ETV Bharat / bharat

ನೋಡಿದ್ದಕ್ಕೆ ಕೋಪ- ತಾಪ.. ಯುವಕನ ಬೈಕ್​ಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು - ಯುವಕನನ್ನು ಎಳೆದಾಡಿ ಥಳಿಸಿದ್ದಾರೆ

ಯುವಕನೊಬ್ಬ ಕೇವಲ ಯಾರನ್ನೋ ನೋಡಿದ ಮಾತ್ರಕ್ಕೆ ಅವರು ಬಂದು ಥಳಿಸುವ ಮಟ್ಟಿಗೆ ಇಲ್ಲಿ ಕಾನೂನು ಸುವ್ಯವಸ್ಥೆ ಕುಸಿದು ಬಿದ್ದಿದೆ. ರಸ್ತೆಯಲ್ಲಿ ಹೋಗುತ್ತಿರುವಾಗ ಯುವಕ ಮೂವರನ್ನು ನೋಡಿದ್ದಾನೆ. ಅಷ್ಟಕ್ಕೆ ಅವರು ಬಂದು ಯಾಕೆ ನೋಡುತ್ತೀಯಾ ಎಂದು ಯುವಕನನ್ನು ಎಳೆದಾಡಿ ಥಳಿಸಿದ್ದಾರೆ.

ಯುವಕನ ಬೈಕ್​ಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು
miscreants-set-the-youth-bike-on-fire
author img

By

Published : Dec 15, 2022, 3:49 PM IST

ಭಾವನಗರ: ಯುವಕನೊಬ್ಬನ ಬೈಕ್​ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಘಟನೆ ಇಲ್ಲಿ ನಡೆದಿದೆ. ದುಷ್ಕರ್ಮಿಗಳನ್ನು ಕೇವಲ ನೋಡಿದ ಮಾತ್ರಕ್ಕೆ ಯುವಕನ ಬೈಕ್ ಸುಡಲಾಗಿದೆಯಂತೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್​ನ ಭಾವನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಇನ್ನೋರ್ವ ಪರಾರಿಯಾಗಿದ್ದಾನೆ.

ಏನಿದು ಘಟನೆ?: ಯುವಕನೊಬ್ಬ ಕೇವಲ ಯಾರನ್ನೋ ನೋಡಿದ ಮಾತ್ರಕ್ಕೆ ಅವರು ಬಂದು ಥಳಿಸುವ ಮಟ್ಟಿಗೆ ಇಲ್ಲಿ ಕಾನೂನು ಸುವ್ಯವಸ್ಥೆ ಕುಸಿದು ಬಿದ್ದಿದೆಯಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ರಸ್ತೆಯಲ್ಲಿ ಹೋಗುತ್ತಿರುವಾಗ ಯುವಕ ಮೂವರನ್ನು ನೋಡಿದ್ದಾನೆ. ಅಷ್ಟಕ್ಕೆ ಅವರು ಬಂದು ಯಾಕೆ ನೋಡುತ್ತೀಯಾ ಎಂದು ಯುವಕನನ್ನು ಎಳೆದಾಡಿ ಥಳಿಸಿದ್ದಾರೆ.

ಅಲ್ಲದೇ ರಸ್ತೆ ಮಧ್ಯದಲ್ಲಿ ಆತನ ಬೈಕಿಗೆ ಬೆಂಕಿ ಹಚ್ಚಿದ್ದಾರೆ. ಬೈಕಿಗೆ ಬೆಂಕಿ ಇಟ್ಟ ಇಬ್ಬರು ಪಾನಮತ್ತ ದುಷ್ಕರ್ಮಿಗಳನ್ನು ಕೂಡಲೇ ಸ್ಥಳಕ್ಕೆ ಬಂದ ಬಾವಾ ನಗರ ಪೊಲೀಸರು ಬಂಧಿಸಿದ್ದಾರೆ. ನಂತರ ಅಗ್ನಿಶಾಮಕ ವಾಹನ ಬಂದು ಬೆಂಕಿ ನಂದಿಸಿದೆ. ಸದ್ಯ ಈ ಘಟನೆ ತೀವ್ರ ಚರ್ಚೆಗೆ ಗುರಿಯಾಗಿದೆ.

ದೇವುಬಾಗನಿಂದ ಜುವೆಲರ್ಸ್ ಸರ್ಕಲ್​ ಕಡೆಗೆ ಹೋಗುವ ರಸ್ತೆಯಲ್ಲಿ ವಿಶ್ವವಿದ್ಯಾಲಯ ಗೇಟ್ ಬಳಿ ಜಯರಾಜಸಿಂಗ್ ಪರ್ಮಾರ್ ಎಂಬಾತ ಬೈಕ್ ಮೇಲೆ ಹೋಗುತ್ತಿದ್ದ. ಆಗ ಸ್ಥಳದಲ್ಲಿದ್ದ ಮೂವರು ಅಪರಿಚಿತ ದುಷ್ಕರ್ಮಿಗಳು ಆತನನ್ನು ನಿಲ್ಲಿಸಿ ಥಳಿಸಿದ್ದಾರೆ ಮತ್ತು ಆತನ ಬೈಕಿನ ಪೆಟ್ರೋಲ್ ಟ್ಯಾಂಕ್ ಪೈಪ್ ತೆಗೆದು ಬೈಕ್​ಗೆ ಬೆಂಕಿ ಹಚ್ಚಿದ್ದಾರೆ. ಘಟನೆಯ ನಂತರ ಥಳಿತಕ್ಕೊಳಗಾದ ಯುವಕ ನೀಲಾಮಬಾಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.

ಇದನ್ನೂ ಓದಿ: ಮನೆ ಮುಂದೆ ಗಲಾಟೆ ಮಾಡಬೇಡ ಎಂದಿದ್ದಕ್ಕೆ ಬೈಕ್​ಗೆ ಬೆಂಕಿ ಹಚ್ಚಿದ ಭೂಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.