ಮುಂಬೈ(ಮಹಾರಾಷ್ಟ್ರ): ನಾಳೆಯಿಂದ ಧ್ವನಿವರ್ಧಕಗಳ ಮೂಲಕ ಆಜಾನ್ ಕೇಳಿಸುವ ಸ್ಥಳಗಳಲ್ಲಿ ಹನುಮಾನ್ ಚಾಲೀಸಾ ಮೊಳಗಿಸುವಂತೆ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಅಧ್ಯಕ್ಷ ರಾಜ್ ಠಾಕ್ರೆ ಕರೆ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕವಾಗಿ ಬಹಿರಂಗ ಪತ್ರ ಬರೆದಿರುವ ಅವರು, ಮೇ 4ರಂದು ಧ್ವನಿವರ್ಧಕಗಳ ಮೂಲಕ ಆಜಾನ್ ಮೊಳಗಿದರೆ, ಆ ಸ್ಥಳಗಳಲ್ಲಿ ಹನುಮಾನ್ ಚಾಲೀಸಾ ಮೊಳಗಿಸಿ ಎಂದಿದ್ದಾರೆ.
ಸುಪ್ರೀಂಕೋರ್ಟ್ ಆದೇಶದಂತೆ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಧ್ವನಿವರ್ಧಕಗಳ ಮೂಲಕ ಆಜಾನ್ ನುಡಿಸದಂತೆ ಈಗಾಗಲೇ ಸೂಚನೆ ನೀಡಿದೆ. ಇದರಿಂದ ಚಿಕ್ಕಮಕ್ಕಳು, ಅನಾರೋಗ್ಯ ಪೀಡಿತರು, ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಇದರ ಹೊರತಾಗಿ ಕೂಡ ಧ್ವನಿವರ್ಧಕ ಕೇಳಿ ಬರುತ್ತಿದ್ದು, ನಿಮ್ಮ ಕಿವಿಗಳ ಮೇಲೆ ಅವುಗಳ ಶಬ್ದ ಬಿದ್ದರೆ, ಅಂತಹ ಸ್ಥಳಗಳಲ್ಲಿ ಹನುಮಾನ್ ಚಾಲೀಸಾ ಮೊಳಗಿಸಿ, ಧ್ವನಿವರ್ಧಗಳ ತೊಂದರೆ ಬಗ್ಗೆ ಅವರಿಗೂ ಅರ್ಥವಾಗಲಿ ಎಂದಿದ್ದಾರೆ.
-
Appeal to all pic.twitter.com/ptN8sLUA8Z
— Raj Thackeray (@RajThackeray) May 3, 2022 " class="align-text-top noRightClick twitterSection" data="
">Appeal to all pic.twitter.com/ptN8sLUA8Z
— Raj Thackeray (@RajThackeray) May 3, 2022Appeal to all pic.twitter.com/ptN8sLUA8Z
— Raj Thackeray (@RajThackeray) May 3, 2022
ಇದರ ಜೊತೆಗೆ ಆಜಾನ್ ಕೇಳಿಸುತ್ತಿದ್ದಂತೆ 100ಕ್ಕೆ ಕರೆ ಮಾಡಿ, ಪೊಲೀಸರಿಗೆ ದೂರು ನೀಡಿ. ಪ್ರತಿಯೊಬ್ಬರು ನಿತ್ಯ ದೂರು ನೀಡುವಂತೆ ಎಂಎನ್ಎಸ್ ಮುಖಂಡರು ಕರೆ ನೀಡಿದ್ದಾರೆ. ಮಸೀದಿಗಳ ಮೇಲಿರುವ ಧ್ವನಿವರ್ಧಕ ತೆರವುಗೊಳಿಸುವಂತೆ ರಾಜ್ ಠಾಕ್ರೆ ಇತ್ತೀಚಿಗೆ ಕರೆ ನೀಡಿದ್ದರು. ಇದೇ ವಿಚಾರವಾಗಿ ಅವರ ವಿರುದ್ಧ ಪ್ರಕರಣ ಸಹ ದಾಖಲಾಗಿದೆ.
ಧ್ವನಿವರ್ಧಕ ಬಳಿಕೆಗೆ 803 ಮಸೀದಿಗಳು ಅನುಮತಿ: ರಾಜ್ ಠಾಕ್ರೆ ಹುಟ್ಟುಹಾಕಿರುವ ಗಲಾಟೆ ಮಧ್ಯೆ 1,144 ಮಸೀದಿಗಳ ಪೈಕಿ 803 ಮಸೀದಿಗಳು ಧ್ವನಿವರ್ಧಕ ಬಳಿಕೆ ಮಾಡಲು ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದುಕೊಂಡಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮುಂಬೈನಲ್ಲಿರುವ ಶೇ. 70ರಷ್ಟು ಮಸೀದಿಗಳು ಆಜಾನ್ ನುಡಿಸಲು ಧ್ವನಿವರ್ಧಕ ಬಳಕೆ ಮಾಡಲು ಅನುಮತಿ ಪಡೆದುಕೊಂಡಿವೆ.