ETV Bharat / bharat

Fake App: ಚೀನಾದಿಂದ ಭಾರತೀಯರಿಗೆ ₹ 360 ಕೋಟಿ ದೋಖಾ.. ವಂಚನೆ ಜಾಲದಲ್ಲಿ ಬೆಂಗಳೂರು ದಂಪತಿ! - ಇ-ವ್ಯಾಲೆಟ್ ಪೇಟಿಎಂ

ಚೀನಾದ ನಕಲಿ ಆ್ಯಪ್​ಗಳಿ ನೂರಾರು ಭಾರತೀಯರು ಬಲಿಯಾಗಿದ್ದು ಅಂದಾಜು 360 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಕಳೆದುಕೊಂಡಿದ್ದಾರೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಟಿಎಫ್ ಈಗಾಗಲೇ ಹಲವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದೆ.

ಚೀನಾ
ಚೀನಾ
author img

By

Published : Jul 6, 2021, 8:18 AM IST

ಡೆಹ್ರಾಡೂನ್ (ಉತ್ತರಾಖಂಡ): ಚೀನಾದ 'ಪವರ್ ಬ್ಯಾಂಕ್ ಆ್ಯಪ್'ಗೆ ಸಂಬಂಧಿಸಿದ ವಂಚನೆ ಪ್ರಕರಣದಲ್ಲಿ ಉತ್ತರಾಖಂಡ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಇ-ವ್ಯಾಲೆಟ್ ಪೇಟಿಎಂ ಮತ್ತು ರೇಜರ್‌ಪೇ ಪ್ರತಿನಿಧಿಗಳನ್ನು ಸೈಬರ್ ಪೊಲೀಸ್ ಠಾಣೆಗೆ ಕರೆಸಿದೆ. ಈ ನಕಲಿ ಆ್ಯಪ್​ಗಳ ಮೂಲಕ 360 ಕೋಟಿ ರೂಪಾಯಿ ಚೀನಾದಲ್ಲಿ ಹೂಡಿಕೆಯಾಗಿದೆ ಎನ್ನಲಾಗ್ತಿದೆ.

ಹೂಡಿಕೆಗಳ ಮೇಲೆ ಲಾಭದಾಯಕ ಆದಾಯದ ಭರವಸೆ ನೀಡುವ ನಕಲಿ ಅಪ್ಲಿಕೇಶನ್​ಗೆ ಹಲವಾರು ಜನರು ಬಲಿಯಾಗಿದ್ದರು. ಎಸ್​ಟಿಎಫ್​ ಪ್ರಕಾರ, ಡಿಜಿಟಲ್​ ಪಾವತಿ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ನಂತರ ರಾಷ್ಟ್ರಮಟ್ಟದಲ್ಲಿ ನಡೆದಿರುವ ಇಂಥ ವಂಚನೆಗಳನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ತನಿಖೆಯಲ್ಲಿ ಹಾಂಗ್​ಕಾಂಗ್​ನಿಂದ ಕಾರ್ಯನಿರ್ವಹಿಸುತ್ತಿದ್ದ ಕಿಡಿಗೇಡಿಗಳು, ಆ್ಯಪ್ ಮೂಲಕ ಭಾರತೀಯರನ್ನು ಗುರಿಯಾಗಿಸಿಕೊಂಡಿದ್ದಾರೆ. ಸರಿಯಾದ ಕೆವೈಸಿ ಇಲ್ಲದೆ ವಹಿವಾಟು ನಡೆದಿದ್ದು, ಒಂದು ದಿನದೊಳಗೆ ಕೋಟ್ಯಂತರ ರೂಪಾಯಿ ಚೀನಿಯರ ಪಾಲಾಗಿದೆ.

ಡೆಹ್ರಾಡೂನ್ ಸೈಬರ್ ಅಪರಾಧ ಪೊಲೀಸ್ ಠಾಣೆಯ ತಾಂತ್ರಿಕ ತಂಡವು, ಆನ್‌ಲೈನ್ ಪಾವತಿ ಗೇಟ್‌ವೇಗಳ ಮೂಲಕ ಚೀನಾಗೆ ಕಳುಹಿಸಿದ ಹಣವನ್ನು ಕ್ರಿಪ್ಟೋಕರೆನ್ಸಿಗಳಾಗಿ ಪರಿವರ್ತಿಸಿದ ಸ್ಥಳವನ್ನು 'ಪವರ್ ಬ್ಯಾಂಕ್ ಆ್ಯಪ್' ಮೂಲಕ ಪತ್ತೆಹಚ್ಚಲು ಸಾಧ್ಯವಾಯಿತು. ಇದಲ್ಲದೆ, ಈ ರೀತಿಯ ಸೈಬರ್ ವಂಚನೆಗೆ ಬಳಸಲಾಗುತ್ತಿರುವ ಇತರ ಅನೇಕ ಅನುಮಾನಾಸ್ಪದ ಅಪ್ಲಿಕೇಶನ್‌ಗಳ ಬಗ್ಗೆಯೂ ಮಾಹಿತಿ ಬಂದಿದೆ.

