ETV Bharat / bharat

ದೇಶದಲ್ಲಿ ಭೀತಿ ಹುಟ್ಟಿಸುತ್ತಿದೆ ಕೋವಿಡ್ 2ನೇ ಅಲೆ... ಸರ್ಕಾರದ ಅಂಕಿ-ಅಂಶದ ಮೇಲೆಯೇ ಎದ್ದಿದೆ ಪ್ರಶ್ನೆ!

ದೇಶದಲ್ಲಿ ದಿನೇ ದಿನೆ ಕೊರೊನಾ ಪ್ರಕರಣಗಳ ಸಂಖ್ಯೆ ಜನತೆಯಲ್ಲಿ ಭೀತಿ ಹುಟ್ಟಿಸುತ್ತಿದೆ. ಪ್ರತಿದಿನ 2 ಲಕ್ಷಕ್ಕೂ ಅಧಿಕ ಪ್ರಕರಣ ದಾಖಲಾಗುತ್ತಿದ್ದು, ಸಾವಿನ ಸಂಖ್ಯೆಯಲ್ಲೂ ಭಾರೀ ಏರಿಕೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

missing-deaths-put-question-on-government-covid-data
ಸರ್ಕಾರದ ಅಂಕಿ-ಅಂಶದ ಮೇಲೆಯೇ ಎದ್ದಿದೆ ಪ್ರಶ್ನೆ..!
author img

By

Published : Apr 17, 2021, 10:43 PM IST

Updated : Apr 18, 2021, 5:17 AM IST

ಹೈದರಾಬಾದ್: ಕಳೆದ ಮೂರು ದಿನಗಳಿಂದ ಪ್ರತಿದಿನ 2 ಲಕ್ಷಕ್ಕೂ ಹೆಚ್ಚು ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗುತ್ತಿವೆ ಎಂಬ ಅಂಶದಿಂದ ಮಾತ್ರ ದೇಶದಲ್ಲಿ 2ನೇ ಅಲೆ ಎಷ್ಟು ಅಪಾಯಕಾರಿ ಎಂದು ಅಳೆಯಬಹುದು. ಪ್ರತಿದಿನ 2 ಲಕ್ಷ ಹೊಸ ಪ್ರಕರಣಗಳು ದಾಖಲಾಗುವುದು ಅಂದರೆ ಅದರರ್ಥ ಬೇರೆಯದ್ದಾಗುತ್ತದೆ. ಅಂತೆಯೇ ಕೋವಿಡ್ -19 ಸಾವುಗಳ ಸಂಖ್ಯೆಯಲ್ಲೂ ಭಾರೀ ಹೆಚ್ಚಳವಿದೆ.

ಕೇಂದ್ರ ಸರ್ಕಾರ ಪ್ರತಿದಿನ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಕಳೆದ ಮೂರು ದಿನಗಳಲ್ಲಿ ಪ್ರತಿದಿನ 1000ಕ್ಕೂ ಹೆಚ್ಚು ಸೋಂಕಿತರು ಪ್ರಾಣ ಕಳೆದುಕೊಂಡಿದ್ದಾರೆ. ಆದಾಗ್ಯೂ ಈ ಡೇಟಾ ಪ್ರಶ್ನಾರ್ಹವಾಗಿದೆ. ಕೋವಿಡ್ -19 ಸಾವುಗಳ ಬಗ್ಗೆ ವಿವಿಧ ರಾಜ್ಯಗಳಿಂದ ಬರುವ ಅಂಕಿ-ಅಂಶಗಳ ಮೇಲೆ ಪ್ರಶ್ನೆ ಹುಟ್ಟುಕೊಂಡಿದೆ. ಶವ ಸಂಸ್ಕಾರದ ಮೈದಾನದಲ್ಲಿ ಸುಡಲಾಗುತ್ತಿರುವ ಶವಗಳ ಸಂಖ್ಯೆಗೂ ಮತ್ತು ಸರ್ಕಾರ ಬಿಡುಗಡೆ ಮಾಡುತ್ತಿರುವ ಕೋವಿಡ್-19 ಸಾವುಗಳ ಮಾಹಿತಿ ನಡುವೆ ಹೊಂದಾಣಿಕೆಯಾಗದಿರುವುದು ಹಲವು ಕಡೆ ಪ್ರಶ್ನೆ ಮೂಡಲು ಕಾರಣವಾಗಿದೆ.

