ETV Bharat / bharat

ಮಾಡೆಲ್​​ ಮೇಲೆ ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಗಳು.. ಆಸ್ಪತ್ರೆಗೆ ದಾಖಲು - ಮಾಡೆಲ್ ಗುಂಡಿನ ದಾಳಿ

ದುರ್ಗಾದೇವಿ ಪೂಜೆ ಮುಗಿಸಿಕೊಂಡು ಮನೆಗೆ ಬರುತ್ತಿದ್ದ ವೇಳೆ ಮಾಡೆಲ್​​​ ಒಬ್ಬಳ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿರುವ ಘಟನೆ ಬಿಹಾರದಲ್ಲಿ ನಡೆದಿದೆ.

MODEL MONA ROY
MODEL MONA ROY
author img

By

Published : Oct 13, 2021, 4:50 PM IST

ಪಾಟ್ನಾ(ಬಿಹಾರ): ನವರಾತ್ರಿಯ ದುರ್ಗಾ ಪೂಜೆ ವೇಳೆ, ಕೆಲ ದುಷ್ಕರ್ಮಿಗಳು ಮಾಡೆಲ್​ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದ್ದು, ಗಂಭೀರವಾಗಿ ಗಾಯಗೊಂಡಿರುವ ಮಹಿಳೆ​​ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾಳೆ ಎಂದು ತಿಳಿದು ಬಂದಿದೆ.

ಪಾಟ್ನಾದ ರಾಜೀವ್​ ನಗರ ಪೊಲೀಸ್ ಠಾಣಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಮಹಿಳಾ ಮಾಡೆಲ್​ ಮನೆಯ ಹತ್ತಿರವೇ ಈ ಘಟನೆ ನಡೆದಿದೆ. ಗುಂಡಿನ ದಾಳಿಗೊಳಗಾದ ಮಾಡೆಲ್ ಅನ್ನು 36 ವರ್ಷದ ಅನಿತಾ ದೇವಿ (ಮೊನಾ ರಾಯ್​) ಎಂದು ಗುರುತಿಸಲಾಗಿದೆ.

ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಅನಿತಾ ನಿವಾಸದ ಪಕ್ಕದ ದೇವಸ್ಥಾನದಲ್ಲಿ ಪೂಜೆ ಮುಗಿಸಿ ಸ್ಕೂಟರ್​​ನಲ್ಲಿ ಮನೆಗೆ ಬರುತ್ತಿದ್ದ ವೇಳೆ ದುಷ್ಕರ್ಮಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ, ಗಂಭೀರವಾಗಿ ಗಾಯಗೊಂಡಿದ್ದಾಳೆ. ದುರ್ಗಾ ಪೂಜೆ ಕಾರಣ ಸ್ಥಳದಲ್ಲಿ ಧ್ವನಿವರ್ಧಕಗಳ ಶಬ್ದದಿಂದಾಗಿ ಘಟನೆ ಬಗ್ಗೆ ಯಾರಿಗೂ ಗೊತ್ತಾಗಿಲ್ಲ. ಆದರೆ, ಮಾಡೆಲ್​ ಜೊತೆಗಿದ್ದ 12 ವರ್ಷದ ಮಗಳು ಜೋರಾಗಿ ಅಳಲು ಶುರು ಮಾಡಿದ್ದಾಳೆ.

ಈ ವೇಳೆ ಘಟನಾ ಸ್ಥಳಕ್ಕೆ ಬಂದಿರುವ ಕೆಲವರು ಮಾಡೆಲ್​​ನನ್ನ ತಕ್ಷಣವೇ ಖಾಸಗಿ ನರ್ಸಿಂಗ್​ ಹೋಂಗೆ ಸೇರಿಸಿದ್ದಾರೆ. ಚಿಕಿತ್ಸೆ ಮುಂದುವರೆದಿದ್ದು, ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿರಿ: 14 ವರ್ಷದ ಅಪ್ರಾಪ್ತೆಯನ್ನ ನಡುರಸ್ತೆಯಲ್ಲೇ ಕೊಂದ ಭಗ್ನಪ್ರೇಮಿ.. ಆರೋಪಿ ಬಂಧನ

ಯಾವ ಕಾರಣಕ್ಕಾಗಿ ಆಕೆಯ ಮೇಲೆ ಗುಂಡಿನ ದಾಳಿ ನಡೆದಿದೆ ಎಂಬ ಮಾಹಿತಿ ಇಲ್ಲಿಯವರೆಗೆ ಗೊತ್ತಾಗಿಲ್ಲ. ಆದರೆ, ಅನಿತಾ, ಕೆಲವೊಂದು ಚಿತ್ರಗಳಲ್ಲಿ ನಟನೆ ಮಾಡಿದ್ದು, ಮಿಸ್​ ಅಂಡ್​ ಮಿಸೆಸ್​​ ಗ್ಲೋಬಲ್​​ ಬಿಹಾರದಲ್ಲೂ ಭಾಗಿಯಾಗಿದ್ದರು. ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿರುವ ಪೊಲೀಸರು ಈಗಾಗಲೇ ತನಿಖೆ ಆರಂಭಿಸಿದ್ದು, ಇಲ್ಲಿಯವರೆಗೆ ಯಾವುದೇ ರೀತಿಯ ಸುಳಿವು ಲಭ್ಯವಾಗಿಲ್ಲ ಎನ್ನಲಾಗಿದೆ. ಘಟನೆ ನಡೆಯುತ್ತಿದ್ದಂತೆ ಸ್ಥಳದಲ್ಲಿ ಭಯದ ವಾತಾವರಣ ನಿರ್ಮಾಣಗೊಂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.