ETV Bharat / bharat

ಫುಡ್​ ಡೆಲಿವರಿ ಬಾಯ್​​ಗೆ ಚಾಕುವಿನಿಂದ ದಾಳಿ: ಗಂಭೀರ ಸ್ಥಿತಿಯಲ್ಲೇ ಸ್ವತಃ ಆಸ್ಪತ್ರೆಗೆ ಸೇರಿದ್ದ ಯುವಕ ಕೊನೆಗೂ ಬದುಕಲಿಲ್ಲ - ತಾನೇ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ಸೇರಿದ್ದ ಯುವಕ ಕೊನೆಗೂ ಬದುಕಲಿಲ್ಲ

ಇಂದೋರ್‌ನಲ್ಲಿ ವಿದ್ಯಾಭ್ಯಾಸದ ಜೊತೆಗೆ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುತ್ತಿದ್ದ ಯುವಕನನ್ನು ದುಷ್ಕರ್ಮಿಗಳು ಕೊಂದಿದ್ದಾರೆ.

ಚಾಕುವಿನಿಂದ ದಾಳಿ : ತಾನೇ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ಸೇರಿದ್ದ ಯುವಕ ಕೊನೆಗೂ ಬದುಕಲಿಲ್ಲ

author img

By

Published : Jul 29, 2022, 10:55 PM IST

ಇಂದೋರ್: ಇಂದೋರ್‌ನಲ್ಲಿ ದುಷ್ಕರ್ಮಿಗಳ ಹಾವಳಿ ಹೆಚ್ಚಾಗಿದೆ. ಗುರುವಾರ ರಾತ್ರಿ ಇಂದೋರ್‌ನ ಬಂಗಂಗಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದುಷ್ಕರ್ಮಿಗಳು ಫುಡ್​ ಡೆಲಿವರಿ ಹುಡುಗನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡರೂ ಸಹ ಆತನೇ ಆಸ್ಪತ್ರೆಗೆ ಬಂದು ದಾಖಲಿಸಲಾಗಿದ್ದು, ಚಿಕಿತ್ಸೆ ವೇಳೆ ಮೃತಪಟ್ಟಿದ್ದಾನೆ.

ಪೊಲೀಸರು ದುಷ್ಕರ್ಮಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ. ಮೃತ ಯುವಕ ರಾಜಗಢ ನಿವಾಸಿಯಾಗಿದ್ದು, ಇಂದೋರ್‌ನಲ್ಲಿ ವಿದ್ಯಾಭ್ಯಾಸದ ಜೊತೆಗೆ ಡೆಲಿವರಿ ಬಾಯ್‌ ಕೆಲಸವನ್ನೂ ಮಾಡುತ್ತಿದ್ದ.

ಬಂಗಾಂಗದ ಕರೋಲ್ ಬಾಗ್ ಪ್ರದೇಶದಲ್ಲಿ ಡೆಲಿವರಿ ಮಾಡಲು ಹೊರಟಿದ್ದರು. ಈ ವೇಳೆ ಮೂವರು ದುಷ್ಕರ್ಮಿಗಳು ಆತನನ್ನು ತಡೆದು ದರೋಡೆ ಮಾಡುವ ಉದ್ದೇಶದಿಂದ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ನಂತರ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ತಲುಪಿದರಾದರೂ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ.

ಸಾವಿನ ಮಾಹಿತಿ ತಿಳಿದ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಬಣಗಂಗಾ ಠಾಣೆಗೆ ಸೂಚನೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.