ಧೋಲ್‌ಪುರ(ರಾಜಸ್ಥಾನ): ಇಲ್ಲಿನ ಸದರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದ 45 ವರ್ಷದ ವ್ಯಕ್ತಿಯೋರ್ವನೊಂದಿಗೆ 16ರ ಅಪ್ರಾಪ್ತೆಯನ್ನು ಮದುವೆ ಮಾಡಿಕೊಡಲಾಗಿತ್ತು. ಇವರಿಗೆ ಒಂದು ಹೆಣ್ಣು ಮಗ ಸಹ ಜನಿಸಿದ್ದು, ಇದೀಗ ಆತನೊಂದಿಗೆ ಜೀವನ ನಡೆಸಲು ಹಿಂದೇಟು ಹಾಕಿರುವ ಬಾಲೆ, 22ರ ಯುವಕನೊಂದಿಗೆ ಪರಾರಿಯಾಗಿದ್ದಾಳೆ. ರಾಜಸ್ಥಾನದ ಧೋಲ್ಪುರದಲ್ಲಿ ಈ ಘಟನೆ ನಡೆದಿದೆ.
ಅಪ್ರಾಪ್ತೆ ಗಂಡನೊಂದಿಗೆ ಜೀವನ ನಡೆಸಲು ಹಿಂದೇಟು ಹಾಕಿದ್ದು, 22 ವರ್ಷದ ಸೋದರಳಿಯನೊಂದಿಗೆ ಪರಾರಿಯಾಗಿದ್ದಾಳೆ. ಇದರ ಬೆನ್ನಲ್ಲೇ ಅಪಹರಣ ಪ್ರಕರಣ ದಾಖಲಾಗಿದ್ದು, ಅಪ್ರಾಪ್ತೆಯನ್ನು ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅಪ್ರಾಪ್ತೆಯನ್ನು ಮಕ್ಕಳ ಕಲ್ಯಾಣ ಸಮಿತಿ ಸದಸ್ಯರ ಮುಂದೆ ಹಾಜರುಪಡಿಸಲಾಗಿದ್ದು, ಕೌನ್ಸೆಲಿಂಗ್ ನಡೆಸಿದ ಬಳಿಕ ಸಖಿ ಒನ್ ಸೆಂಟರ್ನಲ್ಲಿ ಇಡಲಾಗಿದೆ.
ಇದನ್ನೂ ಓದಿ: ವಿಡಿಯೋ: ಬಸ್ಸಿನಿಂದ ಇಳಿದು ರಸ್ತೆ ದಾಟುತ್ತಿದ್ದಾಗ ಟೈರ್ನಲ್ಲಿ ಸಿಲುಕಿ ಮಹಿಳೆ ಸಾವು
ಸದಸ್ಯರು ತಿಳಿಸಿರುವ ಪ್ರಕಾರ, ಬಾಲಕಿ ಮಧ್ಯಪ್ರದೇಶದ ನಿವಾಸಿಯಾಗಿದ್ದು, ಒಂದೂವರೆ ವರ್ಷದ ಹಿಂದೆ ಆಕೆಯ ಇಚ್ಛೆಗೆ ವಿರುದ್ಧವಾಗಿ 45 ವರ್ಷದ ವ್ಯಕ್ತಿ ಜೊತೆ ಮದುವೆ ಮಾಡಿಸಿದ್ದರು. ಇದಾದ ಬಳಿಕ ಹೆಣ್ಣು ಮಗುವಿನ ಜನನವಾಗಿತ್ತು. ಆತನೊಂದಿಗೆ ಜೀವನ ನಡೆಸಲು ಸಾಧ್ಯವಿಲ್ಲ ಎಂದಿರುವ ಬಾಲಕಿ ವಿಚ್ಛೇದನ ಪಡೆದುಕೊಳ್ಳಲು ಮುಂದಾಗಿದ್ದಾಳೆ. ಆದರೆ, ಈಗಾಗಲೇ ಮಗು ಹುಟ್ಟಿರುವ ಕಾರಣ ಆಕೆಯ ಮನವೊಲಿಕೆ ಕಾರ್ಯ ಮುಂದುವರೆದಿದೆ.