ನವದೆಹಲಿ: ವಿಕಸಿತ ಭಾರತವು ಸ್ವಾವಲಂಬನೆ, ಆತ್ಮವಿಶ್ವಾಸದ ಕಣಜವಾಗಿದೆ. ಇದೇ ಚೈತನ್ಯ, ಆವೇಗವನ್ನು 2024 ರಲ್ಲೂ ಕಾಪಾಡಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ವರ್ಷದ ಕೊನೆಯ ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಹೇಳಿದರು.
ರೇಡಿಯೋ ಪ್ರಸಾರದ 108ನೇ ಸಂಚಿಕೆಯಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಪ್ರಸ್ತಾಪಿಸಿದರು. ಫಿಟ್ ಇಂಡಿಯಾಕ್ಕಾಗಿ ಹಲವಾರು ಉದಾಹರಣೆಗಳನ್ನೂ ನೀಡಿದರು. ಇಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು, ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್, ಚೆಸ್ ದಂತಕಥೆ ವಿಶ್ವನಾಥನ್ ಆನಂದ್ ಮತ್ತು ನಟ ಅಕ್ಷಯ್ ಕುಮಾರ್ ಅವರ ಫಿಟ್‌ನೆಸ್ ಸಲಹೆಗಳನ್ನೂ ಹಂಚಿಕೊಂಡರು.
ಭಾರತವು 'ಇನ್ನೋವೇಶನ್ ಹಬ್' ಆಗಿ ಬೆಳೆಯುತ್ತಿದೆ. ಇದರ ಅರ್ಥ ದೇಶದ ಬೆಳವಣಿಗೆಗೆ ಯಾವ ಹಂತದಲ್ಲೂ ತಡೆ ಇಲ್ಲ ಎಂಬುದು. ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರ ಸೇರಿದಂತೆ ಹಲವು ವಿಶೇಷ ಸಾಧನೆಗಳಿಗೆ ದೇಶ ಸಾಕ್ಷಿಯಾಗಿದೆ ಎಂದರು.
-
Join in for a very special episode of #MannKiBaat as we discuss Fit India, superfoods and more! https://t.co/6SCfnQgRxa
— Narendra Modi (@narendramodi) December 31, 2023 " class="align-text-top noRightClick twitterSection" data="
">Join in for a very special episode of #MannKiBaat as we discuss Fit India, superfoods and more! https://t.co/6SCfnQgRxa
— Narendra Modi (@narendramodi) December 31, 2023Join in for a very special episode of #MannKiBaat as we discuss Fit India, superfoods and more! https://t.co/6SCfnQgRxa
— Narendra Modi (@narendramodi) December 31, 2023
ರಾಮಭಜನೆ ಹಾಡು ಹಂಚಿಕೊಳ್ಳಿ: ಅಯೋಧ್ಯೆಯ ರಾಮಮಂದಿರ ಉದ್ಘಾಟನೆಯ ಬಗ್ಗೆ ಇಡೀ ದೇಶವೇ ಉತ್ಸುಕವಾಗಿದೆ. ಕಳೆದ ಕೆಲವು ದಿನಗಳಿಂದ ಶ್ರೀರಾಮ ಮತ್ತು ಅಯೋಧ್ಯೆಯ ಮೇಲೆ ಹೊಸ ಹಾಡುಗಳು ಮತ್ತು ಭಜನೆಗಳನ್ನು ರಚಿಸಿರುತ್ತಿರುವುದು ಕಾಣಸಿಗುತ್ತಿದೆ. ಅನೇಕರು ಹೊಸ ಕವಿತೆಗಳನ್ನೂ ಬರೆಯುತ್ತಿದ್ದಾರೆ. ನಾನೂ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಭಜನೆ ಮತ್ತು ಹಾಡುಗಳನ್ನು ಹಂಚಿಕೊಂಡಿದ್ದೇನೆ ಎಂದು ಹೇಳಿದರು.