ಇಂತಹ ವರದಿಗಳು ಹೊರಬರುತ್ತಿದ್ದಂತೆ ಈಟಿವಿ ಭಾರತ್ ಗ್ರೌಂಡ್ ರಿಪೋರ್ಟ್​​ಗೆ ಇಳಿದಿದ್ದು, ದೇಶದ ನಾನಾ ಭಾಗಗಳ ಡೇಟಾ ಸಂಗ್ರಹಿಸಿದೆ. ಅಲ್ಲದೆ ಮಹಾರಾಷ್ಟ್ರ ಹಾಗೂ ಗುಜರಾತ್​​ನ ನೈಜ ಚಿತ್ರಣ ಹೊರತರುವ ಪ್ರಯತ್ನ ಮಾಡಿದೆ.

ಈ ವರದಿಯ ಮೂಲಕ ಕೋವಿಡ್ -19 ಸಾವುಗಳಿಗೆ ಸಂಬಂಧಿಸಿದ ದತ್ತಾಂಶಗಳ ಬಗ್ಗೆ ಹೇಗೆ ಮತ್ತು ಏಕೆ ಪ್ರಶ್ನೆಗಳನ್ನು ಎತ್ತಲಾಗುತ್ತಿದೆ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬಹುದು. ಈಟಿವಿ ಭಾರತ್‌ನ ಮೊದಲ ವರದಿಯಲ್ಲಿ ನಾವು ಮಧ್ಯಪ್ರದೇಶ, ಛತ್ತೀಸ್​ಗಢ ಮತ್ತು ದೆಹಲಿಯ ವಾಸ್ತವತೆ ಬಗ್ಗೆ ಚರ್ಚಿಸಿದ್ದೇವೆ. ಈ ರಾಜ್ಯಗಳಲ್ಲಿ ಒಂದೆರಡು ಶವ ಸಂಸ್ಕಾರದ ಮೈದಾನಗಳ ದತ್ತಾಂಶವು ಸರ್ಕಾರದ ವರದಿಯಲ್ಲಿ ನ್ಯೂನತೆ ಉಂಟಾಗಿರುವ ಕುರಿತು ಬೆಳಕು ಚೆಲ್ಲುತ್ತಿದೆ. ಅಲ್ಲದೆ ಮಹಾರಾಷ್ಟ್ರದ ಅಹ್ಮದ್‌ನಗರ ಮತ್ತು ಗುಜರಾತ್‌ನ ಭಾವನಗರದಲ್ಲಿ ಕೋವಿಡ್ -19 ಸಾವುಗಳ ಸಂಖ್ಯೆಯ ಬಗ್ಗೆ ಏಕೆ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸೋಣ.

ಮಹಾರಾಷ್ಟ್ರ

ಕೊರೊನಾ ವೈರಸ್​​​ನ 2ನೇ ಅಲೆಯು ದೇಶದಲ್ಲಿ ಅಧಿಕ ಹಾನಿಯನ್ನುಂಟುಮಾಡುತ್ತಿದೆ. ಆದರೆ ಕೊರೊನಾ ಪರಿಣಾಮವು ಮಹಾರಾಷ್ಟ್ರದಲ್ಲಿ ಸಾಕಷ್ಟು ದುರ್ಬಲಗೊಳ್ಳುತ್ತಿದೆ. ವೈರಸ್​​​ನ ಮೊದಲ ಅಲೆಯಂತೆ 2ನೇ ಅಲೆ ಸಹ ಮಹಾರಾಷ್ಟ್ರದ ಮೇಲೆ ಹೆಚ್ಚು ಪರಿಣಾಮ ಬೀರಿದೆ. ಮಹಾರಾಷ್ಟ್ರದಲ್ಲಿ ಪ್ರತಿದಿನ ಸರಾಸರಿ 60 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಕಳೆದ 24 ಗಂಟೆಗಳಲ್ಲಿ 63 ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣಗಳು ಮತ್ತು 398 ಸಾವುಗಳು ವರದಿಯಾಗಿವೆ. ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯವು ಪ್ರತಿದಿನ ಬಿಡುಗಡೆ ಮಾಡುವ ಹೊಸ ಕೊರೊನಾ ಪ್ರಕರಣಗಳು ಮತ್ತು ಸಾವಿನ ಅಂಕಿ ಅಂಶಗಳಲ್ಲಿ ಮಹಾರಾಷ್ಟ್ರವು ಅಗ್ರಸ್ಥಾನದಲ್ಲಿದೆ.

