ETV Bharat / bharat

ಗಂಗಾನದಿ ತಟದಲ್ಲಿ ನಡೆದ 'ಗಂಗಾ ಆರತಿ' ವೀಕ್ಷಿಸಿದ ಪ್ರಧಾನಿ ನರೇಂದ್ರ ಮೋದಿ

author img

By

Published : Dec 13, 2021, 9:24 PM IST

Updated : Dec 13, 2021, 9:40 PM IST

ಕಾಶಿಯಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಇದರ ನಡುವೆಯೇ ಗಂಗಾನದಿ ದಡದಲ್ಲಿ ನಡೆದ 'ಗಂಗಾ ಆರತಿ'ಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸಂತ ರವಿದಾಸ್ ಘಾಟ್‌ ಮೇಲೆ ನಿಂತು ವೀಕ್ಷಿಸಿದರು.

ganga aarti
ಗಂಗಾ ಆರತಿ

ವಾರಾಣಸಿ: ಕಾಶಿಯಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಇದರ ನಡುವೆಯೇ ಗಂಗಾನದಿ ದಡದಲ್ಲಿ ನಡೆದ 'ಗಂಗಾ ಆರತಿ'ಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸಂತ ರವಿದಾಸ್ ಘಾಟ್‌ ಮೇಲೆ ನಿಂತು ವೀಕ್ಷಿಸಿದರು.

ಈ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್, ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಇತರ ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಪ್ರಧಾನಿ ಮೋದಿಗೆ ಸಾಥ್​ ನೀಡಿದರು.

ಬಳಿಕ ದೀಪಾಲಂಕೃತಗೊಂಡಿದ್ದ ಹಡಗಿನಲ್ಲಿ ಪ್ರಧಾನಿ ಮೋದಿ, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ಗಣ್ಯರು ಪಯಣಿಸಿ ಗಂಗಾರತಿ ಮತ್ತು ಝಗಮಗಿಸುತ್ತಿದ್ದ ಗಂಗಾನದಿ ತಟವನ್ನು ವೀಕ್ಷಿಸಿದರು.

ಇದನ್ನೂ ಓದಿ: ಡಿ. 18 ರಂದು ಅಮೇಥಿಯಲ್ಲಿ ಪಾದಯಾತ್ರೆಯೊಂದಿಗೆ ರಾಹುಲ್ ಗಾಂಧಿ ಪ್ರಚಾರ ಪ್ರಾರಂಭ​

ಗಂಗಾ ಆರತಿ ಹಿನ್ನೆಲೆ ಗಂಗಾನದಿಯ ಸುತ್ತಲೂ ದೀಪಗಳು, ಲೈಟಿಂಗ್ಸ್​ ವ್ಯವಸ್ಥೆ ಮಾಡಲಾಗಿತ್ತು. ಪುರೋಹಿತರು ಗಂಗಾನದಿ ಘಟ್ಟಗಳ ಮೇಲೆ ಮಂತ್ರ ಪಠಣ ಮಾಡುತ್ತಿದ್ದರು.

Last Updated : Dec 13, 2021, 9:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.