ಹೊಸ ರಚನೆಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹ್ಯಾಷ್ಟ್ಯಾಗ್ ಮೂಲಕ ಹಂಚಿಕೆಯಾಗಬೇಕು. ಇದಕ್ಕಾಗಿ ನೀವು ರಚನೆಗಳನ್ನು #ಶ್ರೀರಾಮಭಜನಾ ಎಂದು ಟೈಪಿಸಿ ಹಂಚಿಕೊಳ್ಳಿ ಎಂದು ಸಲಹೆ ನೀಡಿದರು.
ನಾಟು ನಾಟು, ದಿ ಎಲಿಫೆಂಟ್ ವಿಸ್ಪರರ್ಸ್ಗೆ ಮೆಚ್ಚುಗೆ: ವಿಶೇಷವೆಂದರೆ, ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ತೆಲುಗಿನ ರಾಜಮೌಳಿ ನಿರ್ದೇಶನದ ಆರ್ಆರ್ಆರ್ ಸಿನಿಮಾದ ಆಸ್ಕರ್ ಪ್ರಶಸ್ತಿ ವಿಜೇತ ಹಾಡಾದ 'ನಾಟು ನಾಟು' ಮತ್ತು ಆನೆ ಮತ್ತು ವ್ಯಕ್ತಿಯ ಸಂಬಂಧವನ್ನು ಬಿತ್ತರಿಸುವ 'ದ ಎಲಿಫೆಂಟ್ ವಿಸ್ಪರರ್ಸ್' ಸಾಕ್ಷ್ಯಚಿತ್ರದ ಬಗ್ಗೆಯೂ ಪ್ರಸ್ತಾಪಿಸಿದರು.
ವಿಶ್ವವು ದೇಶದ ಸೃಜನಶೀಲತೆಯನ್ನು ಕಂಡಿದೆ. ಮನರಂಜನೆಯ ಮೂಲಕ ಪರಿಸರದೊಂದಿಗೆ ನಂಟನ್ನೂ ಅರ್ಥಮಾಡಿಸಿದೆ. ನಾಟು ನಾಟು ಚಿತ್ರಕ್ಕೆ ಆಸ್ಕರ್ ಸಿಕ್ಕಾಗ ಇಡೀ ದೇಶವೇ ಖುಷಿಯಿಂದ ಕುಣಿದು ಕುಪ್ಪಳಿಸಿತ್ತು. ದಿ ಎಲಿಫೆಂಟ್ ವಿಸ್ಪರರ್ಸ್ಗೆ ಅದೇ ಗೌರವ ಸಿಕ್ಕಾಗ ಸಂತೋಷ ಇಮ್ಮಡಿಗೊಂಡಿತು. ಇವುಗಳ ಮೂಲಕ ಜಗತ್ತು ಭಾರತದ ಸೃಜನಶೀಲತೆಯ ಇನ್ನೊಂದು ಮಗ್ಗುಲನ್ನು ಕಂಡಿತು ಎಂದು ಮೋದಿ ಹೇಳಿದರು.
ಅಕ್ಷಯ್ಕುಮಾರ್ ಫಿಟ್ನೆಸ್ ಮಂತ್ರ: ಬಾಲಿವುಡ್ ನಟ ಅಕ್ಷಯ್ ಕುಮಾರ್ ಕೂಡ ಅವರ ಫಿಟ್ನೆಸ್ ಸಲಹೆಗಳನ್ನು ಪ್ರಧಾನಿ ಹಂಚಿಕೊಂಡರು. 'ಫಿಲ್ಟರ್ ಲೈಫ್ ನಹಿ ಫಿಟ್ಟರ್ ಲೈಫ್' ಎಂಬ ದೈಹಿಕ ಕ್ಷಮತೆ ಹಾಗೂ ಯೋಗಕ್ಷೇಮದ ಮಂತ್ರವನ್ನು ಸಹ ಇಲ್ಲಿ ಹೇಳಿದರು.
ಇದನ್ನೂ ಓದಿ: ವರ್ಷದ ಕೊನೆಯ ಮೋದಿ 'ಮನ್ ಕಿ ಬಾತ್' ಇಂದು: 11 ಗಂಟೆಗೆ ಪ್ರಸಾರ