ETV Bharat / bharat

ಪಾಟ್ನಾದಲ್ಲಿ ಮೊಬೈಲ್ ಟವರ್ ಕಳವು.. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ತನಿಖೆ ಆರಂಭ - ಪಾಟ್ನಾದಲ್ಲಿ ಮೊಬೈಲ್ ಟವರ್ ಕಳ್ಳತನ

ಬಿಹಾರದಲ್ಲಿ ಕಬ್ಬಿಣದ ಸೇತುವೆ ಮತ್ತು ರೈಲು ಎಂಜಿನ್ ಕಳ್ಳತನದ ನಂತರ ಇದೀಗ ಮೊಬೈಲ್ ಟವರ್ ಕಳ್ಳತನದ ಹೊಸ ಪ್ರಕರಣ ಮುನ್ನೆಲೆಗೆ ಬಂದಿದೆ.

ಪಾಟ್ನಾದಲ್ಲಿ ಮೊಬೈಲ್ ಟವರ್ ಕಳವು
ಪಾಟ್ನಾದಲ್ಲಿ ಮೊಬೈಲ್ ಟವರ್ ಕಳವು
author img

By

Published : Jan 19, 2023, 5:58 PM IST

ಪಾಟ್ನಾ (ಬಿಹಾರ) : ರಾಜಧಾನಿ ಪಾಟ್ನಾದ ಪಿರ್ಬೋರ್ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಅಳವಡಿಸಲಾಗಿದ್ದ ಮೊಬೈಲ್ ಟವರ್ ಅನ್ನು ಖದೀಮರು ಕಳ್ಳತನ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ನಂತರ ಮನೆಯ ಮಾಲೀಕರು ಅನುಮಾನಗೊಂಡು ಈ ಬಗ್ಗೆ ಮೊಬೈಲ್ ಟವರ್ ಕಂಪನಿ ಜಿಟಿಎಲ್‌ಗೆ ತಿಳಿಸಿದ್ದಾರೆ. ಬಳಿಕ ಕಂಪನಿಯ ಮ್ಯಾನೇಜರ್ ಪಿರ್ ಭೋರ್ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿದ್ದಾರೆ. ಹೀಗಾಗಿ, ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

2006 ರಲ್ಲಿ ಮೊಬೈಲ್ ಟವರ್ ಅಳವಡಿಸಲಾಗಿತ್ತು: ಮಾಹಿತಿ ಪ್ರಕಾರ, 2006ರಲ್ಲಿ ಏರ್​ಸೆಲ್​ ಕಂಪನಿಗೆ ಸೇರಿದ್ದ ಈ ಮೊಬೈಲ್ ಟವರ್ ಅನ್ನು ಜಿಟಿಎಲ್ ಕಂಪನಿ ಖರೀದಿಸಿತ್ತು. ಲಿಖಿತ ಎಫ್‌ಐಆರ್‌ನಲ್ಲಿ ಜಿಟಿಎಲ್ ಕಂಪನಿಯ ಉದ್ಯೋಗಿಗಳು ಎಂದು ಹೇಳಿಕೊಂಡು ಕೆಲವರು ಮೊಬೈಲ್ ಟವರ್ ಅಳವಡಿಸಿದ ಮನೆಗೆ ಬಂದಿದ್ದರು ಎಂದು ಜಿಟಿಎಲ್ ಕಂಪನಿ ತಿಳಿಸಿದೆ. ಬಳಿಕ ಮನೆಯ ಮಾಳಿಗೆಗೆ ತೆರಳಿ 4 ಗಂಟೆಗಳ ಕಾಲ ಮೊಬೈಲ್ ಟವರ್ ತೆರೆದು ಅಲ್ಲಿಂದ ತೆರಳಿದ್ದಾರೆ.

ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ: ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಆಧರಿಸಿ ಕಳ್ಳರ ಪತ್ತೆಗೆ ಯತ್ನಿಸುತ್ತಿದ್ದಾರೆ. ಜಿಟಿಎಲ್ ಕಂಪನಿಯ ವ್ಯವಸ್ಥಾಪಕ ಮೊಹಮ್ಮದ್ ಶಹನವಾಜ್ ಅನ್ವರ್ ಪ್ರಕಾರ, ಮೊಬೈಲ್ ಟವರ್‌ನ ಒಟ್ಟು ವೆಚ್ಚ 8 ಲಕ್ಷ 32 ಸಾವಿರ ರೂ ಗಳಂತೆ. ಅಪರಿಚಿತ ಕಳ್ಳರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಲಿಖಿತ ಎಫ್‌ಐಆರ್ ಕೂಡಾ ದಾಖಲಾಗಿದೆ. ಈ ಹಿಂದೆ ಕಂಪನಿ ತನ್ನದೇ ಮಟ್ಟದಲ್ಲಿ ತನಿಖೆ ನಡೆಸುತ್ತಿದೆ ಎಂದು ವ್ಯವಸ್ಥಾಪಕರು ಹೇಳಿದ್ದಾರೆ.

