ETV Bharat / bharat

ಮಿಜೋರಾಂ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ ಲಾಲ್ದುಹೋಮಾ - Mizoram Assembly Election

ಮಿಜೋರಾಂ ಮುಖ್ಯಮಂತ್ರಿಯಾಗಿ ಲಾಲ್ದುಹೋಮಾ ಅವರು ಇಂದು ಪ್ರಮಾಣವಚನ ಸ್ವೀಕಾರ ಮಾಡಿದರು.

Mizoram: Zoram People's Movement (ZPM) leader Lalduhoma takes oath

author img

By ETV Bharat Karnataka Team

Published : Dec 8, 2023, 12:06 PM IST

Updated : Dec 8, 2023, 12:59 PM IST

ಐಜ್ವಾಲ್ (ಮಿಜೋರಾಂ): ಝೋರಾಮ್ ಪೀಪಲ್ಸ್ ಮೂವ್ಮೆಂಟ್ (ZPM) ಪಕ್ಷದ ನಾಯಕ ಲಾಲ್ದುಹೋಮಾ ಅವರು ಮಿಜೋರಾಂನ ಮುಖ್ಯಮಂತ್ರಿಯಾಗಿ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಹರಿಬಾಬು ಕಂಬಂಪಾಟಿ ಅವರು ಲಾಲ್ದುಹೋಮಾ ಅವರಿಗೆ ರಾಜಭವನ ಸಂಕೀರ್ಣದಲ್ಲಿ ಗೌಪ್ಯತೆಯ ಪ್ರಮಾಣವಚನ ಬೋಧಿಸಿದರು. ಓರ್ವ ಮಾಜಿ IPS ಅಧಿಕಾರಿಯಾಗಿರುವ ಲಾಲ್ದುಹೋಮಾ, ಹಿಂದೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಭದ್ರತಾ ಉಸ್ತುವಾರಿಯಾಗಿ ಕೂಡ ಸೇವೆ ಸಲ್ಲಿಸಿದ್ದರು. ಇಂದು ಇವರೊಂದಿಗೆ 11 ಜನಪ್ರತಿನಿಧಿಗಳು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಮಿಜೋ ನ್ಯಾಷನಲ್ ಫ್ರಂಟ್ ನಾಯಕ ಮತ್ತು ನಿರ್ಗಮಿತ ಮುಖ್ಯಮಂತ್ರಿ ಝೋರಂತಂಗ ಅವರು ರಾಜಭವನದಲ್ಲಿ ಪ್ರಮಾಣ ವಚನ ಸಮಾರಂಭ ಆಯೋಜಿಸಿದ್ದರು. ಶಾಸಕಾಂಗ ಪಕ್ಷದ ನಾಯಕ ಲಾಲಛಂದಮ್​​ ರಾಲ್ಟೆ ಸೇರಿದಂತೆ ಝೋರಾಮ್ ಪೀಪಲ್ಸ್ ಮೂವ್ಮೆಂಟ್ ಪಕ್ಷದ ಎಲ್ಲ ಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಾಜಿ ಮುಖ್ಯಮಂತ್ರಿ ಲಾಲ್ ಥನ್ಹಾವ್ಲಾ ಕೂಡ ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಮಂಗಳವಾರ ಝೋರಾಮ್ ಪೀಪಲ್ಸ್ ಮೂವ್ ಮೆಂಟ್ ಶಾಸಕಾಂಗ ಪಕ್ಷವು ಲಾಲ್ದುಹೋಮ ಅವರನ್ನು ತಮ್ಮ ನಾಯಕ ಹಾಗೂ ಕೆ.ಸಪ್ದಂಗ ಅವರನ್ನು ಉಪ ನಾಯಕರನ್ನಾಗಿ ಆಯ್ಕೆ ಮಾಡಿತ್ತು.

