ETV Bharat / bharat

ಮೋದಿ ಹೆಸರು, ಬಿಜೆಪಿ-ಆಪ್ ಪ್ರಚಾರ ಭರಾಟೆಯ ಮಧ್ಯೆ ಕಂಗೆಟ್ಟು ಕುಸಿದ ಕಾಂಗ್ರೆಸ್! - ಗುಜರಾತ್ ವಿಧಾನಸಬಾ ಚುನಾವಣೆ

2017ರ ಅಸೆಂಬ್ಲಿ ಚುನಾವಣೆಯಲ್ಲಿ 77 ಸ್ಥಾನಗಳನ್ನು ಗೆದ್ದು 99 ಸ್ಥಾನಗಳಿಗೆ ಬಿಜೆಪಿಯನ್ನು ಸೀಮಿತಗೊಳಿಸಿದ್ದ ದೇಶದ ಅತ ಹಿರಿಯ ರಾಜಕೀಯ ಪಕ್ಷವು ಪಕ್ಷವು 1985 ರಲ್ಲಿ 149 ಸ್ಥಾನಗಳನ್ನು ಗಳಿಸಿ ದಾಖಲೆ ನಿರ್ಮಾಣ ಮಾಡಿತ್ತು. ಆದರೆ ಈಗ ಅದೇ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಐತಿಹಾಸಿಕ ಕಳಪೆ ಪ್ರದರ್ಶನ ನೀಡಿದೆ.

ಮೋದಿ ಹೆಸರು, ಬಿಜೆಪಿ-ಆಪ್ ಪ್ರಚಾರ ಭರಾಟೆಯ ಮಧ್ಯೆ ಕಂಗೆಟ್ಟು ಸೋತ ಕಾಂಗ್ರೆಸ್!
http://10.10.50.85:6060/reg-lowres/08-December-2022/gujrahu1_0812newsroom_1670500663_128.jpg
author img

By

Published : Dec 8, 2022, 5:35 PM IST

ಗುಜರಾತ್ ವಿಧಾನಸಬಾ ಚುನಾವಣೆಗಳು ಘೋಷಣೆಯಾದ ನಂತರ ಚುನಾವಣಾ ಪ್ರಚಾರ ಮಾಡಲು ಕಾಂಗ್ರೆಸ್ ತುಂಬಾ ನಿರಾಸಕ್ತಿ ತೋರಿತ್ತು. ಅಲ್ಲದೇ ಅದರ ಮುಖ್ಯ ನಾಯಕರು ಕೂಡ ಪ್ರಚಾರಕ್ಕೆ ಬರಲಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯದಲ್ಲಿ ತನಗೆ ಗೆಲ್ಲುವ ಯಾವ ಆಶಾಭಾವನೆ ಆಗಲೂ ಇರಲಿಲ್ಲ ಎಂಬುದನ್ನು ಇದು ಸೂಚಿಸುತ್ತದೆ. ಆದಾಗ್ಯೂ ಪ್ರಚಾರದಲ್ಲಿ ನಿರಾಸಕ್ತಿ ತೋರಿಸಿದೆ ಎಂಬ ಆರೋಪಗಳನ್ನು ಕಾಂಗ್ರೆಸ್ ನಿರಾಕರಿಸಿದ್ದು, ದೊಡ್ಡ ಮಟ್ಟದ ರ್ಯಾಲಿಗಳ ಬದಲು ತಾನು ಮನೆ ಮನೆ ಪ್ರಚಾರಕ್ಕೆ ಹೆಚ್ಚು ಒತ್ತು ನೀಡಿರುವುದಾಗಿ ಹೇಳಿತ್ತು.

ಆದರೆ ಬಿಜೆಪಿ ಈಗಾಗಲೇ 32 ಸ್ಥಾನಗಳನ್ನು ಗೆದ್ದುಕೊಂಡಿದ್ದು, ಇತರ 124 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ ಮತ್ತು ದಾಖಲೆಯ ಗೆಲುವಿನತ್ತ ಸಾಗುತ್ತಿದೆ. ಅಂದರೆ ಕಾಂಗ್ರೆಸ್‌ನ 'ಮೌನ ಪ್ರಚಾರ'ವು ಮತದಾರರಿಂದ ಅಪೇಕ್ಷಿತ ಪ್ರತಿಕ್ರಿಯೆಯನ್ನು ಸೃಷ್ಟಿಸಲು ವಿಫಲವಾಗಿದೆ ಎಂಬುದು ಸ್ಪಷ್ಟವಾಗುತ್ತದೆ.

2017ರ ಅಸೆಂಬ್ಲಿ ಚುನಾವಣೆಯಲ್ಲಿ 77 ಸ್ಥಾನಗಳನ್ನು ಗೆದ್ದು 99 ಸ್ಥಾನಗಳಿಗೆ ಬಿಜೆಪಿಯನ್ನು ಸೀಮಿತಗೊಳಿಸಿದ್ದ ದೇಶದ ಅತ ಹಿರಿಯ ರಾಜಕೀಯ ಪಕ್ಷವು ಪಕ್ಷವು 1985 ರಲ್ಲಿ 149 ಸ್ಥಾನಗಳನ್ನು ಗಳಿಸಿ ದಾಖಲೆ ನಿರ್ಮಾಣ ಮಾಡಿತ್ತು. ಆದರೆ ಈಗ ಅದೇ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಐತಿಹಾಸಿಕ ಕಳಪೆ ಪ್ರದರ್ಶನ ನೀಡಿದೆ.

