ಹಾಪುರ್ (ಉತ್ತರ ಪ್ರದೇಶ): ಕಳೆದೆರಡು ದಿನಗಳಿಂದ ನಾಪತ್ತೆಯಾಗಿದ್ದ ಆರು ವರ್ಷದ ಬಾಲಕಿ ಇಂದು ಬೆಳಗ್ಗೆ ಪಕ್ಕದ ಮನೆಯ ಟ್ರಂಕ್ನೊಳಗೆ ಶವವಾಗಿ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ನಡೆದಿದೆ.
ಹಾಪುರ್ ಪಟ್ಟಣದಲ್ಲಿರುವ ನಿವಾಸಿಯೊಬ್ಬರು ಗುರುವಾರ ಸಂಜೆಯಿಂದ ತಮ್ಮ ಮಗಳು ಕಾಣಿಸುತ್ತಿಲ್ಲ. 5 ರೂ. ಪಡೆದು ಅಂಗಡಿಗೆ ಹೋಗುವುದಾಗಿ ಹೇಳಿ ಹೋಗಿದ್ದ ಮಗಳು ಹಿಂದಿರುಗಿಲ್ಲ ಎಂದು ಪೊಲೀಸರಿಗೆ ದೂರು ನೀಡಿದ್ದರು. ಇತ್ತ ನೆರೆ ಮನೆಯಿಂದ ಕೆಟ್ಟ ವಾಸನೆ ಬರುತ್ತಿದ್ದು, ಪೊಲೀಸರಿಗೆ ವಿಚಾರ ಮುಟ್ಟಿಸಲಾಗಿದೆ. ಸ್ಥಳಕ್ಕೆ ಹಾಪುರ್ ಪೊಲೀಸ್ ಎಸ್ಪಿ ಸರ್ವೇಶ್ ಕುಮಾರ್ ಮಿಶ್ರಾ ಹಾಗೂ ತಂಡ ಬಂದಿದೆ. ಆ ಮನೆಗೆ ಬೀಗ ಹಾಕಿದ್ದ ಕಾರಣ ಬಾಗಿಲು ಒಡೆದು ಪೊಲೀಸರು ಒಳಗೆ ಹೋಗಿದ್ದಾರೆ. ಅಲ್ಲಿ ನೋಡಿದರೆ ಟ್ರಂಕ್ ಒಳಗಡೆ ನಾಪತ್ತೆಯಾದ ಬಾಲಕಿಯ ಮೃತದೇಹ ಸಿಕ್ಕಿದೆ.
ಇದನ್ನೂ ಓದಿ: ಮಂಗಳೂರು: ಮನೆಯವರಿಗೆ ತಲವಾರ್ ತೋರಿಸಿ ಜಾನುವಾರು ಕದ್ದೊಯ್ದ ನಾಲ್ವರು ಅಂದರ್
ಕೋಪಗೊಂಡ ಜನರು ತಕ್ಷಣವೇ ಮನೆಯ ಮಾಲೀಕನನ್ನು ಥಳಿಸಲು ಮುಂದಾಗಿದ್ದಾರೆ. ಆದರೆ ಪೊಲೀಸರು ಜನರಿಂದ ಆತನನ್ನು ರಕ್ಷಿಸಿಕೊಂಡು ಬಳಿಕ ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಸಾವಿಗೆ ಕಾರಣ ತಿಳಿದು ಬರಲಿದೆ.
ಸಿಸಿಟಿವಿ ದೃಶ್ಯಾವಳಿಗಳನ್ನು ಗಮನಿಸಿದಾಗ ಆರೋಪಿ ಮಾಲೀಕನು ಅಂಗಡಿಗೆ ತೆರಳಿದ್ದ ಬಾಲಕಿಯನ್ನು ಬೈಕ್ನಲ್ಲಿ ಕೂರಿಸಿಕೊಂಡು ತನ್ನ ಮನೆಗೆ ಕರೆದುಕೊಂಎಯ ಹೋಗಿರುವುದು ತಿಳಿದು ಬಂದಿದೆ. ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.