ಚಂಡೀಗಢ, ಪಂಜಾಬ್ : ನವಜೋತ್ ಸಿಂಗ್ ಸಿಧು ಮತ್ತು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ನಡುವಿನ ವೈಮನಸ್ಯ ಪಂಜಾಬ್ ಕಾಂಗ್ರೆಸ್‌ನಲ್ಲಿ ಎರಡು ಬಣಗಳ ಸೃಷ್ಟಿಗೆ ಕಾರಣವಾಗುತ್ತಿದೆ.
ಈ ಮಧ್ಯೆ ಒಂದು ಕಾಲದಲ್ಲಿ ನವಜೋತ್ ಸಿಂಗ್ ಸಿಧು ಜೊತೆ ವೈಮನಸ್ಯ ಹೊಂದಿದ್ದ ಮತ್ತು ರಾಹುಲ್ ಗಾಂಧಿ ವೇದಿಕೆಯಲ್ಲೇ ಸಿಧು ಜೊತೆ ಘರ್ಷಣೆಗೆ ಇಳಿದಿದ್ದ ಸುಖ್ಜಿಂದರ್ ಸಿಂಗ್ ರಾಂಧವಾ ಈಗ ಸಭೆ ನಡೆಸುತ್ತಿದ್ದಾರೆ.
ಕೆಲವೊಂದು ವಿಚಾರಗಳ ಕ್ಯಾಪ್ಟನ್ ಅಮರೀಂದರ್ ಸಿಂಗ್ ವಿರುದ್ಧ ಕೋಪಗೊಂಡಿದ್ದ ಸುಖ್ಜಿಂದರ್ ಸಿಂಗ್ ರಾಂಧವಾ ಅವರು ಚರಣಜೀತ್ ಸಿಂಗ್ ಚನ್ನಿ, ಕಿಕಿ ಧಿಲ್ಲೋನ್, ಪರಗತ್ ಸಿಂಗ್, ಬಲ್ವಿಂದರ್ ಸಿಂಗ್ ಮತ್ತು ಶಾಸಕ ಬೃಂದರ್ಮೀತ್ ಸಿಂಗ್ ಪಹ್ರಾ ಅವರೊಂದಿಗೆ ಪಂಚಕುಲದಲ್ಲಿರುವ ಭವನದಲ್ಲಿ ರಹಸ್ಯ ಸಭೆ ನಡೆಸಿದ್ದಾರೆ.
ಇದನ್ನೂ ಓದಿ: ಸತತವಾಗಿ ಏರಿಕೆಯತ್ತ ಪೆಟ್ರೋಲ್.. ರಾಜಸ್ಥಾನದಲ್ಲಿ ಲೀಟರ್ಗೆ 102 ರೂ, ಬೆಂಗಳೂರಿನಲ್ಲಿ!?
ಈ ರಹಸ್ಯ ಸಭೆ ಎರಡು ದಿನಗಳಿಂದ ನಡೆಯುತ್ತಿವೆ ಮತ್ತು ಹಲವು ಶಾಸಕರು ಸಹ ಸಭೆಯಲ್ಲಿ ಉಪಸ್ಥಿತರಿದ್ದರು ಎಂದು ವರದಿಯಾಗಿದೆ. ಮತ್ತೊಂದೆಡೆ ಕೆಲವು ವಿಚಾರದ ಬಗ್ಗೆ ತಮ್ಮದೇ ಸರ್ಕಾರದ ಮೇಲೆ ಒತ್ತಡ ಹೇರುತ್ತಿರುವ ನವಜೋತ್ ಸಿಂಗ್ ಸಿಧು ಈಗ ಹಲವಾರು ಹಳೆಯ ಕಾಂಗ್ರೆಸ್ಸಿಗರೊಂದಿಗೆ ತಮ್ಮ ಸ್ಥಾನವನ್ನು ಬಲಪಡಿಸಿಕೊಳ್ಳುತ್ತಿದ್ದಾರೆ.
ಗುರುವಾರ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಹೆಚ್ಚಿನ ಕ್ಯಾಬಿನೆಟ್ ಮಂತ್ರಿಗಳು ಹಾಜರಿದ್ದರು. ಆದರೆ, ಸುಖ್ಜಿಂದರ್ ಸಿಂಗ್ ರಾಂಧವಾ ಮತ್ತು ಚರಣಜಿತ್ ಸಿಂಗ್ ಚನ್ನಿ ಅವರು ಕ್ಯಾಬಿನೆಟ್ ಸಭೆಗೆ ಹಾಜರಾಗಲಿಲ್ಲ.
ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ರಾಜಕೀಯ ಸಲಹೆಗಾರ ಸಂದೀಪ್ ಸಂಧು ಸಹ ಪಂಜಾಬ್ ಭವನದಲ್ಲಿ ಸಚಿವರನ್ನು ಮನವೊಲಿಸಲು ಪ್ರಯತ್ನಿಸಿದರು. ಈ ಎಲ್ಲಾ ಬೆಳವಣಿಗೆಗಳು ಮುಂಬರುವ ದಿನಗಳಲ್ಲಿ ಪಂಜಾಬ್ ಕಾಂಗ್ರೆಸ್‌ನಲ್ಲಿ ದೊಡ್ಡ ರಾಜಕೀಯ ಬದಲಾವಣೆಯಾಗಬಹುದು ಎಂದು ಸೂಚಿಸುತ್ತಿದೆ ಎನ್ನಲಾಗಿದೆ.