ಪಾಟ್ನಾದಲ್ಲಿ ಮೊಬೈಲ್ ಟವರ್ ಕಳ್ಳತನದ ಎರಡನೇ ಪ್ರಕರಣ: 4 ತಿಂಗಳುಗಳ ಹಿಂದೆ ಇಂತಹುದೇ ಕಳ್ಳತನ ಪ್ರಕರಣವೊಂದು ನಡೆದಿತ್ತು. ಕಳ್ಳತನ ನಡೆದು ನಾಲ್ಕು ತಿಂಗಳ ನಂತರ ಮೊಬೈಲ್ ಟವರ್ ಕಳ್ಳತನದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪಾಟ್ನಾದಲ್ಲಿ ಮೊಬೈಲ್ ಟವರ್ ಕಳ್ಳತನದ ಎರಡನೇ ಪ್ರಕರಣ ಇದಾಗಿದೆ.

ಅಡವಿಟ್ಟಿದ್ದ ಗೋಲ್ಡ್​ ಕದ್ದ ಮ್ಯಾನೇಜರ್​​ ಬಂಧನ( ಬೆಂಗಳೂರು): ಇನ್ನೊಂದೆಡೆ ಬೆಂಗಳೂರಲ್ಲಿ ಗ್ರಾಹಕರೊಬ್ಬರು ಗೋಲ್ಡ್ ಫೈನಾನ್ಸ್​ನಲ್ಲಿ‌ ಅಡ ಇಟ್ಟಿದ್ದ ಚಿನ್ನಾಭರಣವನ್ನು ಕಳವು ಮಾಡಿದ್ದ ಮ್ಯಾನೇಜರ್ ಅನ್ನು ನಂದಿನಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಸಿದ್ದೇಶ್ ಬಂಧಿತ ಆರೋಪಿ ಎಂಬುದು ತಿಳಿದುಬಂದಿದೆ. ಆರೋಪಿಯು ಕ್ರಿಕೆಟ್ ಬೆಟ್ಟಿಂಗ್​ಗಾಗಿ ತಾನು ಕೆಲಸ ಮಾಡುತ್ತಿದ್ದ ಕಚೇರಿಯಿಂದ 40 ಗ್ರಾಂ ಚಿನ್ನದ ಆಭರಣವನ್ನು ಎಗರಿಸಿ‌ ಪರಾರಿಯಾಗಿದ್ದ ಎಂಬುದು ತಿಳಿದುಬಂದಿದೆ.

ತುಮಕೂರು ಮಧುಗಿರಿ ಮೂಲದ ಸಿದ್ದೇಶ್ ನಗರದ ನಂದಿನಿ‌ ಲೇಔಟ್​ನಲ್ಲಿ ವಾಸ ಮಾಡುತ್ತಿದ್ದ. ಕಳೆದ ಎರಡೂವರೆ ವರ್ಷಗಳಿಂದ ಗೋಲ್ಡ್ ಫೈನಾನ್ಸ್​ ಕಂಪನಿಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ಅಲ್ಲದೇ ಆರೋಪಿಯು ಮಲ್ಲೇಶ್ವರ ಬ್ರಾಂಚ್ ಸೇರಿದಂತೆ ವಿವಿಧ ಕಡೆಗಳಲ್ಲಿ ಮ್ಯಾನೇಜರ್ ಆಗಿ ಕೆಲಸ‌ ಮಾಡುತ್ತಿದ್ದ ಎಂಬುದು ತಿಳಿದು ಬಂದಿದೆ.

ಓದಿ : ಕ್ರಿಕೆಟ್​ ಬೆಟ್ಟಿಂಗ್​: ಅಡವು ಇಟ್ಟಿದ್ದ ಚಿನ್ನಾಭರಣ ಎಗರಿಸಿದ್ದ ಗೋಲ್ಡ್ ಫೈನ್ಸಾನ್ ಮ್ಯಾನೇಜರ್ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.