ಪುಣೆ(ಮಹಾರಾಷ್ಟ್ರ): ಭಗ್ನಪ್ರೇಮಿಯೋರ್ವ ನಡುರಸ್ತೆಯಲ್ಲೇ 14 ವರ್ಷದ ಅಪ್ರಾಪ್ತೆಯನ್ನ ಭೀಕರವಾಗಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದ್ದು, ಈಗಾಗಲೇ ಆರೋಪಿಯ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಂಗಳವಾರ ಸಂಜೆ ಈ ಘಟನೆ ನಡೆದಿದ್ದು, ಅಪ್ರಾಪ್ತೆ ತನ್ನ ಸ್ನೇಹಿತರೊಂದಿಗೆ ಕಬಡ್ಡಿ ಅಭ್ಯಾಸ ಮಾಡಲು ತೆರಳುತ್ತಿದ್ದಾಗ ಕೆಲವರೊಂದಿಗೆ ರಿಷಿಕೇಶ್ ಭಾಗ್ವತ್ ಎಂಬ ಯುವಕ ರಸ್ತೆ ಮಧ್ಯೆ ಆಕೆಯನ್ನ ತಡೆದು ಮಾತನಾಡಿಸಿದ್ದಾನೆ. ಈ ವೇಳೆ, ಇಬ್ಬರ ನಡುವೆ ಮಾತಿನ ವಾಗ್ವಾದ ನಡೆದಿದ್ದು, ತಕ್ಷಣವೇ ಕುತ್ತಿಗೆ ಭಾಗಕ್ಕೆ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದಾನೆ. ಪರಿಣಾಮ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಇದನ್ನೂ ಓದಿರಿ: T20 World cup : ವಿಶ್ವಕಪ್ಗಾಗಿ ಟೀಂ ಇಂಡಿಯಾ ಹೊಸ ಜೆರ್ಸಿ ಅನಾವರಣ
ಪೊಲೀಸರು ತಿಳಿಸಿರುವ ಮಾಹಿತಿ ಪ್ರಕಾರ, ಸಂತ್ರಸ್ತ ಬಾಲಕಿ, ಆತನನ್ನ ಪ್ರೀತಿಸುತ್ತಿರಲಿಲ್ವಂತೆ. ಆದರೆ, ರಿಷಿಕೇಶ್ ಮೇಲಿಂದ ಮೇಲೆ ಆಕೆಯ ಹಿಂದು ಬಿದ್ದು ಪ್ರೀತಿಸುವಂತೆ ಪೀಡಿಸುತ್ತಿದ್ದನು. ಈ ಹಿಂದೆ ಸಾಕಷ್ಟು ಬಾರಿ ಪ್ರೀತಿಸುವಂತೆ ಒತ್ತಾಯ ಸಹ ಮಾಡಿದ್ದನಂತೆ. ಆದರೂ ಆಕೆ ಒಪ್ಪದಿದ್ದರಿಂದ ಆಕ್ರೋಶಗೊಂಡು ಬಾಲಕಿ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಬಾಲಕಿ ಕುಟುಂಬಸ್ಥರು ಆರೋಪಿಸಿದ್ದಾರೆ.
ಇದನ್ನೂ ಓದಿರಿ: ಸ್ಥಳೀಯ ಚುನಾವಣೆಯಲ್ಲಿ ಗೆದ್ದ 90ರ ವೃದ್ಧೆ.. ಠೇವಣಿ ಕಳೆದುಕೊಂಡ ಎದುರಾಳಿಗಳು
ಆರೋಪಿ ಬಂಧನ ಮಾಡಿದ ಪೊಲೀಸರು: ಬಾಲಕಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಬಂಧನ ಮಾಡಲ ಪೊಲೀಸ್ ತಂಡ ರಚನೆ ಮಾಡಿ ಕಾರ್ಯಪ್ರವೃತ್ತರಾದ ಖಾಕಿ ಪಡೆ ಈಗಾಗಲೇ ಆತನ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಪುಣೆಯ ಡಿಸಿಪಿ ನಮ್ರತಾ ಪಾಟೀಲ್, ಆರೋಪಿಯನ್ನ ಬಂಧನ ಮಾಡಲಾಗಿದ್ದು, ಆತನ ಸ್ನೇಹಿತರಿಗಾಗಿ ಬಲೆ ಬೀಸಲಾಗಿದೆ ಎಂದಿದ್ದಾರೆ.