ETV Bharat / bharat

ಇಸ್ರೋ ಮಾಜಿ ಅಧ್ಯಕ್ಷ ಶಿವನ್​ ಸೇರಿ 9 ವಿಜ್ಞಾನಿಗಳಿಗೆ ತಮಿಳುನಾಡು ಸರ್ಕಾರದಿಂದ ತಲಾ ₹25 ಲಕ್ಷ ನಗದು ಬಹುಮಾನ - ತಮಿಳುನಾಡು ಸರ್ಕಾರ

ಇಸ್ರೋದ 9 ವಿಜ್ಞಾನಿಗಳಿಗೆ ತಮಿಳುನಾಡು ಸರ್ಕಾರ ನಗದು ಬಹುಮಾನ ಘೋಷಣೆ ಮಾಡಿದೆ.

ವಿಜ್ಞಾನಿಗಳಿಗೆ ಬಹುಮಾನ
ವಿಜ್ಞಾನಿಗಳಿಗೆ ಬಹುಮಾನ
author img

By ETV Bharat Karnataka Team

Published : Oct 2, 2023, 10:41 PM IST

ಚೆನ್ನೈ (ತಮಿಳುನಾಡು) : ಇಸ್ರೋದ ಮಾಜಿ ಅಧ್ಯಕ್ಷ ಕೆ.ಶಿವನ್ ಸೇರಿದಂತೆ ಚಂದ್ರಯಾನ ಮತ್ತು ಸೌರಯಾನ ಯೋಜನೆಗಳಲ್ಲಿ ಭಾಗಿಯಾಗಿರುವ ತಮಿಳುನಾಡಿಗೆ ಸೇರಿದ 9 ವಿಜ್ಞಾನಿಗಳಿಗೆ ಸಿಎಂ ಎಂ.ಕೆ.ಸ್ಟಾಲಿನ್​ ನೇತೃತ್ವದ ಸರ್ಕಾರ ತಲಾ 25 ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಿದೆ. ಈ ವಿಜ್ಞಾನಿಗಳ ಹೆಸರಿನಲ್ಲಿ ವಿದ್ಯಾರ್ಥಿವೇತನವನ್ನೂ ಆರಂಭಿಸಲಾಗುವುದು ಎಂದೂ ಸರ್ಕಾರ ಹೇಳಿದೆ.

ಚೆನ್ನೈನಲ್ಲಿ ಇಂದು ನಡೆದ ಸಮಾರಂಭದಲ್ಲಿ ವಿಜ್ಞಾನಿಗಳನ್ನು ಅಭಿನಂದಿಸಿದ ಸಿಎಂ ಸ್ಟಾಲಿನ್​, ಆಗಸ್ಟ್ 23ರಂದು ಚಂದ್ರನ ದಕ್ಷಿಣ ಧ್ರುವದ ಮೇಲೆ ವಿಕ್ರಮ್​ ಲ್ಯಾಂಡರ್​ ಇಳಿಸಿದ ಭಾರತವು ಇಡೀ ಜಗತ್ತಿಗೆ ಮಾದರಿಯಾಗಿದೆ. ಈ ಸಾಧನೆಯಲ್ಲಿ ತಮಿಳುನಾಡಿನ ವಿಜ್ಞಾನಿಗಳ ಪಾತ್ರ ಅಗಾಧವಾಗಿದೆ. ಚಂದ್ರಯಾನ ಯೋಜನಾ ನಿರ್ದೇಶಕ ವೀರಮುತ್ತುವೆಲ್ ತಮಿಳುನಾಡಿನವರಾಗಿದ್ದಾರೆ. ನಮ್ಮೆಲ್ಲರಿಗೂ ಇದು ಹೆಮ್ಮೆಯ ವಿಚಾರ ಎಂದರು.

