ETV Bharat / bharat

ನಿಲ್ಲದ ಕ್ರೌರ್ಯ.. ತಾಯಿ ಎದುರೇ ಅಪ್ರಾಪ್ತ ಮಗಳ ಮೇಲೆ ಸಾಮೂಹಿಕ ಅತ್ಯಾಚಾರ - ಅತ್ಯಾಚಾರಕ್ಕೊಳಗಾದ ಅಪ್ರಾಪ್ತೆಯ ಸ್ಥಿತಿ ಗಂಭೀರ

ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ತಾಯಿ, ಮಗಳನ್ನು ತಡೆದ ಐವರು ಕಾಮುಕರು ಅಪ್ರಾಪ್ತೆಯನ್ನು ತಾಯಿಯ ಎದುರೇ ಅತ್ಯಾಚಾರ ನಡೆಸಿದ ಕ್ರೂರ ಘಟನೆ ಜಾರ್ಖಂಡ್​ನಲ್ಲಿ ನಡೆದಿದೆ.

minor-raped-in-front-of-mother-in-jharkhand
ತಾಯಿಯ ಎದುರೇ ಅಪ್ರಾಪ್ತೆ ಮಗಳ ಮೇಲೆ ಸಾಮೂಹಿಕ ಅತ್ಯಾಚಾರ
author img

By

Published : Oct 11, 2022, 2:58 PM IST

ದಿಯೋಘರ್, ಜಾರ್ಖಂಡ್​: ಅತ್ಯಾಚಾರ ಪ್ರಕರಣಗಳ ಮೇಲೆ ಎಷ್ಟೇ ಕಠಿಣ ಕಾನೂನು ತಂದರೂ, ಅಮಾನವೀಯ ಘಟನೆಗಳು ಮಾತ್ರ ನಿಂತಿಲ್ಲ. ಹೆತ್ತ ತಾಯಿಯ ಎದುರೇ ಅಪ್ರಾಪ್ತೆಯ ಮೇಲೆ ಐವರು ಕಾಮುಕರು ಮುಗಿಬಿದ್ದು ಸಾಮೂಹಿಕ ಅತ್ಯಾಚಾರ ನಡೆಸಿ ಕ್ರೌರ್ಯ ಮೆರೆದ ಘಟನೆ ಜಾರ್ಖಂಡ್​ನಲ್ಲಿ ಇತ್ತೀಚೆಗೆ ನಡೆದಿದೆ. ಸಂತ್ರಸ್ತೆಯ ಸ್ಥಿತಿ ಚಿಂತಾಜನಕವಾಗಿದ್ದು, ಪ್ರತಿರೋಧಿಸಿದ ತಾಯಿಯ ಮೇಲೆ ಕೀಚಕರು ಗಂಭೀರ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.

ಏನಾಯ್ತು?: ಯಾವುದೋ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತಾಯಿ, ಮಗಳು ದಿಯೋಘರ್​ಗೆ ತೆರಳಿದ್ದರು. ವಾಪಸ್​ ಬರುವಾಗ ರಾತ್ರಿಯಾಗಿತ್ತು. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅದೇ ಮಾರ್ಗವಾಗಿ ಎರಡು ಬೈಕ್​ಗಳ ಮೇಲೆ ಬಂದ ಐವರು ಕೀಚಕರು, ತಾಯಿ ಮಗಳನ್ನು ಚುಡಾಯಿಸಿದ್ದಾರೆ.

ಬಳಿಕ ಅಪ್ರಾಪ್ತೆಯನ್ನು ತಾಯಿಯ ಎದುರೇ ಎಳೆದೊಯ್ದು ಅತ್ಯಾಚಾರ ನಡೆಸಿದ್ದಾರೆ. ಇದನ್ನು ವಿರೋಧಿಸಿದ ತಾಯಿಯ ಮೇಲೆ ಗಂಭೀರವಾಗಿ ಹಲ್ಲೆ ಮಾಡಿದ್ದಾರೆ. ಬಳಿಕ ಅಪ್ರಾಪ್ತೆಯನ್ನು ರಸ್ತೆಯ ಬಿಸಾಡಿದ್ದಾರೆ. ಇಷ್ಟಕ್ಕೆ ಬಿಡದ ಕಿರಾತಕರು ಮಹಿಳೆಯ ಬಳಿ ಇದ್ದ 5 ಸಾವಿರ ನಗದು ಹಾಗೂ ಮೊಬೈಲ್ ದೋಚಿ ಪರಾರಿಯಾಗಿದ್ದಾರೆ.

ಸಂತ್ರಸ್ತೆಯ ಸ್ಥಿತಿ ಗಂಭೀರ: ಅತ್ಯಾಚಾರಕ್ಕೊಳಗಾದ ಅಪ್ರಾಪ್ತೆಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ತಾಯಿ, ಮಗಳು ಕತ್ತಲೆಯಲ್ಲೇ ಹೇಗೋ ಊರು ಸೇರಿಕೊಂಡು, ಪೊಲೀಸ್​ ಠಾಣೆಗೆ ಬಂದು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಪ್ರಾಪ್ತೆಯನ್ನು ವೈದ್ಯಕೀಯ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳ ಗುರುತು ಪತ್ತೆಯಾಗಿದ್ದು, ಶೀಘ್ರದಲ್ಲೇ ಕಾಮುಕರನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಓದಿ: ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಅಲ್ತಾಫ್ ಶಾ ಕ್ಯಾನ್ಸರ್​ಗೆ ಬಲಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.