ಮಹಾರಾಷ್ಟ್ರವು ಕೊರೊನಾ ಪ್ರಕರಣ ಹಾಗೂ ಸಾವುಗಳ ಸಂಖ್ಯೆಯಲ್ಲಿ ಅಗ್ರಸ್ಥಾನದಲ್ಲಿದೆ. ಆದರೆ ರಾಜ್ಯದಲ್ಲಿ ಉಂಟಾಗುತ್ತಿರುವ ಸಾವಿನ ಸಂಖ್ಯೆಗಳ ಬಗ್ಗೆಯೂ ಪ್ರಶ್ನೆ ಎದ್ದಿದೆ. ಇಲ್ಲಿನ ಸಾವಿನ ಸಂಖ್ಯೆ ಕುರಿತು ಪ್ರಶ್ನೆ ಮೂಡಲು ಕಾರಣ ಏನೆಂಬುದನ್ನು ನಾವು ತಿಳಿಸುತ್ತೇವೆ.

ಏಪ್ರಿಲ್ 9ರಂದು ಅಹ್ಮದ್‌ನಗರದ ಅಮರ್‌ಧಾಮ್ ಶವಾಗಾರದಲ್ಲಿ ಮೃತಪಟ್ಟ 49 ಮಂದಿ ಸೋಂಕಿತರ ಅಂತ್ಯಕ್ರಿಯೆ ಮಾಡಲಾಗಿತ್ತು. ಆದರೆ ಏಪ್ರಿಲ್ 9ರಂದು ಸರ್ಕಾರದ ಅಂಕಿ-ಅಂಶಗಳ ಪ್ರಕಾರ, ಅಹ್ಮದ್‌ನಗರ ಜಿಲ್ಲೆಯಲ್ಲಿ ಕೊರೊನಾದಿಂದ ಕೇವಲ ಮೂವರು ಸಾವನ್ನಪ್ಪಿದ್ದಾರೆ. ಏಪ್ರಿಲ್ 9ರಂದು, ಮಹಾರಾಷ್ಟ್ರದಲ್ಲಿ ಕೋವಿಡ್​​ನಿಂದ ಮೃತಪಟ್ಟವರ ಅಧಿಕೃತ ಸಂಖ್ಯೆ 301 ಆಗಿತ್ತು. ಈಟಿವಿ ಭಾರತ್ ಗ್ರೌಂಡ್​ ರಿಪೋರ್ಟ್​​​ನಲ್ಲಿ ಮಹಾರಾಷ್ಟ್ರದ ಅಹ್ಮದ್‌ನಗರದಲ್ಲಿನ ಕೇವಲ ಒಂದು ಶವಾಗಾರದ ಚಿತ್ರಣ ಮಾತ್ರ ತೋರಿಸಲಾಯಿತು.

ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಮಹಾರಾಷ್ಟ್ರದಲ್ಲಿ ಪ್ರತಿ 24 ಗಂಟೆಗಳಿಗೊಮ್ಮೆ 60 ಸಾವಿರಕ್ಕೂ ಹೆಚ್ಚು ಹೊಸ ಕೊರೊನಾ ಕೇಸ್​ಗಳು ವರದಿಯಾಗುತ್ತವೆ.

ಗುಜರಾತ್​​

ಗುಜರಾತ್‌ನಲ್ಲಿಯೂ ಸಹ ಕಳೆದ ಎರಡು ವಾರಗಳಿಂದ ಕೊರೊನಾ ಸೋಂಕಿನ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಪ್ರತಿದಿನ ಹೊರಬರುತ್ತಿರುವ ಕೊರೊನಾ ಪ್ರಕರಣಗಳು ಹೊಸ ದಾಖಲೆಗಳನ್ನು ನಿರ್ಮಿಸುತ್ತಿವೆ. ಕಳೆದ 24 ಗಂಟೆಗಳಲ್ಲಿ 8,920 ಹೊಸ ಪ್ರಕರಣಗಳು ವರದಿಯಾಗಿದ್ದು, ಗುಜರಾತ್‌ನಲ್ಲಿ 94 ಜನರು ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆಯ ಬಗ್ಗೆಯೂ ಇಲ್ಲಿ ಪ್ರಶ್ನೆಗಳು ಎದ್ದಿವೆ.