ಈ ಬಾರಿ ಕಾಂಗ್ರೆಸ್ ಕೇವಲ 16 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಎರಡು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಈ ಹಿಂದೆ ಕಾಂಗ್ರೆಸ್ ಪಕ್ಷವು ಕೋಲಿ ಕ್ಷತ್ರಿಯ, ಹರಿಜನ, ಆದಿವಾಸಿ ಮತ್ತು ಮುಸ್ಲಿಂ ಹೀಗೆ KHAM ಸಾಮಾಜಿಕ ಸಮೀಕರಣವನ್ನು ಬಂಡವಾಳ ಮಾಡಿಕೊಂಡಿತ್ತು. ಆದರೆ ಈ ಬಾರಿ ಬಿಜೆಪಿಯ ಹೈ ಪಿಚ್ ಪ್ರಚಾರದ ರಂಗು, ಮೋದಿ ಅಂಶ, ಪಕ್ಷದ ಹಿರಿಯ ನಾಯಕರ ಪ್ರಚಾರದ ಕೊರತೆಯಂಥ ಹಲವಾರು ಕಾರಣ ಸೇರಿದಂತೆ, ಆಮ್ ಆದ್ಮಿ ಪಕ್ಷ (ಎಎಪಿ) ಕೂಡ ಕಾಂಗ್ರೆಸ್‌ನ ನಿರೀಕ್ಷೆಗೆ ತೀವ್ರ ಹೊಡೆತ ನೀಡಿದಂತಿದೆ.

ಈ ಬಾರಿ ಗುಜರಾತ್ ವಿಧಾನಸಭಾ ಚುನಾವಣೆಯ ಫಲಿತಾಂಶದ ಮೇಲೆ ಎಎಪಿ ಯಾವುದೇ ಮಹತ್ವದ ಪರಿಣಾಮ ಬೀರುವ ಸಾಧ್ಯತೆಯಿಲ್ಲದಿದ್ದರೂ, ಪ್ರಚಾರದ ಭರಾಟೆಯ ವಿಚಾರದಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಪಕ್ಷವು ಖಂಡಿತವಾಗಿಯೂ ಕಾಂಗ್ರೆಸ್‌ಗಿಂತ ಮುಂದಿದೆ. ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ ಮಧ್ಯಾಹ್ನ 12 ಗಂಟೆಯವರೆಗೆ ಕಾಂಗ್ರೆಸ್‌ನ ಮತಗಳ ಪ್ರಮಾಣವು ಶೇಕಡಾ 26.9 ರಷ್ಟಿದ್ದು, ಎಎಪಿಯ ಮತಗಳ ಪ್ರಮಾಣ ಶೇಕಡಾ 12 ರಷ್ಟಿದೆ.

ಗುಜರಾತ್‌ನಲ್ಲಿ ಪಕ್ಷದ ಚುನಾವಣಾ ಸೋಲಿಗೆ ಕಾಂಗ್ರೆಸ್ ನಾಯಕತ್ವ ಈವರೆಗೆ ನೇರ ಪ್ರತಿಕ್ರಿಯೆ ನೀಡಿಲ್ಲ. ಪಕ್ಷದ ವಕ್ತಾರ ಪವನ್ ಖೇರಾ, ಗುಜರಾತ್ ದೊಡ್ಡ ರಾಜ್ಯ. ಫಲಿತಾಂಶಗಳು ಸ್ಪಷ್ಟವಾಗಲಿ, ನಂತರ ನಾವು ಅದರ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.

ಪಕ್ಷದಲ್ಲಿನ ಗುಂಪುಗಾರಿಕೆಯು ಗುಜರಾತ್‌ನಲ್ಲಿ ಕಾಂಗ್ರೆಸ್‌ಗೆ ಹೊಡೆತ ನೀಡಿದಂತಿದೆ. 2020 ರಲ್ಲಿ ಅಹ್ಮದ್ ಪಟೇಲ್ ಅವರ ಮರಣದ ನಂತರ ಕಾಂಗ್ರೆಸ್ ರಾಜ್ಯದಲ್ಲಿ ದಿಕ್ಕಿಲ್ಲದಂತಾಗಿದೆ. ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿಯಂಥ ಉನ್ನತ ನಾಯಕರ ನಿರಾಸಕ್ತಿ ಎದ್ದು ಕಾಣುತ್ತಿದೆ.

ಇದನ್ನೂ ಓದಿ: ಗುಜರಾತ್: ಶೇ 53 ರಷ್ಟು ಮತ ಪಡೆದ ಬಿಜೆಪಿ, ಕಾಂಗ್ರೆಸ್ ಮತ ಕಸಿದ ಆಪ್!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.