ವಿಜ್ಞಾನಿಗಳ ಹೆಸರಲ್ಲಿ ವಿದ್ಯಾರ್ಥಿವೇತನ: ಈ ಒಂಬತ್ತು ವಿಜ್ಞಾನಿಗಳ ಹೆಸರಿನಲ್ಲಿ ಒಂಬತ್ತು ವಿದ್ಯಾರ್ಥಿವೇತನವನ್ನು ಸ್ಥಾಪಿಸುವುದಾಗಿ ಸಿಎಂ ಸ್ಟಾಲಿನ್​ ಪ್ರಕಟಿಸಿದರು. ಸ್ನಾತಕೋತ್ತರ ಪದವಿ ಓದುತ್ತಿರುವ ಒಂಬತ್ತು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನವನ್ನು ಪಡೆಯಲಿದ್ದಾರೆ. ಶಿಕ್ಷಣ, ಹಾಸ್ಟೆಲ್ ಶುಲ್ಕ ಮತ್ತು ಇತರ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ. ವಿಜ್ಞಾನಿಗಳ ಸಮಿತಿಯು ಅರ್ಹ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುತ್ತದೆ. ಈ ವಿದ್ಯಾರ್ಥಿವೇತನಕ್ಕಾಗಿ ಸರ್ಕಾರವು 10 ಕೋಟಿ ರೂಪಾಯಿ ನಿಧಿ ಮೀಸಲಿಡುತ್ತದೆ ಎಂದು ಸ್ಟಾಲಿನ್ ಹೇಳಿದರು.

ಒಂಬತ್ತು ವಿಜ್ಞಾನಿಗಳ ಪೈಕಿ ಆರು ಮಂದಿ ಸರ್ಕಾರಿ ಶಾಲೆಯಲ್ಲಿ ಓದಿದವರು. ಬಡ ಕುಟುಂಬದಲ್ಲಿ ಹುಟ್ಟಿ ಪದವಿ ಪಡೆದಿದ್ದಾರೆ. ಅವರ ಪೈಕಿ ಇಬ್ಬರು ಮಹಿಳೆಯರಿದ್ದಾರೆ. ರಾಜ್ಯದ ಯುವಕರು ಇಂತಹ ಮಹಾನ್​ ಸಾಧಕರನ್ನು ಮಾದರಿಯಾಗಿ ಅನುಸರಿಸಬೇಕು ಎಂದು ಸಲಹೆ ನೀಡಿದರು.

ಸನ್ಮಾನಿತ ವಿಜ್ಞಾನಿಗಳು: ಇಸ್ರೋದ ಮಾಜಿ ಅಧ್ಯಕ್ಷ ಕೆ.ಶಿವನ್, ಚಂದ್ರಯಾನ-3 ಯೋಜನಾ ನಿರ್ದೇಶಕ ಪಿ.ವೀರಮುತ್ತುವೇಲ್, ಚಂದ್ರಯಾನ-1 ಯೋಜನಾ ನಿರ್ದೇಶಕ ಮೈಲ್​ಸಾಮಿ ಅಣ್ಣಾದೊರೈ, ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್ ನಿರ್ದೇಶಕ ವಿ.ನಾರಾಯಣನ್, ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ನಿರ್ದೇಶಕ ಎ ರಾಜರಾಜನ್, ಯುಆರ್ ರಾವ್ ಉಪಗ್ರಹ ಕೇಂದ್ರದ ನಿರ್ದೇಶಕ ಎಂ.ಶಂಕರನ್, ಇಸ್ರೋ ಪ್ರೊಪಲ್ಷನ್ ಕಾಂಪ್ಲೆಕ್ಸ್ ನಿರ್ದೇಶಕ ಜೆ.ಅಸಿರ್ ಪ್ಯಾಕಿಯರಾಜ್, ಚಂದ್ರಯಾನ-2 ಯೋಜನಾ ನಿರ್ದೇಶಕಿ ಎಂ.ವನಿತಾ ಮತ್ತು ಆದಿತ್ಯ ಎಲ್1 ಯೋಜನಾ ನಿರ್ದೇಶಕ ನಿಗರ್ ಶಾಜಿ.

ಇದನ್ನೂ ಓದಿ: ಭೂಮಿಯ ಪ್ರಭಾವ ಗೋಳ ದಾಟಿ ಎಲ್​ 1 ಪಾಯಿಂಟ್ ಕಡೆಗೆ ಪಯಣ ಆರಂಭಿಸಿದ 'ಆದಿತ್ಯ': ಇಸ್ರೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.