾನ್ ಕುಟುಂಬ ಒಂದಾಗಲು ನೆರವು ನೀಡಿದ್ದು ಸಾಮಾಜಿಕ ಜಾಲತಾಣ. ತನ್ನ ಕುಟುಂಬವನ್ನು ಹುಡುಕುತ್ತಿದ್ದ ಮೊಹಮ್ಮದ್​ ಸಾದಿಕ್​ ಮಾಹಿತಿಯನ್ನು ಹಂಚಿಕೊಂಡಿದ್ದ, ಈ ವೇಳೆ ಸಿಕ್ಕಾ ಖಾನ್​ ಸಂಪರ್ಕಕ್ಕೆ ಸಿಕ್ಕಿದ್ದಾರೆ. ಬಳಿಕ ಸಿಕ್ಕಾ ಖಾನ್​ ಅವರನ್ನು ಪಾಕಿಸ್ತಾನಕ್ಕೆ ಆಹ್ವಾನಿಸಿದ್ದಾರೆ. ಬಳಿಕ ಸಿಕ್ಕಾ ಖಾನ್​ ಮತ್ತು ಮೊಹಮ್ಮದ್​ ಸಾದಿಕ್​ ಒಟ್ಟಾಗಿ 74 ವರ್ಷಗಳ ಬಳಿಕ ಒಂದಾಗಿ ಭಾರತಕ್ಕೆ ಬಂದಿದ್ದಾರೆ.

ಓದಿ: ಉಗ್ರ ಯಾಸಿನ್ ಮಲಿಕ್​ಗೆ ಜೀವಾವಧಿ ಶಿಕ್ಷೆ... ದೆಹಲಿ ಎನ್​ಐಎ ಕೋರ್ಟ್​​ನಿಂದ ಮಹತ್ವದ ತೀರ್ಪು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.