ETV Bharat / bharat

ಬರೇಲಿ: ಕಾನ್​ಸ್ಟೇಬಲ್ ಮೇಲೆ ಗುಂಡಿನ ದಾಳಿ.. ಆರೋಪಿಗಳಿಬ್ಬರ ಬಂಧನ - ಈಟಿವಿ ಭಾರತ ಕನ್ನಡ

ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿಗಳಿಬ್ಬರನ್ನು ಬಂಧಿಸಲಾಗಿದೆ.

Bareilly Police Outpost
ಆರೋಪಿಗಳಿಬ್ಬರ ಬಂಧನ
author img

By

Published : Dec 17, 2022, 5:48 PM IST

ಬರೇಲಿ(ಉತ್ತರ ಪ್ರದೇಶ): ರಾಜ್ಯದ ಬರೇಲಿ ಪೊಲೀಸ್​ ಚೌಕಿ (ಔಟ್ ಪೋಸ್ಟ್)ಗೆ ವ್ಯಕ್ತಿಯೊಬ್ಬ ನುಗ್ಗಿ ಗುಂಡಿನ ದಾಳಿ ನಡೆಸಿದ್ದು, ಕಾನ್​ಸ್ಟೇಬಲ್​ ಗಾಯಗೊಂಡಿರುವ ಘಟನೆ ವರದಿಯಾಗಿದೆ.

ಗಾಯಗೊಂಡ ಕಾನ್​ಸ್ಟೇಬಲ್ ವಿಶಾಲ್​ ಶರ್ಮಾ ಅವರು ಕರ್ತವ್ಯದಲ್ಲಿದ್ದರು. ಈ ವೇಳೆ, ಬೈಕ್​​ನಲ್ಲಿ ಬಂದ ಇಬ್ಬರಲ್ಲಿ ಒಬ್ಬ ಚೌಕಿ ಒಳಗೆ ನುಗ್ಗಿದ್ದು, ಎಸ್​ಐ ಅವರನ್ನು ವಿಚಾರಿಸಿದ್ದಾನೆ. ಈ ವೇಳೆ, ಅವರು ಹೊರಗೆ ಹೋಗಿದ್ದಾರೆ ಎಂದು ಶರ್ಮಾ ಹೇಳಿದ್ದಾರೆ. ಅಲ್ಲದೇ ನೀನು ಕುಡಿದು ಬಂದಿದ್ದೀಯಾ? ಎಂದು ಪ್ರಶ್ನಿಸಿದ್ದು, ಆತನನ್ನು ಹೊರ ಹೋಗದಂತೆ ತಡೆದಿದ್ದಾರೆ. ಈ ವೇಳೆ, ಆತ ಗನ್​ ತೆಗೆದು ಗುಂಡು ಹಾರಿಸಿದ್ದು, ಶರ್ಮಾ ಅವರ ಬೆನ್ನಿನ ಭಾಗಕ್ಕೆ ತಗುಲಿದೆ.

ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಇದೀಗ ಚೇತರಿಸಿಕೊಂಡಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿಗಳಿಬ್ಬರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ಚಿಕ್ಕಬಳ್ಳಾಪುರ: ಕಾಲೇಜು ವಿದ್ಯಾರ್ಥಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಕೊಲೆ ಶಂಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.