ETV Bharat / bharat

ಮಾನಹಾನಿ ಕೇಸ್​: ಶಿಕ್ಷೆಯ ವಿರುದ್ಧ ಮುಂದಿನ ವಾರ ರಾಹುಲ್​ ಗಾಂಧಿ ಹೈಕೋರ್ಟ್​ನಲ್ಲಿ ಚಾಲೆಂಜ್​ - ಸೂರತ್​ ಕೋರ್ಟ್​ ತೀರ್ಪು

ಮಾನಹಾನಿ ಕೇಸಲ್ಲಿ ಶಿಕ್ಷೆಗೆ ಒಳಗಾಗಿರುವ ರಾಹುಲ್ ​ಗಾಂಧಿ ಅವರು ಸೂರತ್​ ಕೋರ್ಟ್ ನೀಡಿದ ತೀರ್ಪನ್ನು ಹೈಕೋರ್ಟ್​ನಲ್ಲಿ ಪ್ರಶ್ನಿಸಲಿದ್ದಾರೆ. ಮುಂದಿನ ವಾರ ಮೇಲ್ಮನವಿ ಅರ್ಜಿ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಮಾನಹಾನಿ ಕೇಸ್
ಮಾನಹಾನಿ ಕೇಸ್
author img

By

Published : Apr 22, 2023, 7:11 AM IST

ಅಹಮದಾಬಾದ್: 2019 ರ ಮಾನಹಾನಿ ಪ್ರಕರಣದಲ್ಲಿ ಹಿನ್ನಡೆ ಅನುಭವಿಸಿದ ಬಳಿಕ ಕಾನೂನು ಹೋರಾಟಕ್ಕೆ ಮುಂದಾಗಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ, ತಮ್ಮ ವಿರುದ್ಧದ ಶಿಕ್ಷೆಗೆ ತಡೆ ಕೋರಿ ಮುಂದಿನ ವಾರ ಗುಜರಾತ್ ಹೈಕೋರ್ಟ್​ ಮೆಟ್ಟಿಲೇರಲಿದ್ದಾರೆ ಎಂದು ತಿಳಿದುಬಂದಿದೆ.

ಮೋದಿ ಉಪನಾಮ ಪ್ರಕರಣದಲ್ಲಿ 2 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿ ಸಂಸದ ಸ್ಥಾನ ಕಳೆದುಕೊಂಡಿರುವ ರಾಹುಲ್​ ಗಾಂಧಿಗೆ ಸೂರತ್​ ನ್ಯಾಯಾಲಯದಲ್ಲಿ ಸತತ ಹಿನ್ನಡೆ ಉಂಟಾಗಿದೆ. ಕೆಳಹಂತದ ನ್ಯಾಯಾಲಯ ನೀಡಿದ ಶಿಕ್ಷೆಗೆ ತಡೆ ನೀಡಬೇಕು ಎಂದು ಕೋರಿ ಸೆಷನ್ಸ್​ ಕೋರ್ಟ್​ಗೆ ಸಲ್ಲಿಸಿದ್ದ ಅರ್ಜಿಯು ಈಚೆಗಷ್ಟೇ ತಿರಸ್ಕೃತವಾಗಿತ್ತು. ಇದು ಮಾಜಿ ಸಂಸದರನ್ನು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ.

"ಕ್ರಿಮಿನಲ್​ ಮಾನನಷ್ಟ ಮೊಕದ್ದಮೆಯಲ್ಲಿ ಸೂರತ್ ಸೆಷನ್ಸ್ ನ್ಯಾಯಾಲಯ ರಾಹುಲ್ ಗಾಂಧಿಗೆ ಶಿಕ್ಷೆ ನೀಡಿದೆ. ಪಕ್ಷದ ಕೇಂದ್ರ ಕಾನೂನು ತಂಡ ಗುಜರಾತ್ ಹೈಕೋರ್ಟ್‌ನಲ್ಲಿ ಈ ನಿರ್ಧಾರವನ್ನು ಪ್ರಶ್ನಿಸಲು ಉದ್ದೇಶಿಸಿದೆ. ಮುಂದಿನ ಸೋಮವಾರ ಅಥವಾ ಮಂಗಳವಾರದೊಳಗೆ ಮೇಲ್ಮನವಿ ಅರ್ಜಿಯನ್ನು ಸಲ್ಲಿಸಲಾಗುವುದು" ಎಂದು ರಾಹುಲ್ ಗಾಂಧಿ ಪರ ವಕೀಲ ಬಾಬು ಮಂಗುಕಿಯಾ ಮಾಹಿತಿ ನೀಡಿದರು.

ಏಪ್ರಿಲ್​ 20 ರಂದು ಸೂರತ್ ಸೆಷನ್ಸ್ ನ್ಯಾಯಾಲಯವು ರಾಹುಲ್ ಗಾಂಧಿ ಅವರ 2019 ರ "ಮೋದಿ ಉಪನಾಮ" ಹೇಳಿಕೆಗೆ ಸಂಬಂಧಿಸಿದಂತೆ ಕ್ರಿಮಿನಲ್​ ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆಗೆ ತಡೆ ನೀಡುವಂತೆ ಕೋರಲಾದ ಮನವಿಯನ್ನು ವಜಾಗೊಳಿಸಿತು. ಹೀಗಾಗಿ ರಾಹುಲ್ ತಮ್ಮ ಸಂಸತ್​ ಸದಸ್ಯತ್ವವನ್ನು ಮರಳಿ ಪಡೆಯುವಲ್ಲಿ ಹಿನ್ನಡೆಯಾಗಿದೆ.