ಉತ್ತರಾಖಂಡ ಎಸ್‌ಟಿಎಫ್ ಪ್ರಕಾರ, 2021 ರ ಜೂನ್ 1 ರಂದು ಬೆಂಗಳೂರಿನ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ನಡೆದ 'ಪವರ್ ಬ್ಯಾಂಕ್ ಆ್ಯಪ್' ವಂಚನೆಗೆ ಸಂಬಂಧಿಸಿದಂತೆ ಕೆಲವು ಕಂಪನಿಗಳ ನಿರ್ದೇಶಕರ ವಿರುದ್ಧ ರೇಜರ್‌ಪೇ ಕಾನೂನು ಮುಖ್ಯಸ್ಥರು ಪ್ರಕರಣ ದಾಖಲಿಸಿದ್ದಾರೆ.

'ಪವರ್ ಬ್ಯಾಂಕ್ ಆ್ಯಪ್' ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ರಾಜ್ಯದಲ್ಲಿ ಸುಮಾರು 8 ವಂಚನೆ ಪ್ರಕರಣಗಳು ದಾಖಲಾಗಿವೆ. ಎಫ್‌ಐಆರ್ ಆಧರಿಸಿ ಎಸ್‌ಟಿಎಫ್ ಉತ್ತರಾಖಂಡದ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ನಾಲ್ವರು, ದೆಹಲಿಯಲ್ಲಿ ನಾಲ್ವರನ್ನು ಬಂಧಿಸಿ ಡೆಹ್ರಾಡೂನ್​ಗೆ ಕರೆದೊಯ್ಯಲಾಗಿದೆ. ಇದಲ್ಲದೆ, ಸೈಬರ್ ವಂಚನೆ ಜಾಲದಲ್ಲಿ ಭಾಗಿಯಾಗಿರುವ ಕಾರಣಕ್ಕಾಗಿ ಬೆಂಗಳೂರು ನಿವಾಸಿಗಳಾದ ನಾಗಭೂಷಣ್ ಮತ್ತು ಅವರ ಪತ್ನಿ ಸುಕನ್ಯಾ ನಾಗಭೂಷಣ್​​ಗೆ ನ್ಯಾಯಾಲಯ ನೋಟಿಸ್ ನೀಡಿದೆ.

ಇದನ್ನೂ ಓದಿ:2,000 ಕೋಟಿ ರೂ. ಮೌಲ್ಯದ ಹೆರಾಯಿನ್​ ವಶಕ್ಕೆ ಪಡೆದುಕೊಂಡ DRI

ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ ಒಟ್ಟಾರೆ 250 ಪ್ರಕರಣಗಳು ದಾಖಲಾಗಿದ್ದು, 20 ಜನರನ್ನು ಬಂಧಿಸಲಾಗಿದೆ. ಈ ಪ್ರಕರಣವು ವಿದೇಶಿ ಪ್ರಜೆಗಳು ಮತ್ತು ಕಂಪನಿಗಳನ್ನು ಒಳಗೊಂಡಿರುವುದರಿಂದ, ರಾಷ್ಟ್ರೀಯ ಏಜೆನ್ಸಿಗಳಾದ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ), ಇಂಟೆಲಿಜೆನ್ಸ್ ಬ್ಯೂರೋ (ಐಬಿ), ಜಾರಿ ನಿರ್ದೇಶನಾಲಯ (ಇಡಿ) ತನಿಖೆ ನಡೆಸುತ್ತಿದೆ. ಅಂತರರಾಷ್ಟ್ರೀಯ ಏಜೆನ್ಸಿಗಳನ್ನು ಸಂಪರ್ಕಿಸುವ ಮೂಲಕ ಕಾನೂನು ಸಹಾಯ ಪಡೆಯಲು ಪ್ರಯತ್ನಗಳು ನಡೆಯುತ್ತಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.