ETV Bharat / bharat

ಬಿಹಾರದಲ್ಲಿ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ.. ಸ್ನೇಹಿತನ ತಂದೆಯಿಂದಲೇ ಕೊಲೆ - ಬಿಹಾರದಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ, ಕೊಲೆ

ಸ್ನೇಹಿತನ ತಂದೆ ಮತ್ತು ಆತನ ಸಹಚರರಿಂದ ಬಾಲಕಿಯೊಬ್ಬಳು ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಘಟನೆ ಬಿಹಾರದ ಭೋಜ್​ಪುರದಲ್ಲಿ ನಡೆದಿದೆ.

gang raped
ಸಾಮೂಹಿಕ ಅತ್ಯಾಚಾರ
author img

By

Published : Mar 26, 2022, 9:59 PM IST

ಭೋಜ್‌ಪುರ(ಬಿಹಾರ): ಸ್ನೇಹಿತನ ತಂದೆ ಮತ್ತು ಆತನ ಸಹಚರರು ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಬಳಿಕ ಆಕೆಯನ್ನು ಹತ್ಯೆಗೈದು ಹೂತು ಹಾಕಿದ ಪೈಶಾಚಿಕ ಘಟನೆ ಬಿಹಾರದ ಭೋಜ್​ಪುರ್​ನಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಅಲ್ಲದೇ, ಘಟನೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಅಪ್ರಾಪ್ತ ವಯಸ್ಸಿನ ಬಾಲಕಿ ತನ್ನ ಸ್ನೇಹಿತನ ತಂದೆಯಿಂದಲೇ ಅತ್ಯಾಚಾರಕ್ಕೊಳಗಾಗಿ, ಕೊಲೆಯಾಗಿದ್ದಾಳೆ. ನಾಪತ್ತೆ ಪ್ರಕರಣ ದಾಖಲಾಗಿ ನಿರ್ಜನ ಪ್ರದೇಶದಲ್ಲಿ ಬಾಲಕಿಯ ಮೃತದೇಹ ಪತ್ತೆಯಾದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಘಟನೆ ಮಾರ್ಚ್​ 12 ರಂದು ನಡೆದಿದೆ ಎನ್ನಲಾಗ್ತಿದೆ. ತಮ್ಮ ಮಗಳು ನಾಪತ್ತೆಯಾಗಿದ್ದಾಳೆ ಎಂದು ಪೋಷಕರು ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ನಿರ್ಜನ ಪ್ರದೇಶದಲ್ಲಿ ಬಾಲಕಿಯ ಶವ ಹೂತು ಹಾಕಿರುವುದನ್ನು ಪತ್ತೆ ಮಾಡಿದ್ದಾರೆ.

ಆರೋಪಿ ಹೆಂಡತಿಯಿಂದಲೇ ಕೃತ್ಯ ಬಯಲಿಗೆ: ಅಪ್ರಾಪ್ತೆಯನ್ನು ಕೊಲೆ ಮಾಡಿದ ಬಗ್ಗೆ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಆರೋಪಿಯಾದ ಮುಸಾಹರ್​ ಎಂಬುವವನ ಪತ್ನಿಯೇ ಘಟನೆಯ ಬಗ್ಗೆ ಬಾಯ್ಬಿಟ್ಟಿದ್ದಾಳೆ. ತನ್ನ ಗಂಡ ಮತ್ತು ಆತನ ಸ್ನೇಹಿತರು ರಾತ್ರಿ ವೇಳೆ ಆ ಬಾಲಕಿಯನ್ನು ಕೋಣೆಗೆ ಎಳೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾರೆ. ಬಳಿಕ ಬಾಲಕಿಯನ್ನು ಕೊಂದು ಹೂತು ಹಾಕಿದ್ದಾರೆ ಎಂದು ಬಾಯ್ಬಿಟ್ಟಿದ್ದಾಳೆ.

ಓದಿ: ಬೆಂಗಳೂರಲ್ಲಿ ರೈಲಿಗೆ ತಲೆ ಕೊಟ್ಟು ಪ್ರೇಮಿಗಳು ಆತ್ಮಹತ್ಯೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.