40 ಸದಸ್ಯ ಬಲ ಹೊಂದಿರುವ ಮಿಝೋರಾಂ ವಿಧಾನಸಭೆಯು, ಮುಖ್ಯಮಂತ್ರಿ ಸೇರಿದಂತೆ 12 ಸಚಿವರನ್ನು ಹೊಂದಬಹುದಾಗಿದೆ. 2019ರಲ್ಲಿ ರಾಜಕೀಯ ಪಕ್ಷವಾಗಿ ನೋಂದಣಿಗೊಂಡಿದ್ದ ಝೋರಾಮ್ ಪೀಪಲ್ಸ್ ಮೂವ್ಮೆಂಟ್ ಪಕ್ಷವು 27 ಸ್ಥಾನಗಳಲ್ಲಿ ಜಯಿಸುವ ಮೂಲಕ ಇತ್ತೀಚೆಗೆ ಮುಕ್ತಾಯಗೊಂಡ ಚುನಾವಣೆಯಲ್ಲಿ ಜಯದ ಕೇಕೆ ಹಾಕಿತ್ತು. ಇದಕ್ಕೂ ಮುನ್ನ, 2018ರ ಚುನಾವಣೆಯ ಸಂದರ್ಭದಲ್ಲಿ ಅದರ ಸಂಖ್ಯಾಬಲ ಕೇವಲ 8 ಇತ್ತು. 8 ರಿಂದ ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಂಡ ಝೋರಾಮ್ ಪೀಪಲ್ಸ್ ಮೂವ್​​​ಮೆಂಟ್​​ ಈಗ 27 ಸ್ಥಾನಗಳನ್ನು ಗಳಿಸುವ ಮೂಲಕ ವಿಧಾನಸಭಾ ಚುನಾವಣೆಯಲ್ಲಿ ವಿಜಯಶಾಲಿಯಾಗಿದೆ.

ಮುಖ್ಯಮಂತ್ರಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ 73 ವರ್ಷದ ಲಾಲ್ದುಹೋಮಾ ಅವರು ಇದಕ್ಕೂ ಮುನ್ನ ಅನೇಕ ರಾಜಕೀಯ ಏರಿಳಿತಗಳನ್ನು ಎದುರಿಸಿದವರಾಗಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ವಿಜಯಶಾಲಿಯಾದ ತಕ್ಷಣ ಲಾಲ್ದುಹೋಮ ಅವರು ರಾಜ್ಯದ ಎಲ್ಲ ಮಹಿಳೆಯರು ಮತ್ತು ಯುವಕರಿಗೆ ಕೃತಜ್ಞತೆ ಸಲ್ಲಿಸಿದ್ದರು. ರಾಜ್ಯದಲ್ಲಿ ಮಹಿಳೆಯರ ಸ್ಥಿತಿಗತಿಯನ್ನು ಉನ್ನತೀಕರಿಸಲು ಸರ್ಕಾರ ಸದಾ ಬದ್ಧ ಎಂದು ಸಹ ಹೇಳಿದ್ದರು. ಹೊರಬಿದ್ದ ಫಲಿತಾಂಶದಲ್ಲಿ ಆಡಳಿತಾರೂಢ ಮಿಜೋ ನ್ಯಾಷನಲ್ ಫ್ರಂಟ್ (MNF) ಪಕ್ಷ 10 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ ಪಕ್ಷವು ಒಂದು ಸ್ಥಾನ ಮಾತ್ರ ಗೆಲ್ಲಲು ಸಾಧ್ಯವಾಯಿತು.

ಇದನ್ನು ಓದಿ: ತೆಲಂಗಾಣದ ನೂತನ ಸಿಎಂ ಆಗಿ ರೇವಂತ್​ ರೆಡ್ಡಿ ದೇವರ ಹೆಸರಿನಲ್ಲಿ ಪ್ರಮಾಣ ಸ್ವೀಕಾರ

Last Updated : Dec 8, 2023, 12:59 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.