ನವದೆಹಲಿ: ಕೇಂದ್ರದ ಮಾಜಿ ಸಚಿವ ಎಂಜೆ ಅಕ್ಬರ್ ಕ್ರಿಮಿನಲ್ ಮಾನಹಾನಿ ಪ್ರಕರಣದಲ್ಲಿ ಪತ್ರಕರ್ತೆ ಪ್ರಿಯಾ ರಮಣಿ ಖುಲಾಸೆಗೊಂಡಿದ್ದು, ಇದನ್ನ ಪ್ರಶ್ನೆ ಮಾಡಿ ದೆಹಲಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿದೆ.
ಕೇಂದ್ರದ ಮಾಜಿ ಸಚಿವ ಎಂಜೆ ಅಕ್ಬರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದ ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಮಾನಹಾನಿ ಪ್ರಕರಣ ಸಲ್ಲಿಕೆ ಮಾಡಲಾಗಿತ್ತು. ಇದರ ವಿಚಾರಣೆ ನಡೆಸುವುದಾಗಿ ಹೇಳಿರುವ ದೆಹಲಿ ಹೈಕೋರ್ಟ್ನ ನ್ಯಾಯಮೂರ್ತಿ ಮುಕ್ತಾ ಗುಪ್ತಾ, ಆದಷ್ಟು ಬೇಗ ಹೇಳಿಕೆಯ ದಾಖಲೆಗೋಸ್ಕರ ಕೋರ್ಟ್ಗೆ ಕರೆಯಿಸುವುದಾಗಿ ಹೇಳಿ, ವಿಚಾರಣೆಯನ್ನ ಆಗಸ್ಟ್ 11ಕ್ಕೆ ಮುಂದೂಡಿಕೆ ಮಾಡಿದ್ದಾರೆ.
ಪತ್ರಕರ್ತೆ ವಿರುದ್ಧ ಅಕ್ಬರ್ ಸಲ್ಲಿಕೆ ಮಾಡಿದ್ದ ಮಾನಹಾನಿ ಪ್ರಕರಣ ವಜಾಗೊಳಿಸಿದ್ದ ಹೈಕೋರ್ಟ್ ಅವರನ್ನ ಖುಲಾಸೆಗೊಳಿಸಿತ್ತು. ಇದನ್ನ ಪ್ರಶ್ನೆ ಮಾಡಿ ಅವರು ಮತ್ತೊಮ್ಮೆ ಅರ್ಜಿ ಸಲ್ಲಿಕೆ ಮಾಡಿದ್ದರು.
ಇದನ್ನೂ ಓದಿ: ಚುನಾವಣೆ ಅಂತ್ಯದ ಬೆನ್ನಲ್ಲೇ ತೈಲ ಬೆಲೆ ಏರಿಕೆ ಶುರು.. ಸತತ 2ನೇ ದಿನವೂ ಪೆಟ್ರೋಲ್ ರೇಟ್ ಏರಿಕೆ
ಏನಿದು ಪ್ರಕರಣ?: 2018ರಲ್ಲಿ 'ಮೀಟೂ' ಆಂದೋಲನದ ಸಂದರ್ಭದಲ್ಲಿ ಪತ್ರಕರ್ತೆ ಕೇಂದ್ರ ಮಾಜಿ ಸಚಿವ ಎಂ.ಜೆ ಅಕ್ಬರ್ ವಿರುದ್ಧ ಲೈಂಗಿಕ ಆರೋಪದ ಪ್ರಕರಣ ದಾಖಲು ಮಾಡಿದ್ದರು.
ಆದರೆ ತಮ್ಮ ವಿರುದ್ಧದ ಆರೋಪ ತಳ್ಳಿ ಹಾಕಿದ್ದ ಅಕ್ಬರ್ 2018ರ ಆಗಸ್ಟ್ 15ರಂದು ಪ್ರಿಯಾ ರಮಣಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಇನ್ನು ಇವರ ವಿರುದ್ಧ ವ್ಯಾಪಕ ಟೀಕೆ ಕೇಳಿ ಬಂದ ಕಾರಣ ಆಗಸ್ಟ್ 17ರಂದು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದರು.