ETV Bharat / bharat

ಪೊಲೀಸರೆಂದು ಹೆದರಿಸಿ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ - ಅತ್ಯಾಚಾರವೆಸಗಿರುವ ವಿಡಿಯೋ ಮೊಬೈಲ್​ನಲ್ಲಿ ಸೆರೆ

ಅತ್ಯಾಚಾರವೆಸಗಿರುವ ವಿಡಿಯೋ ಮೊಬೈಲ್​ನಲ್ಲಿ ಸೆರೆ ಹಿಡಿದರುವ ಆರೋಪಿಗಳು ಸಂತ್ರಸ್ತೆಗೆ ವಿಷಯ ಯಾರಿಗೂ ಹೇಳಿದಂತೆ ಬೆದರಿಕೆ ಹಾಕಿದ್ದಾರೆ.

A minor student was gang-raped by being threatened by the police
ಪೊಲೀಸರೆಂದು ಹೆದರಿಸಿ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ
author img

By

Published : Jan 28, 2023, 6:39 PM IST

ಥಾಣೆ(ಮಹಾರಾಷ್ಟ್ರ): ಡೊಂಬಿವಿಲಿ ನಗರದ ಠಾಕುರ್ಲಿಯ ಖಾದಿ ಕಿನಾರಾ ಪ್ರದೇಶದಲ್ಲಿ 17 ವರ್ಷದ ಬಾಲಕಿಯ ಮೇಲೆ ಇಬ್ಬರು ಹಂತಕರು ಪೊಲೀಸರೆಂದು ಹೆದರಿಸಿ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ವಿಷ್ಣುನಗರ ಠಾಣೆ ಪೊಲೀಸರು ಅತ್ಯಾಚಾರ ಸಹಿತ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಬ್ಬರಿಗಾಗಿ ಹುಡುಕಾಟ ನಡೆಸಿದ್ದಾರೆ. ಬಾಲಕಿ ಮೇಲೆ ಅತ್ಯಾಚಾರ ನಡೆಸಿರುವುದನ್ನು ಹಂತಕರು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿರುವ ಆಘಾತಕಾರಿ ಸಂಗತಿ ಬಯಲಾಗಿದೆ.

ಈ ಸಂಬಂಧ ವಿಷ್ಣುನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆರೋಪಿಗಳಿಬ್ಬರೂ ತಲೆಮರೆಸಿಕೊಂಡಿದ್ದಾರೆ. ಪೊಲೀಸರು ಇಬ್ಬರಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಮೂಲಗಳ ಪ್ರಕಾರ, ಶುಕ್ರವಾರ ಮಧ್ಯಾಹ್ನ ಸುಮಾರಿಗೆ ಸಂತ್ರಸ್ತೆ ಅಪ್ರಾಪ್ತ ವಿದ್ಯಾರ್ಥಿನಿ ಠಾಕುರ್ಲಿ ಖಾದಿ ಬೀಚ್ ಪ್ರದೇಶದಲ್ಲಿ ಸ್ನೇಹಿತನೊಂದಿಗೆ ವಾಕಿಂಗ್ ಹೋಗಿದ್ದಳು. ಇಬ್ಬರೂ ನಡೆದುಕೊಂಡು ಹೋಗುತ್ತಿರುವಾಗ ಇಬ್ಬರು ಅಪರಿಚಿತ ವ್ಯಕ್ತಿಗಳು ಆ ಜಾಗಕ್ಕೆ ಬಂದಿದ್ದಾರೆ. ನಿಮ್ಮಿಬ್ಬರ ಬಗ್ಗೆ ನಿಮ್ಮ ಪೋಷಕರಿಗೆ ತಿಳಿಸುತ್ತೇವೆ, ನಾವು ಪೊಲೀಸರು ಎಂದು ಸುಳ್ಳು ಹೇಳಿ ಇಬ್ಬರಿಗೂ ಬೆದರಿಕೆ ಹಾಕಿದ್ದಾರೆ. ಸಂತ್ರಸ್ತೆ ಹಾಗೂ ಆಕೆಯ ಸ್ನೇಹಿತನಿಗೆ ಆರೋಪಿಗಳು ಕಪಾಳಕ್ಕೆ ಹೊಡೆದು ಬೆದರಿಸಿದ್ದಾರೆ.

ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ: ಬಳಿಕ ಆರೋಪಿಯೊಬ್ಬ ವಿದ್ಯಾರ್ಥಿನಿಯನ್ನು ಸ್ವಲ್ಪ ದೂರದ ಪೊದೆಯಂತಿದ್ದ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾನೆ. ಆ ನಿರ್ಜನ ಸ್ಥಳದಲ್ಲಿ ಆಕೆಯ ಮೇಲೆ ಬಲವಂತವಾಗಿ ಅತ್ಯಾಚಾರ ಎಸಗಿದ್ದಾನೆ. ಅತ್ಯಾಚಾರ ಮಾಡಿರುವುದು ಮಾತ್ರವಲ್ಲದೆ ಅದನ್ನು ತನ್ನ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾನೆ. ಎರಡನೇ ಆರೋಪಿ ಸಂತ್ರಸ್ತೆಯ ಸ್ನೇಹಿತನನ್ನು ಸ್ಟೇಷನ್ ಏರಿಯಾದಲ್ಲಿ ಡ್ರಾಪ್ ಮಾಡಿ, ನಮ್ಮ ಸಾಹೇಬರು ಅಲ್ಲಿ ಕುಳಿತಿದ್ದಾರೆ, ನೀನು ಅವರ ಬಳಿ ಹೋಗಿ ಮಾತನಾಡು ಎಂದು ಹೇಳಿ ಹೋಗಿದ್ದಾನೆ.

ಸಂತ್ರಸ್ತೆಯ ಸ್ನೇಹಿತನನ್ನು ಪೊಲೀಸ್​ ಸ್ಟೇಷನ್​ ಬಳಿ ಡ್ರಾಪ್​ ಮಾಡಿ ಬಂದ ಎರಡನೇ ಆರೋಪಿಯೂ ಕೂಡ ವಿದ್ಯಾರ್ಥಿನಿಯ ಮೇಲೆ ಬಲವಂತವಾಗಿ ಅತ್ಯಾಚಾರ ಎಸಗಿದ್ದಾನೆ. ಈ ಬಗ್ಗೆ ಯಾರಿಗಾದರು ಹೇಳಿದರೆ ವಿಡಿಯೋ ವೈರಲ್ ಮಾಡುವುದಾಗಿ ಆರೋಪಿಗಳು ಬೆದರಿಕೆ ಹಾಕಿದ್ದಾರೆ. ಆದರೆ, ಸಂತ್ರಸ್ತೆ ವಿದ್ಯಾರ್ಥಿನಿ ತನ್ನ ಸಂಬಂಧಿಕರಿಗೆ ಈ ಘಟನೆಯನ್ನು ವಿವರಿಸಿದ್ದಾಳೆ. ಆಘಾತಗೊಂಡ ಸಂತ್ರಸ್ತೆಯ ಮನೆಯವರು ಸಂತ್ರಸ್ತೆಯನ್ನು ಕರೆದುಕೊಂಡು ಡೊಂಬಿವಿಲಿ ಪೊಲೀಸ್​ ಠಾಣೆಗೆ ಹೋಗಿದ್ದಾರೆ. ಈ ಕೃತ್ಯ ಡೊಂಬಿವಿಲಿ ಪಶ್ಚಿಮ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಜರುಗಿದ ಕಾರಣ ಅವರನ್ನು ವಿಷ್ಣುನಗರ ಪೊಲೀಸ್​ ಠಾಣೆಗೆ ಕಳುಹಿಸಲಾಗಿದೆ.

ಪೊಕ್ಸೋ ಕಾಯಿದೆಯಡಿ ಪ್ರಕರಣ: ನಿನ್ನೆ ರಾತ್ರಿ ಹನ್ನೆರಡರ ಸುಮಾರಿಗೆ ಈ ಪ್ರಕರಣದ ಇಬ್ಬರು ಆರೋಪಿಗಳ ವಿರುದ್ಧ ವಿಷ್ಣುನಗರ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಅಪರಾಧದ ಆಧಾರದ ಮೇಲೆ ವಿಷ್ಣುನಗರ ಪೊಲೀಸರು ಆರೋಪಿಗಳ ಪತ್ತೆಗೆ ಐದು ತಂಡಗಳನ್ನು ರಚಿಸಿದ್ದು, ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಠಾಣೆ ವ್ಯಾಪ್ತಿಯ ಕೆಲವು ಸಿಸಿಟಿವಿ ದೃಶ್ಯಗಳಲ್ಲಿ ಹಂತಕರನ್ನು ಗುರುತಿಸಿ ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಪಂಢರಿನಾಥ್ ಭಲೇರಾವ್ ತಿಳಿಸಿದ್ದಾರೆ. ಸಂತ್ರಸ್ತೆ ಕಾಲೇಜಿನಲ್ಲಿ 12ನೇ ತರಗತಿ ಓದುತ್ತಿರುವುದು ಬೆಳಕಿಗೆ ಬಂದಿದೆ. ಮತ್ತೊಂದೆಡೆ, ಕಳೆದ ಕೆಲವು ದಿನಗಳಲ್ಲಿ ನಡೆದ ಈ ಆಘಾತಕಾರಿ ಘಟನೆಯಿಂದ ಡೊಂಬಿವಿಲಿಯಲ್ಲಿ ಸಂಚಲನ ಉಂಟಾಗಿದೆ.

ಇದನ್ನೂ ಓದಿ: ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಇಬ್ಬರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.