ಈಟಿವಿ ಭಾರತ್ ಗುಜರಾತ್‌ನ ಭಾವನಗರದ ಗ್ರೌಂಡ್ ರಿಪೋರ್ಟ್​​ ಅಂಕಿ-ಅಂಶಗಳನ್ನು ಪ್ರಸ್ತುತಪಡಿಸುತ್ತಿದ್ದು, ಇದು ಸಾವಿನ ಸಂಖ್ಯೆಯ ಕುರಿತು ಪ್ರಶ್ನೆ ಹುಟ್ಟುಹಾಕಿದೆ. ಏಪ್ರಿಲ್ 15ರಂದು ಗುಜರಾತ್‌ನ ಭಾವನಗರದ ಕುಂಭರ್ವಾಡ ಸ್ಮಶಾನದಲ್ಲಿ 20 ಮೃತದೇಹಗಳನ್ನು ಅಂತ್ಯಕ್ರಿಯೆ ಮಾಡಲಾಯಿತು. ಭಾವನಗರದಲ್ಲಿ ಇನ್ನೂ ಮೂರು ಶವಾಗಾರಗಳಿವೆ. ಅಲ್ಲಿ ಪ್ರತಿದಿನ ಮೃತದೇಹಗಳನ್ನು ಅಂತ್ಯಕ್ರಿಯೆ ಮಾಡಲಾಗುತ್ತದೆ. ಮತ್ತೊಂದೆಡೆ ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಏಪ್ರಿಲ್ 15ರಂದು ಭಾವನಗರದಲ್ಲಿ ಒಬ್ಬ ವ್ಯಕ್ತಿಯೂ ಕೊರೊನಾದಿಂದ ಸಾವನ್ನಪ್ಪಲಿಲ್ಲ ಎನ್ನಲಾಗಿದೆ.

ಕುಭಾರವಾರ ಸ್ಮಶಾನದ ಟ್ರಸ್ಟಿ ಅರವಿಂದ್ ಪರ್ಮರ್ ಅವರ ಪ್ರಕಾರ, 15ರಿಂದ 20 ಮೃತದೇಹಗಳನ್ನು ಕುಂಭರವಾಡ ಸ್ಮಶಾನದಲ್ಲಿ ಪ್ರತಿದಿನ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಭಾವನಗರದಲ್ಲಿ ಇನ್ನೂ ಮೂರು ಶ್ಮಶಾನಗಳಿವೆ ಮತ್ತು ಕೊರೊನಾ ವೈರಸ್‌ನಿಂದ ಮರಣ ಹೊಂದಿದವರ ಶವ ಸಂಸ್ಕಾರವೂ ನಡೆಯುತ್ತದೆ. ಆದರೆ ಅಧಿಕೃತ ಅಂಕಿ-ಅಂಶಗಳು ಕೊರೊನಾದಿಂದ ಕೇವಲ ಒಂದು ಅಥವಾ ಎರಡು ಸಾವುಗಳು ಎಂದು ಘೋಷಿಸುತ್ತವೆ.

ಹುಟ್ಟಿಕೊಳ್ಳುತ್ತಿವೆ ಪ್ರಶ್ನೆಗಳು

ಭಾವನಗರದ ಕುಂಭಾರ್ವಾಡ ಸ್ಮಶಾನದ ಟ್ರಸ್ಟಿ ಅರವಿಂದ್ ಪರ್ಮಾರ್ ಅವರಂತೆ ಇನ್ನೂ ಅನೇಕ ಮಂದಿ ಕೊರೊನಾ ವೈರಸ್ ಸಾವಿನ ಸಂಖ್ಯೆಯನ್ನು ಪ್ರಶ್ನಿಸುತ್ತಿದ್ದಾರೆ. ಮತ್ತು ಈಟಿವಿ ಭಾರತ್, ಅವರ ಈ ವರದಿಯ ನಂತರ ನೀವು ಕೂಡ ಖಂಡಿತವಾಗಿಯೂ ಇದರ ಬಗ್ಗೆ ಯೋಚಿಸುವಿರಿ. ಡೇಟಾದ ಮೂಲಕ ಈ ಕಥೆಯನ್ನು ನೀವು ಇನ್ನೂ ಅರ್ಥ ಮಾಡಿಕೊಳ್ಳದಿದ್ದರೆ, ನಾವು ಅದನ್ನು ನಿಮಗೆ ವಿವರಿಸುತ್ತೇವೆ.