ಮೋದಿ ಉಪನಾಮ ಹೇಳಿಕೆ ಒಂದು ಸಮುದಾಯವನ್ನು ಮೂದಲಿಸುವ ಉದ್ದೇಶ ಹೊಂದಿರಲಿಲ್ಲ. ನನ್ನ ವಿರುದ್ಧ ಬೇಕೆಂತಲೇ ಪ್ರಕರಣ ದಾಖಲಿಸಲಾಗಿದೆ. ಕೋರ್ಟ್​ ಕೂಡ ಹೆಚ್ಚಿನ ಶಿಕ್ಷೆ ವಿಧಿಸಿದೆ. ಹೀಗಾಗಿ ಶಿಕ್ಷೆಗೆ ತಡೆ ನೀಡಬೇಕು ಎಂದು ಸೂರತ್​ ಸೆಷನ್ಸ್​ ನ್ಯಾಯಾಲಯದಲ್ಲಿ ರಾಹುಲ್​ ಪರವಾಗಿ ವಕೀಲರು ವಾದ ಮಂಡಿಸಿದ್ದರು.

ಸೂರತ್​ ಕೋರ್ಟ್​ನಿಂದ ಶಿಕ್ಷೆ: ಬಿಜೆಪಿ ಶಾಸಕ ಪೂರ್ಣೇಶ್​ ಮೋದಿ ಸಲ್ಲಿಸಿದ್ದ ಕ್ರಿಮಿನಲ್​ ಮಾನಹಾನಿ ಪ್ರಕರಣದಲ್ಲಿ ರಾಹುಲ್​ ಗಾಂಧಿ ಅವರು ದೋಷಿಯಾಗಿದ್ದರು. ಸೂರತ್​ ಕೋರ್ಟ್​ ಇವರಿಗೆ 2 ವರ್ಷ ಜೈಲು ಶಿಕ್ಷೆ, ದಂಡ ವಿಧಿಸಿ ಆದೇಶ ನೀಡಿತ್ತು. ಬಳಿಕ ಮೇಲ್ಮನವಿ ಸಲ್ಲಿಸಲು 30 ದಿನಗಳ ಅವಕಾಶ ನೀಡಿ ಜಾಮೀನು ಕೂಡ ಮಂಜೂರು ಮಾಡಿತ್ತು. ಇದರ ಪರಿಣಾಮವಾಗಿ ರಾಹುಲ್​ ಸಂಸತ್​ ಸದಸ್ಯತ್ವ ಸ್ಥಾನವನ್ನು ಕಳೆದುಕೊಂಡಿದ್ದರು. ಇದಲ್ಲದೇ, ದೆಹಲಿಯಲ್ಲಿ ನೀಡಲಾಗಿದ್ದ ಅಧಿಕೃತ ನಿವಾಸವನ್ನೂ ಖಾಲಿ ಮಾಡುವಂತೆ ಸರ್ಕಾರ ಸೂಚಿಸಿದ್ದರಿಂದ ರಾಹುಲ್ ಆ ಮನೆಯಿಂದ ನಿರ್ಗಮಿಸಿದ್ದಾರೆ.

ಪ್ರಕರಣವೇನು?: 2019 ರ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಕರ್ನಾಟಕದ ಕೋಲಾರದಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಮೋದಿ ಉಪನಾಮವನ್ನು ಬಳಸಿ ಟೀಕಿಸಿದ್ದರು. ಕಾಂಗ್ರೆಸ್​ನ ನಾಯಕನ ಈ ಹೇಳಿಕೆ ವಿವಾದ ಉಂಟಾಗಿ ಹಿಂದುಳಿದ ಸಮಾಜಕ್ಕೆ ಮಾಡಿದ ಅವಮಾನ ಎಂದು ದೂಷಿಸಿ, ಸೂರತ್​ ಕೋರ್ಟ್​ನಲ್ಲಿ ಬಿಜೆಪಿ ಶಾಸಕ ಪೂರ್ಣೇಶ್​ ಎಂಬುವವರು ಕ್ರಿಮಿನಲ್​ ಮಾನಹಾನಿ ಕೇಸ್​ ದಾಖಲಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್​, ರಾಹುಲ್​ರನ್ನು ಪ್ರಕರಣದಲ್ಲಿ ದೋಷಿ ಎಂದು ಪರಿಗಣಿಸಿ, ಜೈಲು ಶಿಕ್ಷೆ ನೀಡಿದೆ. ಕೆಳಹಂತದ ಕೋರ್ಟ್​ ನೀಡಿದ ಈ ತೀರ್ಪನ್ನು ರಾಹುಲ್​ ಸೆಷನ್ಸ್​ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಆದ್ರೆ ಈ ಅರ್ಜಿ ವಜಾಗೊಂಡಿದೆ.

ಓದಿ: ಮಾನಹಾನಿ ಕೇಸ್​: ಶಿಕ್ಷೆ ತಡೆ ಕೋರಿ ರಾಹುಲ್​ ಗಾಂಧಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಜಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.