ETV Bharat / bharat

ಮಾಜಿ ಸರ್ಪಂಚ್ ಸಹಾಯದಿಂದ ನಾಲ್ಕು ವರ್ಷಗಳ ನಂತರ ಮನೆಗೆ ಬಂದ ವೃದ್ಧೆ! - FINALLY AT KRISHNA DISTRICT

ಯಾರಿಗೆ ಏನಾದ್ರೇನು ಅಂದುಕೊಳ್ಳುವ ಈಗಿನ ಕಾಲದಲ್ಲಿ ಮಾಜಿ ಸರ್ಪಂಚ್​​ ಒಬ್ಬರು ದಯಾಹೃದಯದಿಂದ ಆಲೋಚಿಸಿದ್ದಾರೆ. ಕಾಣೆಯಾಗಿದ್ದ ವೃದ್ಧೆಯನ್ನು ಹೇಗಾದರೂ ತನ್ನ ಮನೆಗೆ ಸೇರಿಸಲು ಪರದಾಡಿದ್ದಾರೆ. ಮೊದಲನೇ ಪ್ರಯತ್ನದಲ್ಲಿ ವಿಫಲವಾದರೂ, ಕೊನೆಗೆ ಆಕೆಯನ್ನು ಮನೆಗೆ ತಲುಪಿಸಿದ್ದಾರೆ. ಸ್ವಂತದವರಿಗೆ ಸಮಸ್ಯೆ ಎಂದಾಗಲೂ ಬಾರದ ಈಗಿನ ಕಾಲದಲ್ಲಿ ಆ ವೃದ್ಧೆಗಾಗಿ ಮಾಜಿ ಸರ್ಪಂಚ್​​ ಮಾಡಿರುವ ಕಾರ್ಯಕ್ಕೆ ಹಲವರು ಪ್ರಶಂಸಿದ್ದಾರೆ..

missing-mother-found-finally-at-krishna-district-dot-family-united-after-4-years

author img

By

Published : Jun 8, 2021, 7:46 PM IST

ಕೃಷ್ಣ(ಆಂಧ್ರಪ್ರದೇಶ) : ನಾಲ್ಕು ವರ್ಷಗಳ ಹಿಂದೆ ಮನೆ ತೊರೆದಿದ್ದ ವೃದ್ಧೆಯೊಬ್ಬಳನ್ನು ಕೃಷ್ಣ ಜಿಲ್ಲೆಯ ಪೆನಗಂಚಿಪ್ರೊಲುವಿನ ಮಾಜಿ ಸರ್ಪಂಚ್ ಸುಧೀರ್ ಎಂಬುವರು ತನ್ನ ಮನೆಗೆ ಸೇರಿಸಿದ್ದಾರೆ.

ಕಳೆದ ಕೆಲ ದಿನಗಳಿಂದ ವೃದ್ಧೆಯನ್ನು ಗಮನಿಸುತ್ತಿದ್ದ ಸುಧೀರ್​ ಅವರು, ಆಕೆಯ ಬಗ್ಗೆ ವಿವರ ತಿಳಿದುಕೊಂಡಿದ್ದಾರೆ. ಅಲ್ಲದೇ ಆಕೆಯೊಂದಿಗೆ ಹಲವು ಬಾರಿ ಮಾತನಾಡಿ ಕುಟುಂಬದ ಬಗ್ಗೆ ಕೇಳಿದ್ದಾರೆ.

ಕೋವಿಡ್​​ 2ನೇ ಅಲೆಗೂ ಮುಂಚೆ ಆಕೆಯನ್ನು ಸ್ವಗ್ರಾಮಕ್ಕೆ ಕಳುಹಿಸಲು ಪ್ರಯತ್ನಿಸಿದರಾದರೂ ಆಗಲಿಲ್ಲ. ಹೀಗಾಗಿ, ಆಕೆಯ ಫೋಟೊವನ್ನು ತೆಗೆಸಿ ಕಡಪ ಜಿಲ್ಲೆಯ ತನ್ನ ಸ್ನೇಹಿತರಿಗೆ ಕಳುಹಿಸಿ ವಿಚಾರಿಸಲು ಹೇಳಿದ್ದಾರೆ.

ಸ್ನೇಹಿತರ ಸಹಾಯದಿಂದ ವೃದ್ಧೆಯ ಸ್ವಗ್ರಾಮದಲ್ಲಿನ ಕುಟುಂಬಸ್ಥರಿಗೆ ಫೋಟೊ ಕಳುಹಿಸಿ ಆಕೆ ತನ್ನೊಂದಿಗೆ ಇರುವುದನ್ನು ತಿಳಿಸಿದ್ದಾರೆ.

ನಾಲ್ಕು ವರ್ಷಗಳ ನಂತರ ತಾಯಿಯನ್ನ ನೋಡಿದ ಮಗ

ಸ್ಪಂದಿಸಿದ ಕುಟುಂಬಸ್ಥರು : ಕೂಡಲೇ ಸ್ಪಂದಿಸಿದ ಕುಟುಂಬಸ್ಥರು ಮಾಜಿ ಸರ್ಪಂಚ್​ ಸುಧೀರ್​ ಬಾಬುಗೆ ಫೋನ್​ ಮಾಡಿ ವೃದ್ದೆಯ ಬಗ್ಗೆ ವಿಚಾರಿಸಿದ್ದಾರೆ.

ಬಳಿಕ ಆಕೆಯನ್ನು ಕರೆತರಲು ಮಗ ಹಾಗೂ ಮೊಮ್ಮಗ ತೆರಳಿದ್ದು, ಇಬ್ಬರನ್ನು ಗುರ್ತಿಸಿದ ವೃದ್ಧೆಗೆ ಕಣ್ಣಾಲೆಗಳು ಒದ್ದೆಯಾಗಿದ್ದವು. ನಾಲ್ಕು ವರ್ಷಗಳಿಂದ ದೂರವಾಗಿದ್ದ ತನ್ನ ತಾಯಿಯನ್ನು ಹತ್ತಿರ ಸೇರಿಸಿದ ಸುಧೀರ್​ ಬಾಬುಗೆ ಧನ್ಯವಾದ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.