ಮಹಾರಾಷ್ಟ್ರದ ಅಹ್ಮದ್‌ನಗರ ಅಥವಾ ಗುಜರಾತ್‌ನ ಭಾವನಗರ ಕುರಿತು ಮಾತನಾಡುತ್ತಾ, ಈಟಿವಿ ಭಾರತ್ ಈ ಎರಡು ನಗರಗಳ ಕೇವಲ ಒಂದು ಶವಾಗಾರದಿಂದ ಡೇಟಾವನ್ನು ಸಂಗ್ರಹಿಸಿದೆ. 20 ಮೃತದೇಹಗಳ ಅಂತ್ಯಕ್ರಿಯೆ ಏಪ್ರಿಲ್ 15ರಂದು ಗುಜರಾತ್‌ನ ಭಾವನಗರದ ಒಂದು ಶವಾಗಾರದಲ್ಲಿ ನಡೆಯಿತು. ಇದರಲ್ಲಿ ಇನ್ನೂ ಮೂರು ಶವಾಗಾರಗಳಿವೆ. ಏಪ್ರಿಲ್ 15ರಂದು ಬಿಡುಗಡೆಯಾದ ಸರ್ಕಾರದ ಅಂಕಿ-ಅಂಶಗಳ ಪ್ರಕಾರ, ಭಾವನಗರದಲ್ಲಿ ಕೋವಿಡ್ ಕಾರಣ ಒಂದೇ ಒಂದು ಸಾವು ಸಂಭವಿಸಿಲ್ಲ.

ಅಂತೆಯೇ, 49 ಮೃತ ದೇಹಗಳ ಅಂತ್ಯಕ್ರಿಯೆ ಮಹಾರಾಷ್ಟ್ರದ ಅಹ್ಮದ್‌ನಗರದಲ್ಲಿರುವ ಶವಾಗಾರದಲ್ಲಿ ನಡೆದಿದೆ. ಆದರೆ ಸರ್ಕಾರದ ಅಂಕಿ-ಅಂಶಗಳ ಪ್ರಕಾರ ಆ ದಿನ ಕೇವಲ 3 ಜನರು ವೈರಸ್‌ನಿಂದ ಸಾವನ್ನಪ್ಪಿದ್ದಾರೆ. ಅಹ್ಮದ್‌ನಗರದ ಕೇವಲ ಒಂದು ಶವಾಗಾರದಲ್ಲಿ 49 ಶವಗಳನ್ನು ಅಂತ್ಯಕ್ರಿಯೆ ಮಾಡಲಾಗಿದೆ ಎಂಬ ಅಂಶವನ್ನು ನಾವಿಲ್ಲಿ ಗಮನಿಸಬೇಕು.

ಸಾವಿಗೆ ಇತರ ಕಾಯಿಲೆಗಳು, ಅಪಘಾತಗಳು ಅಥವಾ ನೈಸರ್ಗಿಕ ಕಾರಣಗಳು ಇರಬಹುದು. ಅಹ್ಮದ್‌ನಗರ, ಭಾವನಗರ ಅಥವಾ ಮಹಾರಾಷ್ಟ್ರ ಮತ್ತು ಗುಜರಾತ್‌ನ ಇತರ ನಗರಗಳ ಶವಾಗಾರದಲ್ಲಿ ಅಂತ್ಯಕ್ರಿಯೆ ನಡೆಸುತ್ತಿರುವ ಎಲ್ಲಾ ಮೃತದೇಹಗಳು ಕೊರೊನಾದಿಂದಾಗಿ ಸಾವನ್ನಪ್ಪಿವೆ ಎಂದು ಹೇಳುವುದು ಸಹ ತಪ್ಪಾಗುತ್ತದೆ.

ಆದರೆ ಪ್ರತಿ 24 ಗಂಟೆಗಳಿಗೊಮ್ಮೆ ಕೊರೊನಾ ವೈರಸ್ ಸೋಂಕಿನ ಸಂಖ್ಯೆ ಹೆಚ್ಚುತ್ತಿದೆ ಮತ್ತು ಕೊರೊನಾದಿಂದ ಮರಣ ಹೊಂದಿದವರ ಶವ ಸಂಸ್ಕಾರದ ವರದಿಗಳು ವಿವಿಧ ರಾಜ್ಯಗಳ ಪಟ್ಟಣಗಳು ​​ಮತ್ತು ನಗರಗಳಿಂದ ಬರುತ್ತಿವೆ. ಇದು ಕೊರೊನಾ ಸಾವಿನ ಬಗ್ಗೆ ಸರ್ಕಾರದ ಅಂಕಿ-ಅಂಶಗಳ ಮೇಲೆ ದೊಡ್ಡ ಪ್ರಶ್ನೆ ಮೂಡಿಸುವಂತಿದೆ.

Last Updated : Apr 18, 2021, 5:17 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.